ಮಡಿಕೇರಿಯಲ್ಲಿ ಮಿಗ್ ಯುದ್ಧ ವಿಮಾನ..!

Kannadaprabha News   | Asianet News
Published : Jan 12, 2020, 02:20 PM IST
ಮಡಿಕೇರಿಯಲ್ಲಿ ಮಿಗ್ ಯುದ್ಧ ವಿಮಾನ..!

ಸಾರಾಂಶ

ಜನರಲ್‌ ತಿಮ್ಮಯ್ಯ ಮ್ಯೂಸಿಯಂಗೆ ಮಿಗ್‌- 20 ಯುದ್ಧ ವಿಮಾನ ಆಗಮಿಸಿದೆ. ಏರ್‌ ಮಾರ್ಷಲ್‌ ನಂದಾ ಕಾರ್ಯಪ್ಪ ಪ್ರಯತ್ನದ ಫಲವಾಗಿ ಇಂಡಿಯನ್‌ ಏರ್‌ ಫೋರ್ಸ್‌ ಉಚಿತವಾಗಿ ಯುದ್ಧ ವಿಮಾನವನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ.

ಮಡಿಕೇರಿ(ಜ.12): ನಗರದಲ್ಲಿ ನಿರ್ಮಾಣವಾಗುತ್ತಿರುವ ಜನರಲ್‌ ತಿಮ್ಮಯ್ಯ ಮ್ಯೂಸಿಯಂಗೆ ಮಿಗ್‌- 20 ಯುದ್ಧ ವಿಮಾನ ಆಗಮಿಸಿದೆ. ಏರ್‌ ಮಾರ್ಷಲ್‌ ನಂದಾ ಕಾರ್ಯಪ್ಪ ಪ್ರಯತ್ನದ ಫಲವಾಗಿ ಇಂಡಿಯನ್‌ ಏರ್‌ ಫೋರ್ಸ್‌ ಉಚಿತವಾಗಿ ಯುದ್ಧ ವಿಮಾನವನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ.

ಉತ್ತರ ಪ್ರದೇಶದಿಂದ ಜ. 5ರಂದು ವಿಮಾನವನ್ನು ಹೊತ್ತ ಲಾರಿ ಹೊರಟು ಶುಕ್ರವಾರ ಸಂಜೆ ಮಡಿಕೇರಿ ತಲುಪಿದೆ. ಈ ಬಗ್ಗೆ ಫೀ. ಮಾ. ಎಂ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಫಾರಂನ ಅಧ್ಯಕ್ಷ ಕರ್ನಲ್‌ ಸುಬ್ಬಯ್ಯ ಪ್ರತಿಕ್ರಿಯಿಸಿದ್ದಾರೆ.

ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್‌ ಪರಾರಿ: ಮಂಗಳೂರಲ್ಲಿ ಹೈಅಲರ್ಟ್‌

ಏರ್‌ ಮಾರ್ಷಲ್‌ ನಂದಾ ಕಾರ್ಯಪ್ಪ ಹಾಗೂ ಫಾರಂ ವತಿಯಿಂದ ಜ. ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ವಿಮಾನ ಕಳುಹಿಸಿಕೊಡುವಂತೆ ಸೇನಾ ಮುಖ್ಯಸ್ಥರಿಗೆ ಪತ್ರ ಕಳುಹಿಸಲಾಗಿತ್ತು. ಈ ಹಿಂದೆ ಜಿಲ್ಲೆಗೆ ನಿರ್ಮಲಾ ಸೀತಾರಾಮನ್‌ ಅವರು ಬಂದಿದ್ದಾಗ ಅವರಿಗೂ ಮನವಿ ಪತ್ರ ನೀಡಲಾಗಿತ್ತು. ಅದರಂತೆ ಮ್ಯೂಸಿಯಂಗೆ ಈಗ ಯುದ್ಧ ವಿಮಾನ ಆಗಮಿಸಿದೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೆ ಆತಂಕ ತಂದ ‘ಪೊಲೀಸ್‌’ ನಾಮಫಲಕ!

PREV
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!