ಆಟೋ ಪಲ್ಟಿ: ಇಬ್ಬರು ಮಹಿಳೆಯರ ಸಾವು

By Kannadaprabha News  |  First Published Feb 18, 2020, 12:07 PM IST

ಬೆಳ್ತಂಗಡಿಯ ಇಂದಬೆಟ್ಟುಗ್ರಾಮದ ಪಡಂಬಿಲ ಪಾಲೆದಬೊಟ್ಟು ಎಂಬಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದು ಗದ್ದೆಗೆ ಉರುಳಿದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟು ಇನ್ನಿಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಅಪರಾಹ್ನ ಸಂಭವಿಸಿದೆ.


ಮಂಗಳೂರು(ಫೆ.18): ಬೆಳ್ತಂಗಡಿಯ ಇಂದಬೆಟ್ಟುಗ್ರಾಮದ ಪಡಂಬಿಲ ಪಾಲೆದಬೊಟ್ಟು ಎಂಬಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದು ಗದ್ದೆಗೆ ಉರುಳಿದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟು ಇನ್ನಿಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಅಪರಾಹ್ನ ಸಂಭವಿಸಿದೆ.

ನಡಗ್ರಾಮದ ಕೊಲ್ಲೊಟ್ಟು ನಿವಾಸಿ ದಾವೂದ್‌ ಸಾಹೇಬ್‌ ಅವರ ಪತ್ನಿ ಹಾಜಿರಾಬಿ ಹಾಗೂ ನಡ ಗ್ರಾಮದ ಗರ್ಖಾಸು ಮನೆ ನಿವಾಸಿ ಅಬ್ದುಲ್‌ ರಶೀದ್‌ ಅವರ ಪತ್ನಿ ಸಾಜಿದಾಬಿ ಮೃತರು. ರಿಕ್ಷಾದಲ್ಲಿದ್ದ ನಡ ಗ್ರಾಮದ ನಿವಾಸಿ ನಾಸಿರ ಎಂಬವರ ಪತ್ನಿ ಮುಮ್ತಾಜ್‌ ಬೇಗಂ(30) ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಷಾ ಚಾಲಕ ನವೀದ್‌ ಅವರ ಪತ್ನಿ ಶೈನಾಜ್‌ ಗಾಯಗೊಂಡಿದ್ದು ಅವರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Tap to resize

Latest Videos

3 ಪಲ್ಟಿ ಹೊಡೆದ ಬಸ್‌: 50 ಜನಕ್ಕೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಚಾಲಕ ನವೀದ್‌ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರು ಔತಣಕೂಟವೊಂದಕ್ಕೆ ಹೋಗಿ ಬರುತ್ತಿದ್ದರು ಎನ್ನಲಾಗಿದ್ದು, ಈ ವೇಳೆಗೆ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ರಿಕ್ಷಾ ಚಾಲಕ ನಬೀದ್‌ ಹಾಜಿರಾಬಿ ಅವರ ಪುತ್ರ. ಗಾಯಾಳುಗಳನ್ನು ಕೂಡಲೇ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ತರಲಾಯಿತು.

'ಹಾಡುತ್ತಾ, ಕುಣಿಯುತ್ತಾ ಇದ್ದವರು ಕ್ಷಣದಲ್ಲೇ ಹೆಣವಾದ್ರು..'!

ಈ ವೇಳೆಗೆ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಉಳಿದವರಿಗೆ ಪ್ರಾಧಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಯಿತು. ಬೆಳ್ತಂಗಡಿ ಸಂಚಾರಿ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

click me!