ಬಿಎಸ್‌ವೈ, ಶ್ರೀನಿವಾಸಪ್ರಸಾದ್‌ಗೆ ಗೆಲುವಿನ ಉಡುಗೊರೆ ನೀಡಿ :ಹರ್ಷವರ್ಧನ್‌

By Kannadaprabha News  |  First Published Apr 1, 2023, 7:33 AM IST

ಈ ಬಾರಿ ಬಹಿರಂಗ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಹಿರಿಯ ನಾಯಕರಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿ. ಶ್ರೀನಿವಾಸಪ್ರಸಾದ್‌ ನಂತರ ನಿವೃತ್ತರಾಗಲಿದ್ದು, ನಂಜನಗೂಡಿನಲ್ಲಿ ಬಿಜೆಪಿ ಬಾವುಟ ಹಾರಿಸುವ ಮೂಲಕ ಈ ನಾಯಕರಿಗೆ ಗೆಲುವಿನ ಉಡುಗೊರೆ ನೀಡಲು ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.


 ನಂಜನಗೂಡು: ಈ ಬಾರಿ ಬಹಿರಂಗ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಹಿರಿಯ ನಾಯಕರಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿ. ಶ್ರೀನಿವಾಸಪ್ರಸಾದ್‌ ನಂತರ ನಿವೃತ್ತರಾಗಲಿದ್ದು, ನಂಜನಗೂಡಿನಲ್ಲಿ ಬಿಜೆಪಿ ಬಾವುಟ ಹಾರಿಸುವ ಮೂಲಕ ಈ ನಾಯಕರಿಗೆ ಗೆಲುವಿನ ಉಡುಗೊರೆ ನೀಡಲು ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

ಶುಕ್ರವಾರ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

Latest Videos

undefined

ತಮ್ಮ ಇಳಿವಯಸ್ಸಿನಲ್ಲೂ ಅತ್ಯಂತ ಉತ್ಸುಕರಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರು ಈ ಚುನಾವಣೆ ನಂತರ ಚುನಾವಣಾ ಪ್ರಚಾರದಿಂದ ನಿವೃತ್ತರಾಗುವುದರಿಂದ ನಂಜನಗೂಡು ಕ್ಷೇತ್ರದ ಗೆಲುವಿನ ಆತ್ಮತೃಪ್ತಿಯೊಂದಿಗೆ ಈ ಇಬ್ಬರು ನಾಯಕರಿಗೆ ಉಡುಗೊರೆ ನೀಡಬೇಕು ಎಂದರು.

ಯಾವುದೇ ಚುನಾವಣೆಯಾದರೂ ಮೊದಲು ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿಯೇ ಪ್ರಚಾರ ಕೈಗೊಳ್ಳುತ್ತೇನೆ. ಅಂತೆಯೇ ಈ ಬಾರಿಯೂ ಪೂಜೆ ಸಲ್ಲಿಸಿದ್ದು, ನಂಜನಗೂಡಿನಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸುವ ಮೂಲಕ ಬಿಜೆಪಿ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ರುಜುವಾತು ಮಾಡಲು ಪೂಜೆ ಸಲ್ಲಿಸಿ ಪ್ರಚಾರಕ್ಕೆ ಧುಮುಕುತ್ತಿರುವುದಾಗಿ ತಿಳಿಸಿದರು.

ನಾನು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಸಾಕಾರಗೊಳಿಸಿರುವ ಬಗ್ಗೆ ಆತ್ಮತೃಪ್ತಿಯಿದೆ. ವಿಶೇಷವಾಗಿ ನುಗು ಏತ ನೀರಾವರಿ ಯೋಜನೆ, ಶ್ರೀಕಂಠೇಶ್ವರಸ್ವಾಮಿ ಬೆಳ್ಳಿರಥ, 75 ಕೊಠಡಿಗಳ ಅತಿಥಿಗೃಹ, ಹೆಡಿಯಾಲ ಭಾಗದ ಕೆರೆಗಳ ತುಂಬಿಸುವ ಯೋಜನೆ ಹೀಗೆ ಹಲವು ಮಹತ್ವದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಮುಂದೆಯೂ ಕೂಡ ಮತದಾರರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ ಮತದಾರರ ಮನೆಗೆ ಬಾಗಿಲಿಗೆ ತೆರಳಿ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು.

