Meter Taxi: ಇನ್ಮುಂದೆ ಬೆಂಗ್ಳೂರಿನ ರಸ್ತೆಗಳಿಯಲಿವೆ ಮೀಟರ್‌ ಟ್ಯಾಕ್ಸಿ

By Kannadaprabha News  |  First Published Dec 13, 2021, 6:50 AM IST

*  ಮೊಬೈಲ್‌ ಆ್ಯಪ್‌ ಆಧಾರಿತ ಕಂಪನಿಗಳ ಅಧಿಕ ಕಮಿಷನ್‌ನಿಂದ ಬೇಸತ್ತಿರುವ ಚಾಲಕರು
*  ಕ್ಯಾಡ್ರಿ ಸೈಕಲ್‌ ಟ್ಯಾಕ್ಸಿಗಳತ್ತ ಚಾಲಕರ ಒಲವು
*  ಮೆಟ್ರೋ ಫೀಡರ್‌ಗಳಾಗಿ ಸೇವೆ
 


ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಡಿ.13):  2022ರ ಜನವರಿ ಅಂತ್ಯದ ವೇಳೆಗೆ ಬೆಂಗಳೂರು(Bengaluru) ನಗರದಲ್ಲಿ ಕ್ಯಾಡ್ರಿ ಸೈಕಲ್‌ ಮೀಟರ್‌ ಟ್ಯಾಕ್ಸಿಗಳು (Bajaj Qute) ಅಧಿಕೃತವಾಗಿ ರಸ್ತೆಗಿಳಿಯಲಿವೆ. ಮೊಬೈಲ್‌ ಆ್ಯಪ್‌(Mobile App) ಆಧಾರಿತರ ಓಲಾ(Ola) ಮತ್ತು ಉಬರ್‌ಗಳ(Uber) ವಿಧಿಸುತ್ತಿರುವ ಕಮಿಷನ್‌ನಿಂದ ಬೇಸತ್ತಿರುವ ಬೆಂಗಳೂರು ನಗರದ ಕ್ಯಾಬ್‌ ಚಾಲಕರು ಇದೀಗ ಮೀಟರ್‌ ಕ್ಯಾಬ್‌ಗಳತ್ತ (ಕ್ಯಾಡ್ರಿ ಸೈಕಲ್‌) ಮುಖ ಮಾಡಿದ್ದು, ಪ್ರಯಾಣ ದರ ನಿಗದಿ ಮಾಡುವಂತೆ ಸಾರಿಗೆ ಇಲಾಖೆಗೆ(Department of Transport) ಮನವಿ ಮಾಡಿದ್ದಾರೆ.

Tap to resize

Latest Videos

ಮಹಾನಗರಗಳಲ್ಲಿ ಸಂಚಾರಕ್ಕಾಗಿ ಬಜಾಜ್‌ ಆಟೋ(Bajaj Auto) ಕಂಪನಿಯಿಂದ ಆವಿಷ್ಕಾರಗೊಂಡಿರುವ ಸುಮಾರು 600ಕ್ಕೂ ಹೆಚ್ಚು ಕ್ಯಾಡ್ರಿ ಸೈಕಲ್‌ಗಳು ಈಗಾಗಲೇ ನಗರದಲ್ಲಿ ಸಂಚರಿಸುತ್ತಿವೆ. ಆದರೆ, ಸಾರಿಗೆ ಇಲಾಖೆಯಿಂದ ಈ ವಾಹನಗಳಿಗೆ ಪ್ರಯಾಣ ದರವನ್ನು ಈವರೆಗೂ ನಿಗದಿ ಪಡಿಸಿಲ್ಲ. ಪರಿಣಾಮ ಈ ವಾಹನಗಳು ಅಧಿಕೃತವಾಗಿ ಸಂಚಾರ ಪ್ರಾರಂಭಿಸಿಲ್ಲ. ಆದರೆ, ಕೆಲ ವಾಹನಗಳ ಮಾಲೀಕರು ಅನಿವಾರ್ಯವಾಗಿ ಓಲಾ ಮತ್ತು ಉಬರ್‌ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಚಾರ ನಡೆಸಿದ್ದಾರೆ.

