Chamarajanagar Farmer Marriage : ಚಾಮರಾಜನಗರದಲ್ಲೊಂದು ವಚನ ಕಲ್ಯಾಣ, ಮಾದರಿ ಹೆಜ್ಜೆ

By Suvarna News  |  First Published Dec 13, 2021, 1:09 AM IST

* ರೈತರಿಗೆ ಹೆಣ್ಣು ಕೊಡಲು ಹಿಂಜರಿಕೆ ಬೇಡ

* ಮರಿಯಾಲಮಠದ ಮುರಘರಾಜೇಂದ್ರ ಶ್ರೀಗಳ ಸಲಹೆ

* ವಚನ ಕಲ್ಯಾಣ ಮೂಲಕ ರೈತ ಮುಖಂಡನ ಮಗಳ ಮದುವೆ


ಚಾಮರಾಜನಗರ(ಡಿ. 12)  ಇಲ್ಲೊಂದು  ವಿಶೇಷ ಸಂಪ್ರದಾಯಕ್ಕೆ ಮಣೆ ಹಾಕಲಾಗಿದೆ.  ಯಾವುದೇ ಬ್ಯಾಂಡ್ ಬಾಜಾ ಇಲ್ಲ, ಮಂಗಳ ವಾದ್ಯವೂ ಇಲ್ಲ.. ಶಾಸ್ತ್ರವೂ ಇಲ್ಲ,.  ವಚನಗಳನ್ನು (Vachana sahitya) ಪಠಿಸುವ ಮೂಲಕ ವಚನ ಕಲ್ಯಾಣ ಮಹೋತ್ಸವ ನೆರವೇರಿದೆ.'

ಜಿಲ್ಲಾ ರೈತ (Farmer) ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅವರ ಪುತ್ರಿ ಶೋಭಾ ಹಾಗು ಯುವ ರೈತ  ಪೃಥ್ವಿ ಅವರ ವಚನ ಕಲ್ಯಾಣ ಸರಳವಾಗಿ ನೆರವೇರಿದೆ. 

Tap to resize

Latest Videos

undefined

ರೈತನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ (M. D. Nanjundaswamy) ಅವರ ಸಮಾಧಿ ಇರುವ  ಚಾಮರಾಜನಗರ (Chamarajnagar) ತಾಲೂಕು ಅಮೃತಭೂಮಿಯಲ್ಲಿ ವಿವಾಹ (Marriage)ನಡೆದಿದೆ.

ಯಾವುದೇ ಅದ್ಧೂರಿ ಬ್ಯಾಂಡ್‌-ಬಜಾನ ಇಲ್ಲದೇ ಮಂಗಳವಾದ್ಯದ ಸದ್ದಿಲ್ಲದೇ ರೈತ ಮುಖಂಡ ಮಗಳ ಮದುವೆಯನ್ನು ವಚನ ಕಲ್ಯಾಣದ ಮೂಲಕ ನಡೆಸಿಕೊಟ್ಟರು.

ರೈತ ಹೋರಾಟಗಾರ, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಮತ್ತು ಶಾಂತಿ ಅವರು ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಮೃತ ಭೂಮಿಯಲ್ಲಿ ತಮ್ಮ ಮಗಳು ಶೋಭಾ ಅವರನ್ನು ಎಚ್‌. ಮೂಕಳ್ಳಿ ಬಿ.ಕುಮಾರ್‌ ಮತ್ತು ಮಂಜುಳಾ ಅವರ ಪುತ್ರ ಯುವ ರೈತ ಪೃಥ್ವಿ ಅವರಿಗೆ ಕೊಟ್ಟು ಮದುವೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Marriage Fraud: 60 ವರ್ಷದ ಮುದುಕನ ಮದುವೆಗೆ ತಂದಿದ್ದ ಸೀರೆ, ತಾಳಿ ಜತೆ ವಧು ಪರಾರಿ..!

ಯಾವ ಶಾಸ್ತ್ರ, ಕಟ್ಟು-ಕಂದಚಾರಗಳಿಲ್ಲದೇ ಬಸವಾದಿ ಶರಣರ ವಚನ ಪಠಿಸುತ್ತಾ ವಿವಾಹ ಕಾರ್ಯ ನಡೆದಿದ್ದು ಸಮಾನತೆಯ ಪ್ರತೀಕವಾಗಿ ವಧುವಿನಿಂದ ವರನ ಕೊರಳಿಗೆ ರುದ್ರಾಕ್ಷಿ ಧಾರಣೆ ಬಳಿಕ ವರನಿಂದ ವಧುವಿನ ಕೊರಳಿಗೆ ಸಾಂಪ್ರದಾಯಿಕ ಮಾಂಗಲ್ಯ ಧಾರಣೆ ಮಾಡಿ ವಚನ ಹೇಳುತ್ತಾ ದಾಂಪತ್ಯ ಜೀವನ ಕುರಿತಂತೆ ಪ್ರತಿಜ್ಞೆಯನ್ನು ಕೈಗೊಂಡರು.

