ದುಬೈನಿಂದ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಕಳ್ಳ ಸಾಗಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಇಂಥದ್ದೇ ಮತ್ತೆರಡು ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬರೋಬ್ಬರಿ 58.95 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು(ಫೆ.18): ದುಬೈನಿಂದ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಕಳ್ಳ ಸಾಗಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಇಂಥದ್ದೇ ಮತ್ತೆರಡು ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬರೋಬ್ಬರಿ 58.95 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದುಬೈನಿಂದ ಬರುತ್ತಿದ್ದ ಇಬ್ಬರನ್ನು ತಪಾಸಣೆಗೆ ಒಳಪಡಿಸಿದಾಗ ಗುದನಾಳದಲ್ಲಿ ಚಿನ್ನದ ಕ್ಯಾಪ್ಸೂಲ್‌ಗಳನ್ನು ಇಟ್ಟಿರುವುದು ಕಂಡುಬಂದಿದೆ. ಕೂಡಲೆ ಆರೋಪಿಗಳನ್ನು ಬಂಧಿಸಲಾಯಿತು. ಕೇರಳ ಮಲಪ್ಪುರಂ ಮೂಲದ ಮಹಮ್ಮದ್ ಸ್ವಾಲಿಹ್ ಚಪ್ಪತೋಡಿ (22) ಹಾಗೂ ಕೇರಳ ಮಲಪ್ಪುರಂ ಮೂಲದ ಮೊಹಮ್ಮದ್ ನಿಷಾದ್ (25) ಬಂಧಿತರು.
undefined
ಗುದನಾಳದಲ್ಲಿಟ್ಟು 633 ಗ್ರಾಂ ಚಿನ್ನ ಅಕ್ರಮ ಸಾಗಣೆ..!
ಒಂದು ಪ್ರಕರಣದಲ್ಲಿ ದುಬೈನಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಆಗಮಿಸಿದ ಮಹಮ್ಮದ್ ಸ್ವಾಲಿಹ್ ತನ್ನ ಗುದನಾಳದೊಳಗೆ 797 ಗ್ರಾಂ ತೂಕದ 32.35 ಲಕ್ಷ ರು. ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟುಕೊಂಡಿದ್ದ. ಇನ್ನೊಂದು ಪ್ರಕರಣದಲ್ಲಿ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಮೊಹಮ್ಮದ್ ನಿಷಾದ್‌ನಿಂದ 26.59 ಲಕ್ಷ ರು. ಮೌಲ್ಯದ 655 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಗುದನಾಳದಲ್ಲಿ 1 ಕೆ.ಜಿ. ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
ಸೀಮಾ ಸುಂಕ ಇಲಾಖೆಯ ಸೂಪರಿಂಟೆಂಡೆಂಟ್‌ಗಳಾದ ಶ್ರೀಲಕ್ಷ್ಮಿ, ಗೋಪಿನಾಥ್, ಸವಿತಾ ಕೋಟಿಯನ್, ರಾಮವರ್ತಾ ಮೀನಾ, ಮತ್ತು ಇನ್ಸ್‌ಪೆಕ್ಟರ್ ಸಮಲಾ ಮೋಹನ್ ರೆಡ್ಡಿ ಈ ಚಿನ್ನ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.