ಮಂಗಳೂರಿನಿಂದ ಹೊಸದುರ್ಗಕ್ಕೆ ಬಂದ ಕಾರ್ಮಿಕರು: ರೈಲು ಹಳಿಯಲ್ಲಿ ಕಾಲ್ನಡಿಗೆ

Kannadaprabha News   | Asianet News
Published : Apr 29, 2020, 10:11 AM IST
ಮಂಗಳೂರಿನಿಂದ ಹೊಸದುರ್ಗಕ್ಕೆ ಬಂದ ಕಾರ್ಮಿಕರು: ರೈಲು ಹಳಿಯಲ್ಲಿ ಕಾಲ್ನಡಿಗೆ

ಸಾರಾಂಶ

ಮಧ್ಯಪ್ರದೇಶ ಮೂಲದ 9 ಜನ ಕೂಲಿ ಕಾರ್ಮಿಕರು ಮಂಗಳೂರಿನಲ್ಲಿ ರೈಲ್ವೆ ಮಾರ್ಗವಾಗಿ ಹಳಿಗಳ ಮೇಲೆಯೇ ನಡೆದುಕೊಂಡು ಹೊಸದುರ್ಗ ತಾಲೂಕಿನ ಬಾಗೂರಿಗೆ ಆಗಮಿಸಿದ್ದು, ಇದರಿಂದಾಗಿ ತಾಲೂಕಿನ ಜನರಲ್ಲಿ ಆತಂಕ ವ್ಯಕ್ತವಾಗಿದೆ. ಜೊತೆಗೆ ತಾಲೂಕು ಆಡಳಿತದ ನಿರ್ಲಕ್ಷ್ಯಕ್ಕೂ ಅಸಮಾಧಾನ ವ್ಯಕ್ತವಾಗಿದೆ.  

ಹೊಸದುರ್ಗ(ಏ.29): ಮಧ್ಯಪ್ರದೇಶ ಮೂಲದ 9 ಜನ ಕೂಲಿ ಕಾರ್ಮಿಕರು ಮಂಗಳೂರಿನಲ್ಲಿ ರೈಲ್ವೆ ಮಾರ್ಗವಾಗಿ ಹಳಿಗಳ ಮೇಲೆಯೇ ನಡೆದುಕೊಂಡು ಹೊಸದುರ್ಗ ತಾಲೂಕಿನ ಬಾಗೂರಿಗೆ ಆಗಮಿಸಿದ್ದು, ಇದರಿಂದಾಗಿ ತಾಲೂಕಿನ ಜನರಲ್ಲಿ ಆತಂಕ ವ್ಯಕ್ತವಾಗಿದೆ. ಜೊತೆಗೆ ತಾಲೂಕು ಆಡಳಿತದ ನಿರ್ಲಕ್ಷ್ಯಕ್ಕೂ ಅಸಮಾಧಾನ ವ್ಯಕ್ತವಾಗಿದೆ.

ಕೂಲಿ ಕಾರ್ಮಿಕರು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಿಂದ ಮಂಗಳೂರಿಗೆ ಕೆಲಸಕ್ಕೆಂದು ಬಂದಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರಿಗೆ ಕೆಲಸವಿಲ್ಲದಂತಾಗಿ, ಊಟಕ್ಕೂ ಸಮಸ್ಯೆಯಾದ್ದರಿಂದ ಕಾಲ್ನಡೆಗೆಯಲ್ಲಿಯೇ ರೈಲ್ವೆ ಮಾರ್ಗದ ಮೂಲಕ ನಡೆದು ಬಂದಿದ್ದಾರೆ ಎನ್ನಲಾಗಿದೆ.

ಈರುಳ್ಳಿ ನೀವೇ ಕೊಂಡುಕೊಳ್ಳಿ ಎಂದ ಮಹಿಳೆ: ತಕ್ಷಣ ಸ್ಪಂದಿಸಿದ ಸಿಎಂ

ಸೋಮವಾರವೇ ಹೊಸದುರ್ಗ ಗಡಿಯಲ್ಲಿ ಕಾಣಿಸಿಕೊಂಡಿದ್ದ ಅವರನ್ನು ವಾಪಸ್‌ ಕಳಿಸಲಾಗಿತ್ತು ಎನ್ನಲಾಗಿದ್ದು, ಪುನಃ ಬೆಳಗ್ಗೆ ಸಾಣೇಹಳ್ಳಿ ಮುಖಾಂತರ ಬಾಗೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಥಳೀಯರು ಅವರನ್ನು ಗ್ರಾಮದ ಹೊರವಲಯದಲ್ಲಿ ತಡೆದು ತಾಲೂಕು ಆಡಳಿತಕ್ಕೆ ತಿಳಿಸಿದ್ದಾರೆ.

ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಖಂಡನೆ:

ಮಧ್ಯಪ್ರದೇಶದ ಕೂಲಿ ಕಾರ್ಮಿಕರು ಬಾಗೂರು ಗ್ರಾಮಕ್ಕೆ ಬಂದಿರುವ ಬಗ್ಗೆ ಬೆಳಗ್ಗೆಯೇ ತಹಸೀಲ್ದಾರ್‌ ಅವರಿಗೆ ಮಾಹಿತಿ ನೀಡಿದರೂ, ಮಧ್ಯಾಹ್ನವಾದರೂ ಅಲ್ಲಿಗೆ ಯಾವೊಬ್ಬ ಅಧಿಕಾರಿಯೂ ಬಾರದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ತಾಲೂಕು ಆಡಳಿತದ ಕಾರ್ಯ ವೈಖರಿ ಬಗ್ಗೆ ಅಸಮಾಧಾನದ ಮಾತುಗಳು ಹೊರಬಿದ್ದಾಗ ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಆರೋಗ್ಯವಾಗಿದ್ದಾರೆ ಪಿಎಸ್‌ಐ ಸ್ಪಷ್ಟನೆ:

ಕೂಲಿ ಕಾರ್ಮಿಕರು ಸೋಮವಾರ ಗಡಿಯಲ್ಲೇ ಸಿಕ್ಕಿದ್ದರು. ಅವರಿಗೆ ಆರೋಗ್ಯ ತಪಾಸಣೆ ಮಾಡಿಸಿ ವಾಪಸ್‌ ಮಂಗಳೂರಿಗೆ ಕಳಿಸಲು ತಾಲೂಕು ಆಡಳಿತದೊಂದಿಗೆ ಮಾತನಾಡಿದ್ದು ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೊಸದುರ್ಗ ಠಾಣೆ ಪಿಎಸ್‌ಐ ಶಿವಕುಮಾರ್‌ ತಿಳಿಸಿದ್ದಾರೆ.

ಮಲೇಷ್ಯಾದಲ್ಲಿ ಮಂಗಳೂರು ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ

ಮಧ್ಯಪ್ರದೇಶದ ಕೂಲಿ ಕಾರ್ಮಿಕರು ಮಂಗಳೂರಿನಿಂದ ಬಂದಿದ್ದು, ಅವರನ್ನು ನಮ್ಮ ತಾಲೂಕಿನಲ್ಲಿ ಇಟ್ಟುಕೊಳ್ಳಲು ಬರುವುದಿಲ್ಲ. ಹಾಗಾಗಿ, ಮಂಗಳೂರಿನ ತಹಸೀಲ್ದಾರ್‌ ಅವರೊಂದಿಗೆ ಮಾತನಾಡಿ, ಪುನಃ ಅವರನ್ನು ಮಂಗಳೂರಿಗೆ ಕಳಿಸಲಾಗುತ್ತದೆ ಎಂದು ಹೊಸದುರ್ಗ ತಹಸೀಲ್ದಾರ್ ತಿಪ್ಪೆಸ್ವಾಮಿ ತಿಳಿಸಿದ್ದಾರೆ.

ಹೊಸದುರ್ಗ ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಮದ್ಯಪ್ರದೇಶ ಮೂಲದ ಕೂಲಿ ಕಾರ್ಮಿಕರು ಅಡ್ಡಾಡುತ್ತಿರುವ ಬಗ್ಗೆ ತಾಲೂಕು ಆಡಳಿತಕ್ಕೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ನಾವು ಹಸಿರು ವಲಯದಲ್ಲಿದ್ದೇವೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಇಂತಹ ಉದಾಸೀನತೆ ನಮ್ಮನ್ನು ರೆಡ್‌ಜೋನ್‌ಗೆ ಕರೆದೊಯ್ಯುತ್ತದೆ ಎಂದು ಬಾಗೂರು ನಿವಾಸಿ ಹರೀಶ್‌ ತಿಳಿಸಿದ್ದಾರೆ.

PREV
click me!

Recommended Stories

Breaking: ವಿಜಯಪುರದಲ್ಲಿ ಐದು ಖಾಸಗಿ ಬಸ್‌ಗಳ ಸರಣಿ ಅಪಘಾತ; ತಪ್ಪಿದ ಅನಾಹುತ!
ಬೆಂಗಳೂರಿಗರಿಗೆ ಗುಡ್‌ನ್ಯೂಸ್: ಹೊಸ ಮೆಟ್ರೋ ಪಿಂಕ್ ಲೈನ್ ಟ್ರಯಲ್ ರನ್ ಶುರು: ಮುಗಿಯಲಿದೆ ಟ್ರಾಫಿಕ್ ಗೋಳು!