ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜನೆ ಮಾಡಲಾಗಿದ್ದ ಫ್ಲ್ಯಾಟ್ ಮೇಳದಲ್ಲಿ 150 ಖರೀದಿದಾರರಿಗೆ ಸ್ಥಳದಲ್ಲಿಯೇ ಹಂಚಿಕೆ ಪತ್ರವನ್ನು ನೀಡಲಾಯಿತು.
ಬೆಂಗಳೂರು (ಜೂ.15): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇಂದು ಕೋನದಾಸಪುರ ವಸತಿ ಸಮುಚ್ಛಯದಲ್ಲಿ ಆಯೋಜಿಸಿರುವ 'ಫ್ಲಾಟ್ ಮೇಳ'ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. 'ಫ್ಲಾಟ್ ಮೇಳ'ದಲ್ಲಿ ನಾಗರಬಾವಿ ಚಂದ್ರಾ ಬಡಾವಣೆಯಲ್ಲಿ 3 ಬಿ.ಹೆಚ್.ಕೆ. ಫ್ಲಾಟ್ ಗಳಲ್ಲಿ ಕೆಲವು ಫ್ಲಾಟ್ ಗಳು ಮಾತ್ರ ಹಂಚಿಕೆಗೆ ಲಭ್ಯವಿದ್ದು, ಉಳಿದ ಫ್ಲಾಟ್ ಗಳು ಮಾರಾಟವಾಗಿವೆ. ಕಣಿಮಿಣಿಕೆಯಲ್ಲಿ 2 ಬಿ.ಹೆಚ್.ಕೆ. ಫ್ಲಾಟ್ ಗಳು ಮತ್ತು ಕೋನದಾಸಪುರ ಹಂತ-2ರ (2 ಬಿ.ಹೆಚ್.ಕೆ) ‘ಎಫ್’ ಬ್ಲಾಕ್ ಹಂಚಿಕೆಗೆ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ.
ಬಿಡಿಎ ವತಿಯಿಂದ ಆಯೋಜಿಸಲಾದ 'ಫ್ಲಾಟ್ ಮೇಳ'ವು ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ನಡೆಸಲಾಗುತ್ತಿದೆ. ಬೆಳಗ್ಗೆ ಆರಂಭದಿಂದಲೇ ಅತಿ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, ಫ್ಲಾಟ್ ಮೇಳದಲ್ಲಿ ಒಟ್ಟಾರೆಯಾಗಿ 150 ಫ್ಲಾಟ್‌ಗಳು ಸ್ಥಳದಲ್ಲಿಯೇ ಮಾರಾಟವಾಗಿವೆ. ಈ ಪೈಕಿ ಒಂದೇ ದಿನ 75 ಫ್ಲಾಟ್ ಖರೀದಿದಾರರು ಹಂಚಿಕೆ ಪತ್ರವನ್ನು ಸ್ವೀಕರಿಸಿದ್ದಾರೆ. ಉಳಿದಂತೆ ಬಾಕಿ 75 ಫ್ಲಾಟ್ ಗಳ ಖರೀದಿದಾರರು ತಾಂತ್ರಿಕ ಕಾರಣಗಳಿಂದ ಆನ್ ಲೈನ್ ಮೂಲಕ ಫ್ಲಾಟ್ ಮೊತ್ತವನ್ನು ಪಾವತಿಲಾಗದೇ ಚೆಕ್ ಅನ್ನು ನೀಡಿರುತ್ತಾರೆ.
undefined
ದರ್ಶನ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಕೇಳಿದ್ದಕ್ಕೆ ಮುಖಕ್ಕೆ ಡಿಚ್ಚಿ, ಮೈಮೇಲೆ ಬಾಸುಂಡೆ ಕೊಟ್ಟರು!
ಇನ್ನು ಮುಂದಿನ ವಾರದ ಕಛೇರಿ ಸಮಯದಲ್ಲಿ ಆನ್ ಲೈನ್ ಮೂಲಕ ಪಾವತಿಸಿದ ನಂತರ ಚೆಕ್ ಅನ್ನು ಹಿಂತಿರುಗಿಸಿ ಹಂಚಿಕೆ ಪತ್ರವನ್ನು ನೀಡಲಾಗುವುದು. ಈ ಫ್ಲಾಟ್ ಮೇಳದಲ್ಲಿ ಸುಮಾರು 8 ಬ್ಯಾಂಕ್ ಗಳು ಭಾಗವಹಿಸಿದ್ದು, ಪ್ರತಿ ಬ್ಯಾಂಕ್ ಗಳಿಗೆ ಸಾಲ ಸೌಲಭ್ಯಕ್ಕಾಗಿ 10 ರಿಂದ 15 ಅರ್ಜಿಗಳು ಸ್ವೀಕೃತಗೊಂಡಿದೆ. ಫೆಬ್ರವರಿ ತಿಂಗಳ 'ಫ್ಲಾಟ್ ಮೇಳ'ದಲ್ಲಿ ಮಾರಾಟವಾದ 50 ಫ್ಲಾಟ್ ಗಳಿಗೆ ಈಗಾಗಲೇ ಶುದ್ಧ ಕ್ರಯಪತ್ರವನ್ನು ನೋಂದಾಯಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.