ಈರುಳ್ಳಿ ನೀವೇ ಕೊಂಡುಕೊಳ್ಳಿ ಎಂದ ಮಹಿಳೆ: ತಕ್ಷಣ ಸ್ಪಂದಿಸಿದ ಸಿಎಂ

By Kannadaprabha News  |  First Published Apr 29, 2020, 9:56 AM IST

ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.


ಚಿತ್ರದುರ್ಗ(ಏ.29): ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ವಸಂತಕುಮಾರಿ ಎಂಬ ರೈತ ಮಹಿಳೆ ತಾನು ಈರುಳ್ಳಿ ಬೆಳೆದ ಪರಿ, ಮಾಡಲಾದ ಖರ್ಚು, ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಕರಿಯಾಗುವ ಸಂಗತಿಗಳ ಕ್ರೋಢೀಕರಿಸಿ ವಿಡಿಯೋವೊಂದನ್ನು ಮಾಡಿ ಜಾಲತಾಣಕ್ಕೆ ಹರಿಯಬಿಟ್ಟಿದ್ದಾಳೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೋಡುವವರೆಗೆ ಶೇರ್‌ ಮಾಡಿ ಎಂದು ಮನವಿ ಮಾಡಿದ್ದಾಳೆ.

Tap to resize

Latest Videos

ಮಲೇಷ್ಯಾದಲ್ಲಿ ಮಂಗಳೂರು ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ

ಇಡೀ ದೇಶವೇ ಲಾಕ್‌ಡೌನ್‌ ಆಗಿದ್ದರೂ, ರೈತ ಮಾತ್ರ ಲಾಕ್‌ಡೌನ್‌ ಆಗದೆ, ಉತ್ಪಾದನೆಯಲ್ಲಿ ತೊಡಗಿದ್ದಾನೆ. ದೇಶದ ಪ್ರಧಾನಿ, ಸೈನಿಕರು, ವೈದ್ಯರು ಎಲ್ಲರೂ ಅವನು ಬೆಳೆದ ಬೆಳೆಯನ್ನೇ ತಿನ್ನುತ್ತಿದ್ದಾರೆ. ಒಂದು ಚೀಲ ಈರುಳ್ಳಿಯನ್ನು 250ರಿಂದ 300 ರುಪಾಯಿಗೆ ಖರೀದಿ ಮಾಡುತ್ತಿದ್ದು, ಉತ್ಪಾದನಾ ವೆಚ್ಚ ಸರಿದೂಗುತ್ತಿಲ್ಲ. ಸಾವಿರದ ಐದು ನೂರು ರುಪಾಯಿಗೆ ಒಂದು ಕೆ.ಜಿ.ಯಂತೆ ಈರುಳ್ಳಿ ಬೀಜ ತಂದು, ಬಿತ್ತನೆ ಮಾಡಿ, ಹತ್ತಾರು ಸಾವಿರ ರುಪಾಯಿ ರಸಗೊಬ್ಬರ ಸುರಿದು, ಮೂರ್ರಾಲ್ಕು ಬಾರಿ ಕಳೆ ತೆಗೆದು, ಅದನ್ನು ಕೀಳಿಸಿ, ನಂತರ ಹೆಚ್ಚಿಸಿ ಚೀಲಕ್ಕೆ ತುಂಬುವಷ್ಟರಲ್ಲಿ ಒಂದು ಚೀಲಕ್ಕೆ ಐದು ನೂರು ರೂಪಾಯಿಗೂ ಹೆಚ್ಚು ಖರ್ಚು ಬರುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಚೀಲಕ್ಕೆ 300 ರುಪಾಯಿ ಕೇಳಿದರೆ ಹೇಗೆ? ಮಾಡಿದ ಖರ್ಚು ಬರುತ್ತಿಲ್ಲವೆಂದು ಪಕ್ಕಾ ಕ್ಯಾಲಿಕ್ಯುಲೇಟಿವ್‌ ಆಗಿ ವಿಡಿಯೋದಲ್ಲಿ ವಾಂಶವಾಂಶವನ್ನು ಬಿಚ್ಚಿಟ್ಟಿದ್ದಾಳೆ.

ತಬ್ಲಿಘಿ ಘಟನೆ ಪೋಸ್ಟ್ ಹಾಕಿದರವ್ರನ್ನ ಕೆಲಸದಿಂದ ಕಿತ್ತು ಹಾಕಿದ ಕೊಲ್ಲಿ ರಾಷ್ಟ್ರ

ವಿಡಿಯೋ ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಕ್ಷಣ ಅಧಿಕಾರಿಗಳ ಮೂಲಕ ಆಕೆಯ ಸಂಪರ್ಕಿಸಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ನಿಮ್ಮ ಸಂಕಷ್ಟಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಂತರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಈರುಳ್ಳಿಗೆ ಮಾರುಕಟ್ಟೆಒದಗಿಸುವಂತೆ ಸೂಚಿಸಿದ್ದಾರೆ. ತೊಂದರೆಗೆ ಒಳಗಾದ ಇತರ ರೈತರ ಪರಿಸ್ಥಿತಿಯನ್ನೂ ಗಮನಿಸುವಂತೆ ನಿರ್ದೇಶಿಸಿದ್ದಾರೆ.

ಅಧಿಕಾರಿಗಳ ಭೇಟಿ:

ಸಿಎಂ ಸೂಚನೆ ಮೇರೆಗೆ ತೊಟಗಾರಿಕೆ ಇಲಾಖೆ ನಿರ್ದೇಶಕಿ ಡಾ.ಸವಿತಾ ಇಲಾಖೆಯ ಇತರೆ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ರೈತ ಮಹಿಳೆ ವಸಂತಕುಮಾರಿ ಅವರ ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ. ತಕ್ಷಣವೇ ಈರುಳ್ಳಿ ವ್ಯಾಪಾರಿಯೊಬ್ಬರನ್ನು ಸಂಪರ್ಕಿಸಿ ಖರೀದಿಗೆ ವ್ಯವಸ್ಥೆ ಮಾಡಿದ್ದಾರೆ. ಉತ್ತಮ ಬೆಲೆ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.

click me!