ಬಿಜೆಪಿ ಹಿರಿಯ ಮುಖಂಡ ಕುಂಬ್ರಹಳ್ಳಿ ಸುಬ್ಬಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಪಿ. ಮಹೇಶ್‌, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಕೋಮಲ ಮಹಾಲಿಂಗಸ್ವಾಮಿ, ನಗರಾಧ್ಯಕ್ಷೆ ನಂದಿನಿ ಮಹೇಶ್‌, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ ಇದ್ದರು.

ಇಲ್ಲಿ ಕೈ ಅಭ್ಯರ್ಥಿಗಳಿನ್ನೂ ಘೋಷಣೆ ಆಗಿಲ್ಲ

ಬೆಂಗಳೂರು (ಮಾ.26): ಕುತೂಹಲಕಾರಿ ಸಂಗತಿಯೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಯಡಿಯೂರಪ್ಪ ಪುತ್ರ ವಿಜಯೇಂದ್ರ (ಶಿಕಾರಿಪುರ) ಸೇರಿದಂತೆ ಎದುರಾಳಿ ಪಕ್ಷಗಳ ಪ್ರಮುಖ ನಾಯಕರ ಕ್ಷೇತ್ರಗಳಿಗೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಸ್ಥಾನ ದೊರಕಿಲ್ಲ. ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ವಿನಯ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಚಿಂತನೆ ಹೊಂದಿದೆ. ಆದರೆ, ವಿನಯ ಕುಲಕರ್ಣಿ ಅವರು ಧಾರವಾಡದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. 

ಜತೆಗೆ, ವಿನಯ ಕುಲಕರ್ಣಿ ಅವರಿಗೆ ಅವರ ಬಯಕೆಯ ಕ್ಷೇತ್ರಕ್ಕೂ ಹೆಸರು ಪ್ರಕಟಿಸಿಲ್ಲ. ಉಳಿದಂತೆ ಸಚಿವರಾದ ಆರ್‌. ಅಶೋಕ್‌ (ಪದ್ಮನಾಭನಗರ), ಗೋವಿಂದ ಕಾರಜೋಳ ( ಮುಧೋಳ), ಮುರುಗೇಶ್‌ ನಿರಾಣಿ (ಬೀಳಗಿ), ಬಿ. ಶ್ರೀರಾಮುಲು (ಮೊಳಕಾಲ್ಮೂರು), ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ), ನಾಯಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌ (ವಿಜಯಪುರ), ಜಗದೀಶ್‌ ಶೆಟ್ಟರ್‌ (ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌), ಈಶ್ವರಪ್ಪ (ಶಿವಮೊಗ್ಗ), ಎಚ್‌.ಡಿ. ಕುಮಾರಸ್ವಾಮಿ (ಚನ್ನಪಟ್ಟಣ) ಸೇರಿದಂತೆ ಪ್ರಮುಖ ಎದುರಾಳಿ ಪಕ್ಷಗಳ ನಾಯಕರ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಿಲ್ಲ. 

ಚುನಾವಣೆ ಘೋಷಣೆ ನಂತರ ಕಾಂಗ್ರೆಸ್‌ 2ನೇ ಪಟ್ಟಿ: 100 ಕ್ಷೇತ್ರಗಳ ಟಿಕೆಟ್‌ಗೆ ಇದೆ ಭಾರಿ ಪೈಪೋಟಿ

ಅದೇ ರೀತಿ ಹೊಸ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿರುವ ಮಾಜಿ ಗಣಿ ಧಣಿ ಜನಾರ್ದನ ರೆಡ್ಡಿ ಅವರು ಸ್ಪರ್ಧಿಸಬಯಸಿರುವ ಗಂಗಾವತಿ ಕ್ಷೇತ್ರಕ್ಕೂ ಟಿಕೆಟ್‌ ಘೋಷಣೆ ಮಾಡಿಲ್ಲ. ಇನ್ನೂ ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣದ 17 ಕ್ಷೇತ್ರಗಳ ಪೈಕಿ ಎಂಟು (ರಮೇಶ್‌ ಜಾರಕಿಹೊಳಿ- ಗೋಕಾಕ್‌, ಎಸ್‌.ಟಿ. ಸೋಮಶೇಖರ್‌- ಯಶವಂತಪುರ, ಗೋಪಾಲಯ್ಯ- ಮಹಾಲಕ್ಷ್ಮೇ ಲೇಔಟ್‌, ಬೈರತಿ ಬಸವರಾಜ- ಕೆ.ಆರ್‌. ಪುರ, ಶಿವರಾಮ ಹೆಬ್ಬಾರ್‌- ಯಲ್ಲಾಪುರ

click me!