ಎರಡು ಕ್ಲಿನಿಕ್‌ಗಳ ಮೇಲೆ ದಾಳಿ| ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ಇಬ್ಬರು ನಕಲಿ ವೈದ್ಯರ ವಶಕ್ಕೆ| ಕ್ಲಿನಿಕ್‌ಗಳಲ್ಲಿ ಬಳಸುತ್ತಿದ್ದ ವೈದ್ಯಕೀಯ ಸಾಮಾನು ಜಪ್ತಿ| ಕೇವಲ ಪಿಯುಸಿ ವ್ಯಾಸಂಗ ಮಾತ್ರ ಮಾಡಿದ್ದರೂ ಕೆಲ ನಕಲಿ ದಾಖಲೆ ಸೃಷ್ಟಿಸಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರು|
ಕೊಟ್ಟೂರು(ಏ.29): ಕೊಟ್ಟೂರು ಪಟ್ಟಣದಲ್ಲಿ ನಕಲಿ ವೈದ್ಯರು ಆಸ್ಪತ್ರೆ ನಡೆಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಇಲ್ಲಿನ ಎರಡು ಕ್ಲಿನಿಕ್‌ಗಳ ಮೇಲೆ ಮಂಗಳವಾರ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಗಾಂಧಿ ವೃತ್ತದ ಬಳಿಯ ಜಗದೀಶ, ರೇಣುಕ ಚಿತ್ರಮಂದಿರದ ಹೊಟೇಲೊಂದರ ಕಟ್ಟಡದಲ್ಲಿದ್ದ ಷಣ್ಮುಖಪ್ಪ ಎಂಬ ವೈದ್ಯರನ್ನು ಈ ಸಂಬಂಧ ಬಂಧಿಸಿ ಅವರ ಕ್ಲಿನಿಕ್‌ಗಳಲ್ಲಿ ಬಳಸುತ್ತಿದ್ದ ವೈದ್ಯಕೀಯ ಸಾಮಾನುಗಳನ್ನು ಜಪ್ತಿ ಮಾಡಿದರು.
ಲಾಕ್‌ಡೌನ್ ಮಧ್ಯೆಯೂ ಕೊಟ್ಟೂರೇಶ್ವರನಿಗೆ ಪೂಜೆ ಸಲ್ಲಿಸಿದ ಶಾಸಕ ಪೂಜಾರ್..!
ಈ ನಕಲಿ ವೈದ್ಯರು ಕೇವಲ ಪಿಯುಸಿ ವ್ಯಾಸಂಗ ಮಾತ್ರ ಮಾಡಿದ್ದರೂ ಕೆಲ ನಕಲಿ ದಾಖಲೆಗಳನ್ನು ಇರಿಸಿಕೊಂಡು ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರು ಎಂದು ಇತ್ತೀಚಿಗೆ ತಹಸೀಲ್ದಾರರಿಗೆ ಕೊಟ್ಟೂರು ತಾಲೂಕಿನ ಪದವೀಧರ ವೈದ್ಯರ ಸಂಘದ ಪದಾಧಿಕಾರಿಗಳು ದೂರು ಸಲ್ಲಿಸಿದ್ದರು.
ತಹಸೀಲ್ದಾರರೊಂದಿಗೆ ಟಿಎಚ್‌ಒ ಡಾ. ಷಣ್ಮುಖ ನಾಯ್ಕ, ಡಾ. ಪೃಥ್ವಿ, ಪಟ್ಟಣ ಪಂಚಾಯಿತಿ ಎಚ್.ಎಫ್.ಬಿದರಿ, ಪಿಎಸ್‌ಐ ಎ. ಕಾಳಿಂಗ ದಾಳಿ ತಂಡದಲ್ಲಿದ್ದರು.