ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಹಾಕಿ ಮನೆ ಸೀಜ್ ಮಾಡಿದ ಮೈಕ್ರೊಫೈನಾನ್ಸ್ ಕಂಪನಿ

Published : Jan 27, 2025, 11:05 PM IST
ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಹಾಕಿ ಮನೆ ಸೀಜ್ ಮಾಡಿದ ಮೈಕ್ರೊಫೈನಾನ್ಸ್ ಕಂಪನಿ

ಸಾರಾಂಶ

ಚಾಮರಾಜನಗರದಲ್ಲಿ ಮೈಕ್ರೋಫೈನಾನ್ಸ್ ಸಾಲದಿಂದ ಟೈಲ್ಸ್ ಕಾಂಟ್ರ್ಯಾಕ್ಟರ್ ಚೆಲುವರಾಜು ಬೀದಿಪಾಲಾಗಿದ್ದಾರೆ. ೧೦ ಲಕ್ಷ ಸಾಲಕ್ಕೆ ೧೧.೫೦ ಲಕ್ಷ ಮರುಪಾವತಿಸಿದರೂ, ೧೪ ಲಕ್ಷ ಬಾಕಿ ಇದೆ ಎಂದು ಕಂಪನಿ ಮನೆ ಜಪ್ತಿ ಮಾಡಿದೆ. ಇದರಿಂದ ಚೆಲುವರಾಜು ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ.

ವರದಿ : ಪುಟ್ಟರಾಜು. ಆರ್. ಸಿ. ಏಷ್ಯಾನೆಟ್  ಸುವರ್ಣ  ನ್ಯೂಸ್

ಚಾಮರಾಜನಗರ  (ಜ.27): ಮೈಕ್ರೋ ಫೈನಾನ್ಸ್ ನ ಮತ್ತೊಂದು ಕರಾಳ ಮುಖ ಬಟಾ ಬಯಲಾಗಿದೆ. ಟೈಲ್ಸ್ ಕಾಂಟ್ರ್ಯಾಕ್ಟರ್ ನ ಜೀವನವೇ ಬೀದಿಗೆ ತಂದ ಘಟನೆ ಚಾಮರಾಜನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೈಕ್ರೋ ಫೈನಾನ್ಸ್ ಸಹವಾಸ ಮಾಡಿ ಬೀದಿಗೆ ಬಂದ ಕುಟುಂಬದ ಕಣ್ಣೀರ ಕಥೆ ಇಲ್ಲಿದೆ ನೋಡಿ. 

ಹೌದು ಹಾಸಿಗೆ ಮೇಲೆ ಮಲಗಿ ಅದೇನನ್ನೊ ಕನವರಿಸುತ್ತಿರೊ ವ್ಯಕ್ತಿ. ಕೈಯಲ್ಲಿ ಡಾಕ್ಟರ್ ರಿಪೋರ್ಟ್ ಹಾಗೂ ಮಾತ್ರೆಗಳನ್ನ ಹಿಡಿದು ನಿಂತಿರುವ ಮಹಿಳೆ. ಹಾಸಿಗೆ ಹಿಡಿದವನನ್ನು ಮುತು ವರ್ಜಿ ವಹಿಸಿ ಸೇವೆ ಮಾಡ್ತಿರುವ ಕುಟುಂಬ.ಈ ಎಲ್ಲ ಕರುಳು ಹಿಂಡುವ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮ. ಮೈಕ್ರೋ ಫೈನಾನ್ಸ್ ಸಹವಾಸ ಮಾಡಿದ ಚೆಲುವರಾಜು ಕುಟುಂಬ ಈಗ ಬೀದಿ ಪಾಲಾಗಿದೆ. ಇದ್ದ ಮನೆಯೊಂದನ್ನು ಕಳ್ಕೊಂಡು ಕೇರ್ ಆಫ್ ಫುಟ್ ಪಾತ್ ಆಗಿ ಹೋಗಿದೆ.

ರಾಜ್ಯದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ಹಾವಳಿ | Micro-Finance Harassment | Suvarna News

