ಮೆಟ್ರೋ ಫಿಡರ್‌ ಸೇವೆ : ಬಿಎಂಟಿಸಿ ಅವಧಿ ವಿಸ್ತರಣೆ

By Kannadaprabha NewsFirst Published Nov 18, 2021, 7:43 AM IST
Highlights
  • ನಗರದಲ್ಲಿ ‘ನಮ್ಮ ಮೆಟ್ರೋ’ ರೈಲು ಸೇವೆ ಪ್ರಾರಂಭವಾಗುತ್ತಿದ್ದಂತೆ ಇದಕ್ಕೆ ಪೂರಕವಾಗಿ ಬಸ್ ವ್ಯವಸ್ಥೆ
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಂಪರ್ಕ ಸಾರಿಗೆಗಳನ್ನು ಪುನಾರಂಭಿಸಲು ಸಜ್ಜು

 ಬೆಂಗಳೂರು (ನ.18):  ನಗರದಲ್ಲಿ ‘ನಮ್ಮ ಮೆಟ್ರೋ’ (namma Metro ) ರೈಲು ಸೇವೆ ಪ್ರಾರಂಭವಾಗುತ್ತಿದ್ದಂತೆ ಇದಕ್ಕೆ ಪೂರಕವಾಗಿ ಬೆಂಗಳೂರು (Bengaluru) ಮಹಾನಗರ ಸಾರಿಗೆ ಸಂಸ್ಥೆ (BMTC) ಸಂಪರ್ಕ ಸಾರಿಗೆಗಳನ್ನು ಪುನಾರಂಭಿಸಲು ಮುಂದಾಗಿದೆ.

ನ.18ರಿಂದ ಜಾರಿಗೆ ಬರುವಂತೆ ಸಂಪರ್ಕ ಸಾರಿಗೆಗಳನ್ನು ರೈಲು ಸೇವೆ (Train service) ಹಾಗೂ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ತಡರಾತ್ರಿವರೆಗೂ ವಿವಿಧ ಮೆಟ್ರೋ (Metro) ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ. ತಕ್ಷಣಕ್ಕೆ ಎಂಟು ಮೆಟ್ರೋ ನಿಲ್ದಾಣಗಳಿಂದ ವಿವಿಧೆಡೆ ಬಸ್‌ಗಳು (Bus) ಕಾರ್ಯಾಚರಣೆ ಮಾಡಲಿವೆ.

ಎಸ್‌.ವಿ.ಮೆಟ್ರೋ ನಿಲ್ದಾಣ - ಸೆಂಟ್ರಲ್‌ ಸಿಲ್ಕ್ ಬೋರ್ಡ್‌ (Silk Board), ವೈಲ್ಟ್‌ ಫೀಲ್ಡ್‌ ಟಿಟಿಎಂಸಿ (TTMC), ಕೆ.ಆರ್‌.ಪುರಂ, ವಿಜಯನಗರ (Vijayanagar) ಮೆಟ್ರೋ ನಿಲ್ದಾಣ- ಅಂಬೇಡ್ಕರ್‌ ಕಾಲೇಜು (College), ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ -  ಬಿಇಎಂಎಲ್‌ 5ನೇ ಹಂತ, ಜ್ಞಾನ ಭಾರತಿ ಮೆಟ್ರೋ ನಿಲ್ದಾಣ- ಉಲ್ಲಾಳು ಉಪನಗರ, ಜಾಲಹಳ್ಳಿ ಮೆಟ್ರೋ ನಿಲ್ದಾಣ -  ಪೀಣ್ಯ 2ನೇ ಹಂತ, ನಾಗಸಂದ್ರ ಮೆಟ್ರೋ ನಿಲ್ದಾಣ - ಚಿಕ್ಕಬಾಣಾವರ, ಜಯನಗರ ಮೆಟ್ರೋ ನಿಲ್ದಾಣ - ಜಂಬೂ ಸವಾರಿ ದಿಣ್ಣೆ, ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ- ಕಗ್ಗಲೀಪುರ ಮಾರ್ಗವಾಗಿ ಬಸ್‌ (Bus) ಸಂಚಾರ ನಡೆಸಲಿದೆ.

