Panchamasali Protest; ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಬೇಕಿದೆ ಎಂದ ಬಸನಗೌಡ ಪಾಟೀಲ್ ಯತ್ನಾಳ

By Gowthami K  |  First Published Sep 20, 2022, 10:43 PM IST

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಲ್ಲಿ ಅಡ್ಡಗಾಲು ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮುದಾಯದ ಜನ ತಕ್ಕ ಪಾಠ ಕಲಿಸಬೇಕು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.


ಹಾವೇರಿ (ಸೆ.20): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಲ್ಲಿ ಅಡ್ಡಗಾಲು ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮುದಾಯದ ಜನ ತಕ್ಕ ಪಾಠ ಕಲಿಸಬೇಕು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದರು.  ಪಟ್ಟಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಮಂಗಳವಾರ ರಾತ್ರಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ವಿರೋಧಿಗಳಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಬೊಮ್ಮಾಯಿ ಅವರನ್ನು ಬಿಎಸ್‌ವೈ ಬಿಡುತ್ತಿಲ್ಲ. ತಿರುಪತಿಗೆ ಹೋಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಂತೆ ಬಿಎಸ್‌ವೈ ಹೇಳಿರುವ ಕಾರಣ ಬೊಮ್ಮಾಯಿ ಅವರು ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದರು. ಮಂಗಳವಾರ ನಡೆದ ಅಧಿವೇಶನದಲ್ಲಿ ಎಲ್ಲ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಲಾಗಿದೆ. ಅದಕ್ಕೆ ಎಲ್ಲ ಸಮಾಜದ ಶಾಸಕರು ಒಮ್ಮತವಾಗಿ ಬೆಂಬಲ ನೀಡಿದ್ದಾರೆ. ಅಧಿವೇಶನ ಮುಗಿಯುವ ಒಳಗಾಗಿ ಒಳ್ಳೆಯ ಸುದ್ದಿ ಸಿಗುವ ಲಕ್ಷಣಗಳು ಕಂಡುಬಂದಿವೆ. ಆದರೂ ಸಹ ನವೆಂಬರ್‌ 2ನೇ ವಾರದಲ್ಲಿ 25 ಲಕ್ಷ ಜನ ಸೇರಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅಥವಾ ಸನ್ಮಾನ ಸಮಾರಂಭ ಮಾಡುವುದು ನಿರ್ಧಾರವಾಗಲಿದೆ ಎಂದರು.

ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಯಡಿಯೂರಪ್ಪನವರು ಪಂಚಮಸಾಲಿಗಳ ಶಾಪದಿಂದ ಅಧಿಕಾರ ಕಳೆದುಕೊಂಡರು. ನುಡಿದಂತೆ ನಡೆಯದಿದ್ದರೆ ಪಂಚಮಸಾಲಿಗಳ ಶಾಪ ಯಾರನ್ನೂ ಬಿಡದು’ ಎಂದರು.

Latest Videos

undefined

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ನೀಡುವುದು ಅವಶ್ಯವಾಗಿದೆ. ನಮ್ಮ ಮೇಲೆ ನೂರು ಪ್ರಕರಣ ದಾಖಲಿಸಿದರೂ ನಾವು ಹೆದರುವುದಿಲ್ಲ. ಪಕ್ಷ ಯಾವುದೇ ಇರಲಿ, ಸಿಎಂ ಯಾರೇ ಇರಲಿ, ಹೋರಾಟ ನಡೆಸಿ, ನಮ್ಮ ಹಕ್ಕು ಕೇಳುವುದು ಮುಖ್ಯವಾಗಿದೆ ಎಂದರು.

ನಾನೂ ಎಲ್ಲರ ಜತೆ ಅಡ್ಜಸ್ಟ್ ಆಗಿದ್ದರೆ ನೀವ್ಯಾರೂ ಸಿಎಂ ಆಗುತ್ತಿರಲಿಲ್ಲ, ಬಸನಗೌಡ ಯತ್ನಾಳ್!

