
ಕೋಲಾರ(ಏ.18): ಕೊರೋನಾ ವೈರಸ್ ತಡೆಯಲು ಭಾರತ್ ಲಾಕ್‌ಡೌನ್ ಆಗಿ ಜನರು ಹೊರಗೆ ಬರದಂತೆ ಸರ್ಕಾರ ನಿಬಂರ್‍ಧಿಸಿದೆ. ಆದರೆ ಇಲ್ಲಿ ಕಳೆದ 22 ದಿನಗಳಿಂದ 15ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಆಹಾರ ಸಿಗದೇ ಉಪವಾಸದಿಂದ ವಾಸಿಸುವಂತಾಗಿದೆ ಎಂದು ನಿರ್ಗತಿಕ ಕೂಲಿ ಕಾರ್ಮಿಕರು ಅಳಲು ತೋಡಿಕೊಂಡ ಘಟನೆ ನಡೆಯಿತು.
ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗಾ ಹೋಬಳಿ ಕೆ.ರಾಗುಟ್ಟಹಳ್ಳಿ ಶಿಂಗರೇಪಲ್ಲಿ ಮಜರಾ ಲಕ್ಷ್ಮೇನರಸಿಂಹಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ನೆಲೆಸಿರುವ ನೆರೆಯ ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ ಗಡಿ ಪ್ರದೇಶದ ಗ್ರಾಮಸ್ಥರು ವಲಸೆ ಬಂದು ಸ್ಥಳೀಯ ಗ್ರಾಮಗಳಲ್ಲಿ ದಿನ ಕೂಲಿ ಮಾಡಿ ಕುಟುಂಬ ಪೋಷಿಸಿಕೊಳ್ಳುತ್ತಿದ್ದರು. ಪ್ರಸ್ತುತ ಮಾರಕ ಕೊರೋನಾ ಎದುರಾಗಿ ಆಹಾರ ಸಿಗದೇ ಮನೆ ಮಂದಿಯೆಲ್ಲಾ ಉಪವಾಸ ಇರುವಂತಾಗಿದೆ ಎಂದು ನಿರ್ಗತಿಕರ ಕುಟುಂಬ ಯಜಮಾನ ದಾಸಪ್ಪ ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.
ಲಾಕ್‌ಡೌನ್ ಮಧ್ಯೆ ಯುವಕರ ಮೋಜು, ಮಸ್ತಿಗೇನು ಕಮ್ಮಿಯಿಲ್ಲ..!
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಗಳಲ್ಲಿ ಕೆಲಸ ಕಾರ್ಯಗಳು ಮೊಟಕುಗೊಳಿಸಿದ್ದು, ಹೊರಗಿನ ಜನರನ್ನು ಗ್ರಾಮಕ್ಕೆ ಬರದಂತೆ ನಿಷೇಧಿಸಿದ್ದಾರೆ. ಇಲ್ಲಿ ವಲಸೆ ಬಂದು ದಿನ ಕೂಲಿ ಮಾಡಿ ಕುಟುಂಬ ಪೋಷಿಸಿಕೊಳ್ಳುತ್ತಿದ್ದ ನಿರ್ಗತಿಕ ದಾಸಪ್ಪ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಯಾವುದೇ ನೆರವು ಸಿಕ್ಕಿಲ್ಲ. ಚಿಕ್ಕಮಕ್ಕಳಿಗೂ ಅಹಾರ ಸಿಗದೇ ಉಪವಾಸದಿಂದ ವಾಸವಾಗಿದ್ದಾರೆ ಎಂದು ಕೋಟಗಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಕೊರೋನಾ ಸೋಂಕು ತಡೆಯಲು ಸರ್ಕಾರ ರ್ನಿಗತಿಕರ ಕೇಂದ್ರ ತೆರೆದಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭಿಕ್ಷೆ ಬೇಡಿ ಜೀವಿಸುವರಿಗೆ ದಾನಿಗಳು ತಿಂಡಿ, ಊಟ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿನ ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್ ದಾನಿಗಳು ದಾನ ಮಾಡುವ ಸಾಮಗ್ರಿಗಳ ಪ್ರಚಾರ ಮಾಡುವ ಮಾಧ್ಯಮದವರ ಮುಂದೆ ಹೇಳಿಕೆ ಕೊಡುವುದು ಬಿಟ್ಟರೆ ಸರ್ಕಾರದಿಂದ ಬಡವರಿಗೆ ಬರುವ ಸೌಲಭ್ಯ ದೊರಕಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ಅವರಿಗೆ ಬಂಡವಾಳ ಮಾಡಿಕೊಳ್ಳುವ ಜ್ಞಾನ ಇದೆ. ಬಡವರ ಬಗ್ಗೆ ಕಾಳಜಿ ಇಲ್ಲವೆಂದು ಅವರು ಆರೋಪಿಸಿದರು.
ಆಹಾರ ಕಿಟ್‌ಗಳಲ್ಲಿ ಮೋದಿ, ಬಿಎಸ್‌ವೈ ಭಾವಚಿತ್ರ ಬಳಕೆ ಬಿಜೆಪಿ ಆಕ್ಷೇಪ
ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಆಗಿದ್ದು ಇಲ್ಲಿನ ವಲಸೆ ರ್ನಿಗತಿಕರ , ಕೂಲಿ ಕಾರ್ಮಿಕರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಡ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಬೇಕೆಂದು ವಲಸೆ ರ್ನಿಗತಿಕ ಕೂಲಿ ಕಾರ್ಮಿಕರು ಕನ್ನಡಪ್ರಭಕ್ಕೆ ಕೈಮುಗಿದು ಬೇಡಿಕೊಂಡರು.
ಲಾಕ್‌ಡೌನ್: ಕೃಷಿಯಲ್ಲಿ ಮಾಜಿ ಸ್ಪೀಕರ್ ಬ್ಯುಸಿ, ಕುರಿ ಸಾಕಾಣಿಕೆಗೂ ಸೈ
ವಲಸೆ ರ್ನಿಗತಿಕರ ಕೂಲಿ ಕಾರ್ಮಿಕರು ನೆಲೆಸಿರುವ ಸ್ಥಳಕ್ಕೆ ಬೇಟಿಕೊಟ್ಟು ಪರಿಶೀಲನೆ ನಡೆಸಿ ಅವರಿಗೆಲ್ಲಾ ರ್ನಿಗತಿಕರ ಕೇಂದ್ರದ ಹಾಸ್ಟೆಲ್‌ನಲ್ಲಿ ಊಟದ ವ್ಯವಸ್ಥೆ ಮಾಡಿಸುತ್ತೇನೆ ಎಂದು ಅಂಬಾಜಿ ದುರ್ಗಾ ಹೋಬಳಿ ಕಂದಾಯ ನಿರೀಕ್ಷಕ ಗುರುಪ್ರಕಾಶ್ ತಿಳಿಸಿದ್ದಾರೆ.