Bengaluru Auto Fare: ಬೆಲೆ ಏರಿಕೆ ಮಧ್ಯೆ ಇಂದಿನಿಂದ ಆಟೋ ದರ ಹೆಚ್ಚಳ

ಕ್ಯಾಡ್ರಿ ಸೈಕಲ್‌ಗಳು ಸಿಎನ್‌ಜಿ ವಾಹನಗಳಾಗಿದ್ದು(CNG Vehicle), ಹೆಚ್ಚಿನ ಮಾಲಿನ್ಯವನ್ನುಂಟು(Pollution) ಮಾಡುವುದಿಲ್ಲ. ಜೊತೆಗೆ, ನಿಲ್ಲಿಸುವುದಕ್ಕೆ ಆಟೋಗಿಂತ ಕಡಿಮೆ ಸ್ಥಳಾವಕಾಶ ಸಾಕು. ಹೀಗಾಗಿ ನಗರದ ಜನ ಬಳಕೆಗೆ ಸಹಕಾರಿಯಾಗಲಿದೆ. ಅಲ್ಲದೆ, ದುಡಿದ ಹಣದಲ್ಲಿ ಓಲಾ ಮತ್ತು ಉಬರ್‌ ಸಂಸ್ಥೆಗಳಿಗೆ ಹೆಚ್ಚು ಮೊತ್ತ ನೀಡುವುದನ್ನು ತಡೆಯಬಹುದಾಗಿದ್ದು, ಕ್ಯಾಂಡ್ರಿ ಸೈಕಲ್‌ ಖರೀದಿಸುವಂತೆ ಚಾಲಕರಿಗೆ ಕರೆ ನೀಡುತ್ತಿದ್ದೇನೆ ಎಂದು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷ ತಿಳಿಸಿದ್ದಾರೆ.

ಮೆಟ್ರೋ ಫೀಡರ್‌ಗಳಾಗಿ ಸೇವೆ

ಆಟೋ ಮಾದರಿಯ ಕ್ಯಾಡ್ರಿ ಸೈಕಲ್‌ಗಳಲ್ಲಿ ಚಾಲಕನೊಂದಿಗೆ ಮೂರು ಮಂದಿ ಪ್ರಯಾಣಿಸಬಹುದಾಗಿದೆ. ನಗರದಲ್ಲಿ ಇವುಗಳ ಸೇವೆ ಪ್ರಾರಂಭವಾಗುತ್ತಿದ್ದಂತೆ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ ಸೇರಿದಂತೆ ನಗರದ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಅಲ್ಲದೆ, ನಗರದ ಎಲ್ಲ ಮೆಟ್ರೋ ರೈಲು ನಿಲ್ದಾಣಗಳಿಗೆ ಫೀಡರ್‌ಗಳಾಗಿ ಸೇವೆ ಒದಗಿಸಲಿವೆ ಎಂದು ಅವರು ಹೇಳಿದರು.

Electric Vehicle Sales ಕರ್ನಾಟಕ, ದೆಹಲಿ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಉತ್ತರ ಪ್ರದೇಶ!

ಶೀಘ್ರದಲ್ಲಿ ದರ ನಿಗದಿ

ಕ್ಯಾಂಡ್ರಿ ಸೈಕಲ್‌ಗಳಿಗೆ ನಗರದಲ್ಲಿ ಪ್ರಯಾಣ ದರ ನಿಗದಿ ಪಡಿಸುವಂತೆ ಕೋರಿ ಕಳೆದ ಒಂದು ವರ್ಷದ ಹಿಂದೆ ಮನವಿ ಬಂದಿದೆ. ಆದರೆ, ಈ ಬಗ್ಗೆ ಇಲಾಖೆಯಿಂದ ಪರಾಮರ್ಶೆ ನಡೆಸಲಾಗುತ್ತಿದೆ. ಜೊತೆಗೆ, ಈ ವಾಹನಗಳ ಬೆಲೆ ಮತ್ತು ನಿರ್ವಹಣಾ ವೆಚ್ಚವನ್ನು ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ, ಸಾರ್ವಜನಿಕರ ಆಕ್ಷೇಪಣೆಗಳನ್ನು ಕೋರುತ್ತಿದ್ದೇವೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂದಿನ ಜನವರಿ ಅಂತ್ಯದ ವೇಳೆಗೆ ಅಧಿಕೃತ ಆದೇಶ ಹೊರ ಬೀಳಲಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ಬೆಂಗಳೂರು ನಗರದಲ್ಲಿ ಆಟೋಗಳ ಮಾದರಿಯಲ್ಲಿ ಮೀಟರ್‌ ಟ್ಯಾಕ್ಸಿಗಳು(Meter Taxi) ಸಂಚರಿಸಲು ಮನವಿ ಬಂದಿದೆ. ಮೀಟರ್‌ ಟ್ಯಾಕ್ಸಿಗಳ ಪ್ರಾರಂಭಿಸುವುದಕ್ಕಾಗಿ ಈಗಾಗಲೇ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ. ಪ್ರಯಾಣ ದರ ನಿಗದಿ ಮಾಡುವುದಕ್ಕಾಗಿ ಅಗತ್ಯವಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿ ದರ ನಿಗದಿ ಮಾಡಿ ಮೀಟರ್‌ ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಅಂತ ಬೆಂಗಳೂರು ನಗರ ಜಿಲ್ಲಾಧಿಕಾರಿ(ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ) ಜೆ.ಮಂಜುನಾಥ್‌ ತಿಳಿಸಿದ್ದಾರೆ.  
 

click me!