ಆಗಿದ್ದಿಷ್ಟೆ 2017 ರಲ್ಲಿ ಚೆಲುವರಾಜು ಈಕ್ವಿಟಾಸ್ ಎಂಬ ಮೈಕ್ರೋ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದರು. ಆ ಸಾಲಕ್ಕೂ ಕಂತನ್ನು ತಪ್ಪದೆ ಕಟ್ಟುತ್ತಿದ್ರು. ಇದನ್ನು ಗಮನಿಸಿದ ಮೈಕ್ರೋ ಫೈನಾನ್ಸ್ ಕಂಪನಿಯವರು ಬೇಡ ಅಂದ್ರು ಬಲವಂತವಾಗಿ ಮತ್ತೆ 3 ಲಕ್ಷ ಸಾಲ ನೀಡಿದ್ದರು. ಆದ್ರೆ ಕೋವಿಡ್ ವೇಳೆ ಲಾಕ್ ಡೌನ್ ಆದ ಕಾರಣ ವ್ಯಾಪಾರ ವಹಿವಾಟು ಸ್ಥಗಿತವಾಯ್ತು, ಸಾಲದ ಕಂತು ಕಟ್ಟೋಕೆ ಆಗದೆ ಬಡ್ಡಿಗೆ ಬಡ್ಡಿ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಯ್ತು ಈಗ ಕಳೆದ 1 ವರ್ಷದ ಹಿಂದೆ ಬಂದ ಮೈಕ್ರೋ ಫೈನಾನ್ಸ್ ಕಂಪನಿಯವರು ಚೆಲುವರಾಜು ಹಾಗೂ ಕುಟುಂಬಸ್ಥರನ್ನು ಆಚೆ ಹಾಕಿ ಮನೆಯನ್ನ ಜಪ್ತಿ ಮಾಡಿದ್ದಾರೆ.

ಇನ್ನೂ ಕಂತು ಕಟ್ಟಿಲ್ಲ ಹಾಗಾಗಿ ಮನೆ ಜಪ್ತಿ ಮಾಡಿದ್ದಾರೆ ನಿಜ ಆದ್ರೆ ಸಾಲಗಾರರ ವಾದ ಅಂದ್ರೆ ತೆಗೆದುಕೊಂಡ 10 ಲಕ್ಷ ಸಾಲಕ್ಕೆ ಈಗಾಗ್ಲೆ 11.50 ಲಕ್ಷ ಹಣವನ್ನು ಮರು ಪಾವತಿ ಮಾಡಿದ್ದಾರೆ. ಸಾಲ ಮರುಪಾವತಿ ಮಾಡಿದ್ರು ಅದು ಬಡ್ಡಿಗೆ ಸರಿ ಹೋಯ್ತು ಇನ್ನು 14 ಲಕ್ಷ ಅಸಲನ್ನು ಕಟ್ಟಬೇಕು ಅನ್ನೋದು ಫೈನಾನ್ಸ್ ರವರ ವಾದ. ಇನ್ನೂ ಯಾವಾಗ ಫೈನಾನ್ಸ್ ನವರು ಮನೆ ಜಪ್ತಿಗೆ ಬಂದರು. ಆಗ ಚೆಲುವರಾಜ್ ಸಂಬಂಧಿ ದೊಡ್ಡ ಸಿದ್ದಮ್ಮ 2 ಲಕ್ಷ ಹಣ ಕೊಡ್ತೀನಿ ಇನ್ನು ಮಿಕ್ಕ ಹಣವನ್ನ ಹಂತ ಹಂತವಾಗಿ ಕೊಡುವುದಾಗಿ ಮನವಿ ಮಾಡಿದ್ರು ಕೇಳದೆ ಮನೆ ಜಪ್ತಿ ಮಾಡಿದ್ದಾರೆ. ಇನ್ನು ಯಾವಾಗ ಮನೆ  ಜಪ್ತಿ  ಮಾಡ್ತಾರೊ  ಆಗ ಈ  ವಿಚಾರ  ಕೇಳಿ  ಶಾಕ್ ಗೆ  ಒಳಗಾದ ಚೆಲುವರಾಜ್ ಗೆ ಮುಖ ಹಾಗೂ  ಎಡಗೈಗೆ  ಪಾರ್ಶ್ವವಾಯು  ಹೊಡಿದಿದೆ.  ಈಗ  ಆಸ್ಪತ್ರೆಯ  ಖರ್ಚಿಗೂ  ಹಣವಿಲ್ಲದೆ ಪರದಾಡುವಂತಾಗಿದೆ.

Anant Nag Awarded Padma Bhushan | ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದು ಖುಷಿಗಿಂತ ತೃಪ್ತಿ ತಂದಿದೆ-Anant Nag

ಬಿಕ್ಷೆ ಬೇಡಿಯಾದ್ರು ಬೇಕಾದ್ರೆ ಬದುಕೋಣ ಆದ್ರೆ ಈ ಮೈಕ್ರೋ ಫೈನಾನ್ಸ್ ಕಂಪನಿಗಳ ಸಹವಾಸ ಬೇಡ ಅಂತ ಸಂತ್ರಸ್ಥರು ಹಾಗೂ ಆತನ ಸ್ನೇಹಿತರು ಮಾತನಾಡುತ್ತಿದ್ದಾರೆ. ಆದಷ್ಟು ಬೇಗ ರಾಜ್ಯ ಸರ್ಕಾರ ಅಧಿಕ ಬಡ್ಡಿ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ದ ಯಾವ ರೀತಿಯ ಕಠಿಣ ಕಾನೂನು ಜಾರಿಗೆ ತರುತ್ತೆ ಕಾದುನೋಡಬೇಕಾಗಿದೆ.

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್