ಟಿಕೆಟ್‌ ರಹಿತ ಪಯಣ : 3 ಲಕ್ಷ ದಂಡ ವಸೂಲಿ

ಬೆಂಗಳೂರು: ಬಿಎಂಟಿಸಿನಲ್ಲಿ ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಿದ್ದ 2031 ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ 3.39 ಲಕ್ಷ ರು. ದಂಡ ವಸೂಲಿ ಮಾಡಿದೆ. ಬಿಎಂಟಿಸಿಯು ಅಕ್ಟೋಬರ್‌ ತಿಂಗಳಲ್ಲಿ 14,233 ಟ್ರಿಪ್‌ಗಳನ್ನು ತಪಾಸಣೆ ನಡೆಸಿ 2031 ಪ್ರಯಾಣಿಕರು ಟಿಕೆಟ್‌ ಪಡೆಯದೆ, ಪ್ರಯಾಣಿಸುತ್ತಿದ್ದವರನ್ನು ಪತ್ತೆ ಹಚ್ಚಿದೆ. ಇವರಿಂದ 3,39,100 ರು. ದಂಡ ವಸೂಲಿ ಮಾಡಿ, 1295 ಬಿಟಿಎಂಸಿ ನಿರ್ವಾಹಕರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಇದು ಮಾತ್ರವಲ್ಲದೆ, 172 ಪುರುಷರು ಮಹಿಳಾ ಪ್ರಯಾಣಿಕರ ಆಸನದಲ್ಲಿ ಕುಳಿತ ಪರಿಣಾಮ ಇವರಿಗೂ ದಂಡ ವಿಧಿಸಿರುವ ಸಂಸ್ಥೆಯು ಇವರಿಂದ 17,200 ರು.ಗಳನ್ನು ವಸೂಲಿ ಮಾಡಿದೆ. ಒಟ್ಟಾರೆ 3.56 ಲಕ್ಷ ರು. ದಂಡದಿಂದ ವಸೂಲಿ ಮಾಡಲಾಗಿದೆ.

ರಾತ್ರಿ 11ರವರೆಗೆ ಮೆಟ್ರೋ ಸೇವೆ : 

ಪ್ರಯಾಣಿಕರ ಬಹುದಿನದ ಬೇಡಿಕೆಯಂತೆ ಬೆಂಗಳೂರು(Bengaluru)ಮೆಟ್ರೋ ರೈಲು ನಿಗಮ( BMRCL) ನಮ್ಮ ಮೆಟ್ರೋ (Namma Metro)ತನ್ನ ಸೇವೆಯನ್ನು ರಾತ್ರಿ 11 ಗಂಟೆಯವರೆಗೂ (ಗುರುವಾರ ನ. 18) ವಿಸ್ತರಿಸಿ ಶುಭ ಸುದ್ದಿ ನೀಡಿದೆ.

ನಗರದ ಎಲ್ಲ ಮೆಟ್ರೋ ಟರ್ಮಿನಲ್ ನಿಲ್ದಾಣಗಳಲ್ಲಿ ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬೆಳಗ್ಗೆ 6 ಗಂಟೆಗೆ ದಿನದ ಮೊದಲ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ. ಭಾನುವಾರ ಮೊದಲು ರೈಲು ಬೆಳಗ್ಗೆ 7ಕ್ಕೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ದಿನದ ಕೊನೆಯ ರೈಲು ರಾತ್ರಿ 11 ಗಂಟೆಗೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ ನ ನಾಡಪ್ರಭು ಕೇಂಪೇಗೌಡ ಇಂಟರ್ ಚೇಂಜ್ ನಿಲ್ದಾಣದಿಂದ ಕೊನೆಯ ರೈಲುಗಳು ರಾತ್ರಿ 11. 30ಕ್ಕೆ ಹೊರಡಲಿವೆ ಎಂದು  BMRCL ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರಿಂದ ಬೇಡಿಕೆ ಬಂದಿದ್ದರಿಂದ ರಾತ್ರಿ ವೇಳೆ ಮೆಟ್ರೋ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ರಾತ್ರಿ ಕರ್ಫ್ಯೂ ಹಿಂಪಡೆದ ಬಳಿಕ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.

ಕೋವಿಡ್‌-19(Covid19) ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರು(Bengaluru) ನಗರದಲ್ಲಿ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು(Night Curfew) ಸರ್ಕಾರ ರದ್ದು ಮಾಡಿದ್ದರೂ ‘ನಮ್ಮ ಮೆಟ್ರೋ’(Namma Metro) ತನ್ನ ಸೇವೆಯ ಅವಧಿಯನ್ನು ರಾತ್ರಿ 11ರವರೆಗೆ ಇನ್ನೂ ವಿಸ್ತರಿಸದೇ ಇರುವುದಕ್ಕೆ ಮೆಟ್ರೋ ಪ್ರಯಾಣಿಕರ(Passengers) ಅಸಮಾಧಾನ ವ್ಯಕ್ತಪಡಿಸಿದ್ದರು.

ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿ(KSRTC), ರೈಲು(Train) ಸಂಚಾರ, ರಾತ್ರಿ ಪಾಳಿಯ ಕೆಲಸಗಳು ನಡೆಯುತ್ತಿವೆ. ಬೇರೆ ಬೇರೆ ಊರಿನಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ರಾತ್ರಿ 11ರವರೆಗೆ ವಿಸ್ತರಿಸಬೇಕು ಎಂದು ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು.

ಮೆಟ್ರೋ ಸುರಂಗ ಕುಸಿಯುವ ವೇಳೆ ಕುಸಿದ ಬಾವಿ

ಮೆಟ್ರೋ ಸೇವೆ ಅವಧಿಯ ವಿಸ್ತರಣೆಯ ಬಗ್ಗೆ ಆದಷ್ಟು ಬೇಗ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಸೋಮವಾರ 2.68 ಲಕ್ಷ ಮಂದಿ ಮೆಟ್ರೊ ಸೇವೆ ಬಳಸಿದ್ದು, ಕೋವಿಡ್‌ ನಂತರ ಒಂದೇ ದಿನ ಅತಿ ಹೆಚ್ಚು ಪ್ರಯಾಣಿಕರು ಮೆಟ್ರೋ ಸೇವೆ ಬಳಸಿಕೊಂಡಿದ್ದಾರೆ. ಸದ್ಯ 2.50 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದಾರೆ. ಈ ತಿಂಗಳಾಂತ್ಯಕ್ಕೆ 3 ಲಕ್ಷ ಪ್ರಯಾಣಿಕರನ್ನು ಹೊಂದುವ ಗುರಿ ಇದೆ. ಈ ನಿಟ್ಟಿನಲ್ಲಿ ಸೇವೆಯ ಅವಧಿಯ ವಿಸ್ತರಣೆ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುವುದಾಗಿ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್‌ ಈ ಮೊದಲು ತಿಳಿಸಿದ್ದರು.

ಬೆಂಗಳೂರು(Bengaluru) ಮೆಟ್ರೋ(Metro) ನಿಗಮವು ಎರಡನೇ ಹಂತದ ಯೋಜನೆಗಳು ಇನ್ನೂ ನಡೆದಿರುವಾಗಲೇ ಮೂರನೇ ಹಂತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಸುಮಾರು 42 ಕಿಲೋ ಮೀಟರ್‌ ಉದ್ದದ ಮೂರನೇ ಹಂತಕ್ಕೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ನಿಗಮ ಈಗಾಗಲೇ ಅನುಮತಿ ನೀಡಿದೆ.

ಮೂರನೇ ಹಂತದ ಯೋಜನೆಯಲ್ಲಿ ಮೆಟ್ರೋ ಮಾರ್ಗ ಎಲ್ಲೆಲ್ಲಿ ಹೋಗುತ್ತದೆ ಎಂಬ ವಿವರವನ್ನು ಒಳಗೊಂಡ ವರದಿಯನ್ನು ಮೆಟ್ರೋ ನಿಗಮ(Metro Corporation) ಸಿದ್ಧಪಡಿಸಿದೆ. ಈ ವರದಿಯ ಆಧಾರದಲ್ಲಿ ರೈಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಇಕಾನಾಮಿಕ್‌ ಸರ್ವಿಸ್‌ (ರೈಟ್ಸ್‌)ಗೆ ಡಿಪಿಆರ್‌ ಸಿದ್ಧಪಡಿಸುವಂತೆ ಕೋರಿದೆ. ಮುಂದಿನ ವರ್ಷದ ಜೂನ್‌ ಒಳಗೆ ಡಿಪಿಆರ್‌ ಸಿದ್ಧಗೊಳ್ಳುವ ನಿರೀಕ್ಷೆಯಿದ್ದು ಟ್ರಾಫಿಕ್‌ ಸರ್ವೇ(Traffic Survey) ಕೂಡ ನಡೆಯಲಿದೆ. ನಮ್ಮ ಮೆಟ್ರೋ ಸೇವೆ ಜನರಿಗೆ ಹತ್ತಿರವಾಗಿದ್ದು ಆಗಸ್ಟ್ ತಿಂಗಳಿನಲ್ಲಿ ಕೆಂಗೇರಿಗೂ ಸಂಪರ್ಕ ವಿಸ್ತರಣೆ ಮಾಡಲಾಗಿತ್ತು. 

click me!