* ವಾರ್ಡ್ 10ರ ಬಿಜೆಪಿ ಅಭ್ಯರ್ಥಿ ಚಂದ್ರಕಲಾ ಕೊಟಬಾಗಿ ಪರ ಬೆಲ್ಲದ ಪ್ರಚಾರ
* ಯಾವುದೇ ಆಸೆ- ಆಮಿಷಕ್ಕೆ ಒಳಗಾಗದೇ ಅರ್ಹ ವ್ಯಕ್ತಿಗೆ ಮತ ನೀಡಿ
* ಬಿಜೆಪಿಗೆ ಪಾಲಿಕೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಿ
ಧಾರವಾಡ(ಆ.29): ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಹು-ಧಾ ಅವಳಿ ನಗರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಅಭ್ಯರ್ಥಿಗಳ ಗೆಲವಿಗೆ ಶ್ರೀರಕ್ಷೆ ಆಗಲಿವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ವಾರ್ಡ್ 10ರ ಬಿಜೆಪಿ ಅಭ್ಯರ್ಥಿ ಚಂದ್ರಕಲಾ ಕೊಟಬಾಗಿ ಪರ ಶಾಸಕ ಅರವಿಂದ ಬೆಲ್ಲದ ಪ್ರಚಾರ ಮಾಡಿ, 10ನೇ ವಾರ್ಡ್‌ನಲ್ಲಿ ಬಿಜೆಪಿ ಪರ ಒಗ್ಗಟ್ಟು ಪ್ರದರ್ಶನವಾಗಿದೆ. ಕೆಲಗೇರಿ- ಆಂಜನೇಯ ನಗರ ಸೇರಿದಂತೆ ಶ್ರೀನಗರ, ಬಸವನಗರ, ಶಕ್ತಿ ಕಾಲೋನಿ, ತಪೋವನ, ನೆಹರು ನಗರ, ಗೌಡರ ಕಾಲೋನಿಗಳಲ್ಲಿ ಮತದಾರರು ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾರೆ. ಆದ್ದರಿಂದ ತಾವು ಹಾಕುವ ಮತದಿಂದ ಬರುವ ದಿನಗಳಲ್ಲಿ ತಮಗೆ ಅನಕೂಲ ಆಗುವ ರೀತಿಯಲ್ಲಿರಲಿ. ಯಾವುದೇ ಆಸೆ- ಆಮಿಷಕ್ಕೆ ಒಳಗಾಗದೇ ಅರ್ಹ ವ್ಯಕ್ತಿಗೆ ಮತ ನೀಡುವ ಮೂಲಕ ಬಿಜೆಪಿಗೆ ಪಾಲಿಕೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಹುಬ್ಬಳ್ಳಿ-ಧಾರವಾಡ ಮಧ್ಯೆ ಮೆಟ್ರೋ: ಕಾಂಗ್ರೆಸ್ ಭರವಸೆ
ಈ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಕಲಾ ಕೊಟಬಾಗಿ, ಮುಖಂಡರಾದ ಸುಧೀರ ಕ್ಷತ್ರೀಯ, ಅರವಿಂದ ಆಲದಕಟ್ಟಿ, ಶಾಂತೇಶ ಚಿಕ್ಕಲಕಿ, ಸಂತೋಷ ಕಟಗಿ, ಶಿವನಗೌಡ ಪಾಟೀಲ, ಸಂಜಯ ಸಾಲಿಮಠ, ಬಸವರಾಜ ಲಂಗೂಟಿ, ಸಿದ್ದಪ್ಪ ಬಾಗಿ, ರುದ್ರಗೌಡ ಪಾಟೀಲ, ಶಂಕರ ಕೊಟ್ರಿ, ಪ್ರಕಾಶ ಕೊಟಬಾಗಿ, ಮಂಜುನಾಥ ಸಿದ್ದಾಪೂರ ಮತ್ತಿತರರು ಇದ್ದರು.