ಸಿಬ್ಬಂದಿಗೆ ಕೊರೋನಾ: ನವಲಗುಂದ ಮಿನಿವಿಧಾನಸೌಧ ಸೀಲ್‌ಡೌನ್‌

By Kannadaprabha News  |  First Published Jul 14, 2020, 7:23 AM IST

ಮಿನಿವಿಧಾನಸೌಧದಲ್ಲಿ ಉತಾರ ನೀಡುವ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ಕೊರೋನಾ ದೃಢ| ಅವರ ಸಂಪರ್ಕಕ್ಕೆ ಬಂದಿದ್ದ ಮೂವರಿಗೆ ಹೋಂ ಕ್ವಾರಂಟೈನ್‌| ಕಟ್ಟಡವನ್ನು ಸ್ಯಾನಿಟೈಸ್‌ ಮಾಡಲಾಗಿದೆ| ಸಾರ್ವಜನಿಕರಿಗೆ ಸದ್ಯ ಮಿನಿವಿಧಾನಸೌಧಕ್ಕೆ ಪ್ರವೇಶವಿಲ್ಲ| ಕೊರೋನಾ ಪಾಸಿಟಿವ್‌ ಬಂದಿದ್ದರಿಂದ ವಿವಿಧ ಇಲಾಖೆಗಳ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ|


ನವಲಗುಂದ(ಜು.14):  ಪಟ್ಟಣ ಭೂಮಾಪನ ಇಲಾಖೆಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಮಿನಿವಿಧಾನಸೌಧವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತನ ಸಂಪರ್ಕಕ್ಕೆ ಬಂದ ಮೂವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮಿನಿವಿಧಾನಸೌಧದಲ್ಲಿ ಉತಾರ ನೀಡುವ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ. ಇದರಿಂದಾಗಿ ಅವರ ಸಂಪರ್ಕಕ್ಕೆ ಬಂದಿದ್ದ ಮೂವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಇದರೊಂದಿಗೆ ಮಿನಿವಿಧಾನಸೌಧದಲ್ಲಿನ ತಹಸೀಲ್ದಾರ್‌ ಕಚೇರಿ, ಸಬ್‌ ರಿಜಿಸ್ಟರ್‌, ಕಂದಾಯ ಕಚೇರಿ, ನೆಮ್ಮದಿ ಕೇಂದ್ರ, ಆರೋಗ್ಯ ಇಲಾಖೆ ಸೇರಿದಂತೆ ಹತ್ತಾರು ಇಲಾಖೆಗಳು ಇಲ್ಲಿವೆ. ಈ ಕಾರಣಕ್ಕಾಗಿ ಸದ್ಯ ಮಿನಿವಿಧಾನಸೌಧವನ್ನು ಸೀಲ್‌ಲೌನ್‌ ಮಾಡಲಾಗಿದೆ. 

Tap to resize

Latest Videos

ಕೊರೋನಾ ಅಟ್ಟಹಾಸ: ಜು. 15ರಿಂದ 10 ದಿನ ಧಾರವಾಡ ಜಿಲ್ಲೆ ಲಾಕ್‌ಡೌನ್‌

ಕಟ್ಟಡವನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಸಾರ್ವಜನಿಕರಿಗೆ ಸದ್ಯ ಮಿನಿವಿಧಾನಸೌಧಕ್ಕೆ ಪ್ರವೇಶವಿಲ್ಲ. ಕೊರೋನಾ ಪಾಸಿಟಿವ್‌ ಬಂದಿದ್ದರಿಂದ ವಿವಿಧ ಇಲಾಖೆಗಳ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.
 

click me!