Latest Videos

ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಪ್ರಥಮ ಸ್ಥಾನೀಕ ಅಯ್ಯಂಗಾರ್ ವಿಧಿವಶ

By Girish GoudarFirst Published Jun 16, 2024, 8:06 AM IST
Highlights

ಕರಗಂ ನಾರಾಯಣ ಅಯ್ಯಂಗಾರ್ ಅವರು ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ದೇವಾಲಯದಲ್ಲಿ ಸ್ಥಾನಿಕರಾಗಿದ್ದರು. ಕರಗಂ ನಾರಾಯಣ ಅಯ್ಯಂಗಾರ್ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದರು. ಅಯ್ಯಂಗಾರ್ ಅವರು  ನಿವೃತ್ತಿ ಬಳಿಕ ಚೆಲುವನಾರಾಯಣನ ಸೇವೆಗಾಗಿಯೇ ಇಡಿ ಜೀವನ ಮುಡಿಪಾಗಿಟ್ಟಿದ್ದರು. ಇನ್ನು ಶಿಕ್ಷಣ ಕ್ಷೇತ್ರದಲ್ಲೂ ದೀರ್ಘ ಅನುಪಮ ಸೇವೆಯನ್ನ ಸಲ್ಲಿಸಿದ್ದರು.

ಮಂಡ್ಯ(ಜೂ.16):  ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಪ್ರಥಮ ಸ್ಥಾನೀಕ ಕರಗಂ ನಾರಾಯಣ ಅಯ್ಯಂಗಾರ್ (82) ಇಂದು (ಭಾನುವಾರ) ವಿಧಿವಶರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಮುಗಿಯುವವರೆಗೂ ಮೇಲುಕೋಟೆ ದೇವಾಲಯ ಬಾಗಿಲು ಬಂದ್‌ ಆಗಿರಲಿದೆ.  ಮಧ್ಯಾಹ್ನ 12 ಗಂಟೆ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗವುದು ಎಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಮಾಹಿತಿ ಲಭ್ಯವಾಗಿದೆ. 

ಕರಗಂ ನಾರಾಯಣ ಅಯ್ಯಂಗಾರ್ ಅವರು ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ದೇವಾಲಯದಲ್ಲಿ ಸ್ಥಾನಿಕರಾಗಿದ್ದರು. ಕರಗಂ ನಾರಾಯಣ ಅಯ್ಯಂಗಾರ್ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದರು. ಅಯ್ಯಂಗಾರ್ ಅವರು  ನಿವೃತ್ತಿ ಬಳಿಕ ಚೆಲುವನಾರಾಯಣನ ಸೇವೆಗಾಗಿಯೇ ಇಡಿ ಜೀವನ ಮುಡಿಪಾಗಿಟ್ಟಿದ್ದರು. ಇನ್ನು ಶಿಕ್ಷಣ ಕ್ಷೇತ್ರದಲ್ಲೂ ದೀರ್ಘ ಅನುಪಮ ಸೇವೆಯನ್ನ ಸಲ್ಲಿಸಿದ್ದರು.

ಮನರಂಜನಾ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್ ನಿಧನ

ದೇವಾಲಯದ ಸಾಂಪ್ರದಾಯಿಕ ಗೌರವಗಳೊಂದಿಗೆ ಅಂತ್ಯಕ್ರಿಯೆ ನರವೇರಲಿದೆ. ಮೇಲುಕೋಟೆಯಲ್ಲಿ ಇಂದು ಕರಗಂ ನಾರಾಯಣ ಅಯ್ಯಂಗಾರ್ ಅಂತ್ಯಕ್ರಿಯೆ ನಡೆಯಲಿದೆ. ಕರಗಂ ನಾರಾಯಣ ಅಯ್ಯಂಗಾರ್ ಇಹಲೋಹ ತ್ಯಜಿಸಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. 

click me!