ರಕ್ತದಾನ ಜಾಗೃತಿಗಾಗಿ ವರ ಪೃಥ್ವಿ ರಕ್ತದಾನ ಮಾಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಕಲ್ಯಾಣ ಮಹೋತ್ಸವದಲ್ಲಿ 20ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ. ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ ಎಂಬುದರ ವಿರುದ್ಧ ಅರಿವು ಮೂಡಿಸಲು ಹೊನ್ನೂರು ಪ್ರಕಾಶ್‌, ಮಗಳನ್ನು ರೈತನಿಗೇ ಕೊಟ್ಟು ಮದುವೆ ಮಾಡಿದ್ದಾರೆ.

ರಾಗಿ ರೊಟ್ಟಿ, ಉಚ್ಚೆಳ್ಳು ಚಟ್ನಿ, ರಾಜಮುಡಿ ಅನ್ನ ಸೇರಿದಂತೆ ಸತ್ವಯುತ, ಆರೋಗ್ಯಯುತ ಆಹಾರ ಮದುವೆಯಲ್ಲಿ ಉಣಬಡಿಸಿದ್ದು, ಈ ಅಪರೂಪದ ಮದುವೆಗೆ ಹತ್ತಾರು ಮಠಾಧೀಶರು, ರೈತ ಹೋರಾಟಗಾರರು ಸಾಕ್ಷಿಯಾದರು. ಉಡುಗೊರೆ ನಿಷೇಧಿಸಲಾಗಿತ್ತು.

ಇಳಕಲ್‌ ಮಠದ ಗುರುಮಹಾಂತಸ್ವಾಮೀಜಿ, ಚರಂತಿಮಠದ ಶರಣಬಸವದೇವರು, ಮರಿಯಾಲಮಠದ ಮುರುಘರಾಜೇಂದ್ರಸ್ವಾಮೀಜಿ, ಎನ್‌.ಆರ್‌. ಪುರದ ಬಸವಯೋಗಿ ಪ್ರಭು, ಚಾಮರಾಜನಗರದ ಚೆನ್ನಬಸಸ್ವಾಮೀಜಿ, ಬಸವಗಂಗೋತ್ರಿಯ ಬಸವಯೋಗಿ ಸ್ವಾಮೀಜಿ, ಮಾದಹಳ್ಳಿ ಸಾಂಬಸದಾಶಿವಸ್ವಾಮೀಜಿ, ಕೆಸ್ತೂರು ತೋಂಟದಾರ್ಯಸ್ವಾಮೀಜಿ, ಹೊನ್ನೂರು ಶಿವಶಂಕರಸ್ವಾಮೀಜಿ, ಬಸವಬಿಗ್ರೇಡ್‌ ಸಂಸ್ಧಾಪಕ $ಅವಿನಾಶ್‌ ಬೋಸೇಕರ್‌, ಮೇಲಾಜಿಪುರ ಶಿವಬಸವಸ್ವಾಮೀಜಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಎಚ್‌.ಎನ್‌. ವೀರಣ್ಣ, ಬಿ. ಪ್ರಕಾಶ್‌ ಇದ್ದರು.

ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಎಲ್ಲರಿಗೂ ಅನ್ನ ನೀಡುವವನೇ ರೈತ. ರೈತರಷ್ಟುಯೋಗ್ಯರನ್ನು ಬೇರೆ ಕಡೆ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಹೆಣ್ಣುಕೊಡಲು ಹಿಂಜರಿಕೆ ಬೇಡ ಎಂದು ಮರಿಯಾಲ ಮಠ ಮುರುಘರಾಜೇಂದ್ರಶ್ರೀ ತಿಳಿಸಿದರು.

ಲಿಂಗಾಯಿತರು ವಚನದ ಆಧಾರದ ಮೇಲೆ ಸರಳ ವಿವಾಹ ಮಾಡುವ ಮೂಲಕ ಇತರಿಗೆ ಮಾದರಿಯಾಗಬೇಕು. ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕಬೇಕು ಎಂದು ಉಕ್ಕೇರಿ ಮಠದ  ಶರಣಬಸವದೇವರು ತಿಳಿಸಿದರು. ಕೊರೋನಾ ಆತಂಕದ ನಂತರ ಸಹಜವಾಗಿಯೇ ಅದ್ದೂರಿ ಮದುವೆಗೆಳಿಗೆ ಬ್ರೇಕ್ ಬಿದ್ದಿದೆ.  ಮಂತ್ರ ಮಾಂಗಲ್ಯದ ಮೂಲಕವೂ ಮದುವೆಯಾಗುತ್ತಿರುವ ನಿದರ್ಶನಗಳು ಇವೆ.

 

 

click me!