ಬಿಎಸ್‌ವೈಗೆ ಸ್ವಾಮೀಜಿ ವಾರ್ನಿಂಗ್ : ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಂತೆ ಯಡಿಯೂರಪ್ಪ  ಅವರು ಒತ್ತಡ ಹಾಕುತ್ತಿರುವ ಬಗ್ಗೆ   ಕೆಲವರು ನಮ್ಮ ಗಮನಕ್ಕೆ ತಂದಿದ್ದಾರೆ.. ಬೊಮ್ಮಾಯಿ ಮೀಸಲಾತಿ ನೀಡಿದರೆ ಎಲ್ಲಿ ಲಿಂಗಾಯತ ಲೀಡರ್ ಆಗ್ತಾರೋ ಅಂತ ಯಡಿಯೂರಪ್ಪ ಅವರಿಗೆ ಹೊಟ್ಟೆ ಕಿಚ್ಚು ಇರಬಹುದು. ನಮ್ಮ ಹೋರಾಟಕ್ಕೆ ನೀವೇನಾದರೂ ತೊಂದರೆ ಮಾಡಿದ್ರೆ ನೀವು ಹೋದಲ್ಲೆಲ್ಲಾ ನಾವು ಕಪ್ಪು ಬಾವುಟ ಹಾರಿಸ್ತೀವಿ. ಶಿಕಾರಿಪುರದವರೆಗೆ ಪಾದಯಾತ್ರೆ ಮಾಡೋಕೂ  ನಾವು ರೆಡಿಯಾಗಿದ್ದೇವೆ ಎಂದು  ಜಯ ಮೃತ್ಯುಂಜಯ ಸ್ವಾಮೀಜಿ  ಯಡಿಯೂರಪ್ಪ  ಅವರಿಗೆ ಖಡಕ್  ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಭವಿಷ್ಯದಲ್ಲಿ  ಬೆಂಗಳೂರಿನಲ್ಲಿ ಈ ಸಂಬಂಧ ಬೃಹತ್ ಸಮಾವೇಶ ಮಾಡುತ್ತೇವೆ. ಶಾಸಕ ಯತ್ನಾಳ ಬೆಂಗಳೂರಿನಿಂದ ಆಗಮಿಸಿ ಮುಂದಿನ ಹೋರಾಟದ ರೂಪರೇಶೆಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಸ್ವಾಮೀಜಿ ಇದೇ ವೇಳೆ ಹೇಳಿದ್ದಾರೆ. 

ಪಂಚಮಸಾಲಿ ಹೋರಾಟಕ್ಕೆ ಅಡ್ಡಗಾಲು, ಯಡಿಯೂರಪ್ಪಗೆ ಕಪ್ಪು ಬಾವುಟದ ಎಚ್ಚರಿಕೆ ನೀಡಿದ

ಯಾರೋ ಒಬ್ಬ ಪ್ರಬಲ ವ್ಯಕ್ತಿಯ ಕೈವಾಡ ಇದರ ಹಿಂದಿದೆ. ಸೆ. 20ರ ಹೋರಾಟದ ಸಂದರ್ಭದಲ್ಲಿ ಆ ವ್ಯಕ್ತಿಯ ಹೆಸರನ್ನು ಬಹಿರಂಗ ಮಾಡುತ್ತೇನೆ ಎಂದು ಸ್ವಾಮೀಜಿ  ಹೇಳಿದ್ದರು ಅದರಂತೆ ಬಿಎಸ್‌ವೈ ಹೆಸರನ್ನು ಇಂದಿನ ಧರಣಿ ವೇಳೆ  ಬಹಿರಂಗ ಪಡಿಸಿದ್ದಾರೆ. ಮೀಸಲಾತಿ ವಿಚಾರವಾಗಿ ಸದನದ ಒಳಗೂ ಹೋರಾಟ ನಡೆಯಲಿದೆ. ಸಮಾಜದ ಶಾಸಕರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಲಿದ್ದಾರೆ. ನಾವು ಹೊರಗೆ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಈಗಾಗಲೇ ಹೇಳಿದ್ದಾರೆ.

click me!