ತುಮಕೂರು (ಆ.29): ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದ್ದು 14 ಮೇಕೆ 4 ಕುರಿಗಳು ಸಾವನ್ನಪ್ಪಿವೆ.
ಕೊರಟಗೆರೆ ತಾಲೂಕಿನ ಗರುಗದೊಡ್ಡಿ ಗ್ರಾಮದಲ್ಲಿ ಶನಿವಾರ ರಾತ್ರಿ ವೇಳೆ ಘಟನೆ ನಡೆದಿದೆ. ರಾಮಕೃಷ್ಣ ಎನ್ನುವವರಿಗೆ ಸೇರಿದ ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ ಒಟ್ಟು 18 ಕುರಿ ಮೇಕೆಗಳನ್ನು ಸಾಯಿಸಿದೆ.
ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ನಹೀದಾ ಜುಂಜುಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಪಟಳ ಕೊಡುತ್ತಿದ್ದ ಚಿರತೆಯನ್ನು ಉಪಾಯದಿಂದ ಸೆರೆಹಿಡಿದ ಗ್ರಾಮಸ್ಥರು
ಅಲ್ಲದೇ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಅಪಾಯ ಎದುರಾಗುವ ಸಾಧ್ಯತೆ ಇದ್ದು, ಮನುಷ್ಯರಿಗೂ ಇದರಿಂದ ಸಮಸ್ಯೆ ತಪ್ಪಿದ್ದಲ್ಲ ಎಂದು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚನೆ ನೀಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಈ ಹಿಂದೆಯೂ ಅನೇಕ ಚಿರತೆ ಹಾಗೂ ಹುಲಿ ದಾಳಿ ನಡೆದಿದ್ದು, ಅನೇಕರು ಪ್ರಾಣವನ್ನೂ ಕಳೆದುಕೊಂಡಿದ್ದರು. ಇದೀಗ ಮತ್ತೆ ಚಿರತೆ ಅಟ್ಟಹಾಸ ಶುರುವಾಗಿದೆ.