ಬೆಂಗಳೂರು: ಸೆ.22ರಿಂದ ಹೊಸೂರು, ದೇವನಹಳ್ಳಿಗೆ ಮೆಮು ರೈಲು

By Kannadaprabha NewsFirst Published Sep 21, 2022, 1:30 AM IST
Highlights

ಪ್ರಯಾಣಿಕರ ಬೇಡಿಕೆ ಹಿನ್ನೆಲೆ, ಯಶವಂತಪುರದಿಂದ ರೈಲು ಓಡಿಸಲು ನೈಋುತ್ಯ ರೈಲ್ವೆ ನಿರ್ಧಾರ

ಬೆಂಗಳೂರು(ಸೆ.21):  ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ನಗರದ ಯಶವಂತಪುರ ಜಂಕ್ಷನ್‌ನಿಂದ ಹೊಸೂರು ಮತ್ತು ದೇವನಹಳ್ಳಿಗೆ ವಾರದಲ್ಲಿ ಆರು ದಿನ ಮೆಮು ಎಕ್ಸಪ್ರೆಸ್‌ ರೈಲುಗಳ ಓಡಾಟ ನಡೆಸಲು ನೈಋುತ್ಯ ರೈಲ್ವೆ ನಿರ್ಧರಿಸಿದೆ. ಸೆ.22ರಿಂದ ‘ಯಶವಂತಪುರ - ಹೊಸೂರು-ಯಶವಂತಪುರ’ ಮತ್ತು ‘ಯಶವಂತಪುರ -ದೇವನಹಳ್ಳಿ -ಯಶವಂತಪುರ’ ಮೆಮು ಎಕ್ಸಪ್ರೆಸ್‌ಗಳನ್ನು ಆರಂಭಿಸಲಿವೆ. ಈ ಮೂಲಕ ಯಶವಂತಪುರ ಭಾಗ, ತುಮಕೂರು ರಸ್ತೆ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಪ್ರಯಾಣಿಕರು ನೇರವಾಗಿ ಹೊಸೂರು, ದೇವನಹಳ್ಳಿಗೆ ತೆರಳಲು ಹಾಗೂ ಈ ಭಾಗದ ಜನ ಯಶವಂತಪುರಕ್ಕೆ ನೇರವಾಗಿ ಆಗಮಿಸಲು ಅನುಕೂಲವಾಗಲಿದೆ. ಈ ಮೆಮು ರೈಲುಗಳು 10 ಪ್ರಯಾಣಿಕರ ಬೋಗಿಗಳನ್ನು ಹೊಂದಿದ್ದು, ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಚರಿಸಲಿವೆ.

*ಯಶವಂತಪುರ - ಹೊಸೂರು ಮೆಮು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06591)

ಯಶವಂತಪುರದಿಂದ ಬೆಳಿಗ್ಗೆ 6.10 ಗಂಟೆಗೆ ಹೊರಟು ಲೊಟ್ಟೆಗೊಲ್ಲಹಳ್ಳಿ (6.18), ಹೆಬ್ಬಾಳ (6.23), ಬಾಣಸವಾಡಿ (6.35), ಬೆಳ್ಳಂದೂರು ರಸ್ತೆ (6.56), ಕಾರ್ಮೆಲಾರಾಮ್‌ (7.02), ಹೀಲಲಿಗೆ (7.12), ಆನೇಕಲ್‌ ರಸ್ತೆ (8.29) ನಿಲ್ದಾಣಗಳ ಮೂಲಕ ಸಾಗಿ 7.50ಕ್ಕೆ ಹೊಸೂರು ತಲುಪುತ್ತದೆ.

Kalyana Karnataka : ಕಲಬುರಗಿ - ಕೊಲ್ಹಾಪುರ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

*ಹೊಸೂರು -ಯಶವಂತಪುರ ಮೆಮು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06592)

ಹೊಸೂರಿನಿಂದ ಬೆಳಿಗ್ಗೆ 8.15ಕ್ಕೆ ಹೊರಟು ಆನೇಕಲ್‌ ರಸ್ತೆ (8.29), ಹೀಲಲಿಗೆ (8.39), ಕಾರ್ಮೆಲಾರಾಮ್‌ (8.49), ಬೆಳ್ಳಂದೂರು ರಸ್ತೆ (8.55), ಬಾಣಸವಾಡಿ (9.16), ಹೆಬ್ಬಾಳ (9.27), ಲೊಟ್ಟೆಗೊಲ್ಲಹಳ್ಳಿ (9.33) ನಿಲ್ದಾಣಗಳ ಮೂಲಕ ಸಾಗಿ ಯಶವಂತಪುರವನ್ನು 9.50ಕ್ಕೆ ತಲುಪುತ್ತದೆ.

*ಯಶವಂತಪುರ - ದೇವನಹಳ್ಳಿ ಮೆಮು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06593)

ಯಶವಂತಪುರದಿಂದ ಬೆಳಿಗ್ಗೆ 10ಕ್ಕೆ ಹೊರಟು ಲೊಟ್ಟೆಗೊಲ್ಲಹಳ್ಳಿ (10.09), ಕೊಡಿಗೆಹಳ್ಳಿ (10.12), ಯಲಹಂಕ ಜಂಕ್ಷನ್‌ (10.20) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (10.44) ನಿಲ್ದಾಣಗಳ ಮೂಲಕ ಸಾಗಿ ದೇವನಹಳ್ಳಿಗೆ 10.55ಕ್ಕೆ ತಲುಪುತ್ತದೆ.

*ದೇವನಹಳ್ಳಿ -ಯಶವಂತಪುರ ಮೆಮು ಎಕ್ಸಪ್ರೆಸ್‌ (ರೈಲು ಸಂಖ್ಯೆ 06594):

ದೇವನಹಳ್ಳಿಯಿಂದ ಮಧ್ಯಾಹ್ನ 12.30ಕ್ಕೆ ಹೊರಟು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (12.36), ಯಲಹಂಕ ಜಂಕ್ಷನ್‌ (1.02), ಕೊಡಿಗೆಹಳ್ಳಿ (1.23), ಲೊಟ್ಟೆಗೊಲ್ಲಹಳ್ಳಿ (1.32) ನಿಲ್ದಾಣಗಳ ಮೂಲಕ ಸಾಗಿ ಯಶವಂತಪುರಕ್ಕೆ 2.15ಕ್ಕೆ ಬಂದು ತಲುಪಲಿದೆ.
 

click me!