* ಸೆ. 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ
* ದಿನಕ್ಕೊಂದು ನಾಟಕ ಶುರು ಮಾಡ್ತಿದೆ ನಾಡದ್ರೋಹಿ ಎಂಇಎಸ್
* ಪರೋಕ್ಷವಾಗಿ ಲಕ್ಷ್ಮಣ ಸವದಿ ವಿರುದ್ಧ ಶುಭಂ ಶೆಳ್ಕೆ ವಾಗ್ದಾಳಿ
ಬೆಳಗಾವಿ(ಆ.29): ಕೈಯಲ್ಲೇ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ ಎಂದು ಹೇಳುವ ಮೂಲಕ ಎಂಇಎಸ್ ಪುಂಡ ಶುಭಂ ಶೆಳ್ಕೆ ಮತ್ತೆ ನಾಲಿಗೆ ಹರಿಬಿಟ್ಟಿದ್ದಾನೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಇಎಸ್ ಎಮ್ ಪ್ಲಸ್ ಎಮ್ ಸೂತ್ರ ಬಗ್ಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯ ವಿಚಾರದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶುಭಂ ಶೆಳ್ಕೆ, ಲೋಕಸಭಾ ಉಪಚುನಾವಣೆ ಬಳಿಕ ಇವರ ಢೋಂಗಿತನ ಮೂರ್ತಿ ಮುರಿದು ಬಿದ್ದಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮುಸ್ಲಿಂ ಅಷ್ಟೇ ಅಲ್ಲ ಇಬ್ಬರು ಕನ್ನಡಿಗರು ಎಂಇಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇವರ ಕೈಯಲ್ಲೇ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ ಎಂದು ಹೇಳುವ ಮೂಲಕ ಉದ್ಧಟತನ ಮೆರೆದಿದ್ದಾನೆ.
ಬೆಳಗಾವಿ ಪಾಲಿಕೆ ಗೆಲ್ಲಲು ಮಹತ್ವದ ಮೈತ್ರಿ : ಕುತೂಹಲದ ಚುನಾವಣಾ ಕಣ
ಕನ್ನಡ ನೆಲದಲ್ಲೇ ನಿಂತು ಜೈ ಮಹಾರಾಷ್ಟ್ರ ಅಂತಾ ನಾಡದ್ರೋಹಿ ಘೋಷಣೆಯನ್ನ ಶುಭಂ ಶೆಳ್ಕೆ ಕೂಗಿದ್ದಾನೆ. ಪದೇ ಪದೇ ಭಾಷಾ ವೈಷಮ್ಯವನ್ನ ಎಂಇಎಸ್ ಪುಂಡರು ಬಿತ್ತುತ್ತಿದ್ದಾರೆ. ಭಾಷೆ, ಜಾತಿ ಆಧಾರದಲ್ಲಿ ಎಂಇಎಸ್ ಪುಂಡ ಮತಯಾಚಿಸುತ್ತಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಮಾಡ್ತಿರುವ ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಕನ್ನಡಪರ ಸಂಘಟನೆ ಮುಖಂಡರ ಆಗ್ರಹಿಸಿವೆ.