ಹೊಸ ಮಾರ್ಗಸೂಚಿ, ಎಣ್ಣೆ ಸಿಗಲ್ಲ, ಪಾಸ್ ಬೇಕಿಲ್ಲ.. ಡೆಡ್ ಲೈನ್ ಬೇರೆ ಇದೆಯಲ್ಲ!

By Suvarna NewsFirst Published Jul 13, 2020, 9:28 PM IST
Highlights

ಮತ್ತೆ ಒಂದು ವಾರ ಲಾಕ್ ಡೌನ್/ ಕಳೆದ ಬಾರಿಯದ್ದಕ್ಕೂ ಈ ಬಾರಿಯದ್ದಕ್ಕೂ ಏನು ವ್ಯತ್ಯಾಸ/ ಪಾಸ್ ಪಡೆದುಕೊಳ್ಳುವ ಅಗತ್ಯ ಇಲ್ಲ/ ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿ

ಬೆಂಗಳೂರು(ಜು. 13) ಮಿತಿ ಮೀರಿದ ಕೊರೋನಾ ತಡಗೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಕಳೆದ ಸಾರಿಯ ಲಾಕ್ ಡೌನ್ ಗೂ ಈ ಬಾರಿಯ ಲಾಕ್ ಡೌನ್ ಗೂ ಎರಡು ಪ್ರಮುಖ ವ್ಯತ್ಯಾಸಗಳಿವೆ. ಇದನ್ನು ಎಲ್ಲರೂ ಗಮನಿಸಲೇಬೇಕು.

ಜುಲೈ 14 ರ ರಾತ್ರಿ ಎಂಟು ಗಂಟೆಯಿಂದ ಜುಲೈ  23ರ ಬೆಳಗ್ಗೆ ಐದರವೆಗೆ ಲಾಕ್ ಡೌನ್ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿ ಮಾಡಲಾಗುತ್ತಿದೆ. ಈ ನಡುವೆ ಎರಡು ಮಹತ್ವದ ಅಂಶಗಳನ್ನು ತಿಳಿಸಲಾಗಿದೆ.

* ಸಮಯ ನಿಗದಿ:  ಹಿಂದಿನ ಸಾರಿ ಲಾಕ್ ಡೌನ್ ಮಾಡಿದಾಗ ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಿರಲಿಲ್ಲ ಈ ಬಾರಿ ಸಮಯ ನಿಗದಿ ಮಾಡಲಾಗಿದೆ.  ಮುಂಜಾನೆ 5 ರಿಂದ ಮಧ್ಯಾಹ್ನ  12 ಗಂಟೆಯೊಳಗೆ ನಿಮಗೆ ಬೇಕಾದ ಅಗತ್ಯ ವಸ್ತು  ಖರೀದಿ ಮಾಡಿಕೊಳ್ಳಬೇಕು. ನಂತರ ಅವಕಾಶ ಇಲ್ಲ.

ಮತ್ತೆ ಲಾಕ್ ಡೌನ್ ; ಏನಿರುತ್ತೆ? ಏನಿರಲ್ಲ?

* ಪಾಸ ವಿತರಣೆ: ಕಳೆದ ಬಾರಿ ತುರ್ತು ಓಡಾಡ ಅಗತ್ಯವಿರುವವರಿಗೆ ಪಾಸ್ ನೀಡುವ ಕೆಲಸ ಮಾಡಲಾಗಿತ್ತು. ಆದರೆ ಈ ಸಾರಿ ಪಾಸ್ ಗಳನ್ನು ನೀಡಲಾಗುತ್ತಿಲ್ಲ. ಟಿಕೆಟ್, ಹಾಲ್ ಟಿಕೆಟ್, ಸಂಸ್ಥೆಯ ಐಡಿ ಇಂಥವುಗಳನ್ನೇ ಪಾಸ್ ಎಂದು ಪರಿಗಣಿಸಲಾಗುತ್ತದೆ. ಬೆಂಗಳೂರಿನಿಂದ ಹೊರಗೆ ಅನಿವಾರ್ಯವಾಗಿ ಪಯಣಿಸಬೇಕಾದವರು ಸೇವಾ ಸಿಂಧು ಮೂಲಕ ಪಾಸ್ ಪಡೆದುಕೊಳ್ಳಬೇಕಾಗುತ್ತದೆ. 

ಮದ್ಯ ಮಾರಾಟ ಸಹ ಬಂದ್ ಆಗಲಿದೆ. ಲಾಕ್ ಡೌನ್ ಕಾರಣಕ್ಕೆ ಸುಮಾರು ನಲವತ್ತು ದಿನ ಮದ್ಯದಂಗಡಿ ಬಂದ್ ಮಾಡಲಾಗಿತ್ತು. ಈಗ ಮತ್ತೆ ಮದ್ಯಪ್ರಿಯರಿಗೆ ಆಘಾತ ಎದುರಾಗಿದ್ದು ಬೆಂಗಳೂರಿನ ಮದ್ಯದಂಗಡಿಗಳ ಮುಂದೆ ಸರತಿ ಸಾಲು ಕಂಡುಬಂತು.

ರಾಜ್ಯ ಸರ್ಕಾರ ಮತ್ತೊಮ್ಮೆ ದಿಟ್ಟ ಕ್ರಮ ತೆಗೆದುಕೊಂಡಿದ್ದು ಲಾಕ್ ಡೌನ್ ಘೋಷಣೆ ಮಾಡಿದೆ. ನಾಗರಿಕರು ಸರಿಯಾದ ಸಹಕಾರ ನೀಡಿದಲ್ಲಿ ಮಾತ್ರ ಲಾಕ್ ಡೌನ್ ಯಶಸ್ವಿಯಾಗಿ ಕೊರೋನಾ ನಮ್ಮಿಂದ ದೂರವಾಗಲು ಸಾಧ್ಯ. 

click me!