ಹೊಸ ವರ್ಷದ ಆರಂಭದಲ್ಲೇ ಹಾಲು ಉತ್ಪಾದಕರಿಗೆ ಬಂಪರ್..! ದರ ಹೆಚ್ಚಳ

By Kannadaprabha NewsFirst Published Jan 4, 2020, 8:26 AM IST
Highlights

ವರ್ಷದ ಆರಂಭದಲ್ಲೇ ಹಾಲು ಉತ್ಪಾದಕರಿಗೆ ಸಂತಸದ ಸುದ್ದಿ ಸಿಕ್ಕಿದೆ. ಹೊಸ ವರ್ಷದ ಕೊಡುಗೆಯಾಗಿ ಹಾಲಿನ ಬೆಲೆ ಏರಿಸಲಾಗಿದೆ. ಏನು..? ಎಷ್ಟು..? ಯಾವಾಗಿನಿಂದ.? ಇಲ್ಲಿ ಓದಿ.

ತುಮಕೂರು(ಜ.04): ಕೊರಟಗೆರೆ ತಾಲೂಕು ಹಾಲು ಒಕ್ಕೂಟದ ಉತ್ಪದಾಕರಿಗೆ ಹೊಸ ವರ್ಷದ ಕೊಡುಗೆಯಾಗಿ ಲೀಟರ್‌ ಹಾಲಿಗೆ 1.50 ರು. ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಹಾಲು ಒಕ್ಕೂಟದ ನಿರ್ದೇಶಕ ಈಶ್ವರಯ್ಯ ತಿಳಿಸಿದ್ದಾರೆ.

ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿ, ತಾಲೂಕಿನ ಎಲ್ಲ ಹಾಲು ಉತ್ಪಾದಕರು ಕೊಡುಗೆ ವಿತರಣೆ ಹಾಗೂ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ.

ಹೊಸ ವರ್ಷಕ್ಕೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್

ಹಾಲು ಉತ್ಪಾದಕರಿಗೆ ಹೊಸ ವರ್ಷದ ಕೊಡುಗೆಯಾಗಿ ಲೀಟರ್‌ ಹಾಲಿಗೆ 1.50 ರು. ಹೆಚ್ಚು ಬೆಲೆ ನೀಡಲಾಗಿದ್ದು, ಹಾಲು ಉತ್ಪಾದಕರಿಗೆ ಲಾಭದಾಯಕವಾಗಿದ್ದು, ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರು ಡೈರಿಗಳಿಗೆ ಉತ್ತಮ ಗುಣಮಟ್ಟದ ಹಾಲು ನೀಡಬೇಕು.

ಸಂಘದ ಅಭಿವೃದ್ಧಿಗೆ ಗಮನಹರಿಸಿ:

ಮುಂದಿನ ದಿನಗಳಲ್ಲೂ ಒಕ್ಕೂಟಕ್ಕೆ ಬರುವ ಲಾಭಾಂಶದಲ್ಲಿ ರೈತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು ಹಾಗೂ ಹಾಲು ಒಕ್ಕೂಟಗಳ ಮೇಲ್ವಿಚಾರಕರು ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ನಡೆಯುವ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಮಾರ್ಗದರ್ಶನ ನೀಡುವ ಮೂಲಕ ಹಾಲು ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.

ರಾಸುಗಳಿಗೆ ವಿಮೆ:

ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ರಾಮಯ್ಯ ಮಾತನಾಡಿ, ಹಾಲು ಉತ್ಪಾದಕ ಸಂಘಗಳು ಉತ್ತಮ ರೀತಿ ಕಾರ್ಯನಿರ್ವಹಿಸುವ ಲಾಭಂಶ ಪಡೆಯುವ ಮೂಲಕ ಉತ್ಪಾದಕರಿಗೆ ನೆರವಾಗಿದ್ದು, ಒಕ್ಕೂಟದ ಮೂಲ ರೈತರಿಗೆ ಸೌಕರ್ಯ ಹಾಗೂ ರಾಸುಗಳಿಗೆ ವಿಮೆ ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಯೋಜನೆ ರೂಪಿಸಿದೆ ಎಂದಿದ್ದಾರೆ.

ಜ.1 ಕ್ಕೆ ಭಾರತದಲ್ಲಿ 67385 ಮಕ್ಕಳ ಜನನ: ವಿಶ್ವದಲ್ಲೇ ನಂ.1

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ರೈತರು ಮಾತನಾಡಿ, ಡೈರಿಗಳಲ್ಲಿ ಸಂಗ್ರಹಿಸುವ ಹಾಲು ಉತ್ತಮ ಗುಣಮಟ್ಟದ ಹಾಲು ಸಂಗ್ರಹಿಸುವ ಕಡೆ ಹೆಚ್ಚು ಗಮನ ಹರಿಸಬೇಕು, ತಾಲೂಕಿನಲ್ಲಿ ಹೆಚ್ಚು ಮಂದಿ ಪಶುವೈದ್ಯರ ನೇಮಕ ಮಾಡಬೇಕು ಹಾಗೂ ಉತ್ತಮ ಗುಣಮಟ್ಟದ ಪಶು ಆಹಾರ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದ್ದಾರೆ

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ವೈದ್ಯಾಧಿಕಾರಿ ಡಾ. ಶ್ರುತಿ, ಅಧಿಕಾರಿ ರಂಜಿತ್‌, ವಿಸ್ತರಣಾಧಿಕಾರಿಗಳಾದ ಗಿರೀಶ್‌, ಪುಪ್ಪಲತಾ, ಬಿ. ಆಯಿಷಾ, ಜಗನ್ನಾಥ್‌, ಗೌಡ, ಡೈರಿ ಸೂರಿ, ರಾಜೇಂದ್ರ ಪ್ರಸಾದ್‌ ಇದ್ದರು.

click me!