ಮೇಲಿನಕುರುವಳ್ಳಿ ಗ್ರಾಪಂಗೆ ಸ್ಪರ್ಧಿಸಿ ಕುರುವಳ್ಳಿ ನಾಗರಾಜ್ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿ ಗೋಪಾಲ ಪೂಜಾರಿ ಅವರನ್ನು ರಾಜ್ಯ ಉಚ್ಚ ನ್ಯಾಯಾಲಯವು ವಿಜೇತ ಅಭ್ಯರ್ಥಿ ಎಂದು ಘೋಷಿಸಿ, ತೀರ್ಪು ನೀಡಿದೆ.
ತೀರ್ಥಹಳ್ಳಿ (ಜು.7) : ಮೇಲಿನಕುರುವಳ್ಳಿ ಗ್ರಾಪಂಗೆ ಸ್ಪರ್ಧಿಸಿ ಕುರುವಳ್ಳಿ ನಾಗರಾಜ್ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿ ಗೋಪಾಲ ಪೂಜಾರಿ ಅವರನ್ನು ರಾಜ್ಯ ಉಚ್ಚ ನ್ಯಾಯಾಲಯವು ವಿಜೇತ ಅಭ್ಯರ್ಥಿ ಎಂದು ಘೋಷಿಸಿ, ತೀರ್ಪು ನೀಡಿದೆ.
2020ರಲ್ಲಿ ಮೇಲಿನ ಕುರುವಳ್ಳಿ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಮೇಲಿನಕುರುವಳ್ಳಿ ಭಾಗ-1ರಲ್ಲಿ ಬಿಸಿಎಂ ‘ಎ’ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕುರುವಳ್ಳಿ ನಾಗರಾಜ್ ಚುನಾವಣೆಯಲ್ಲಿ ತಮ್ಮ ಸಮೀಪದ ಅಭ್ಯರ್ಥಿ ಗೋಪಾಲ ಪೂಜಾರಿ ಅವರ ವಿರುದ್ಧ ಜಯ ಗಳಿಸಿದ್ದರು. ಕುರುವಳ್ಳಿ ನಾಗರಾಜ್ ನಾಮಪತ್ರದಲ್ಲಿ ತಮ್ಮ ಮೇಲೆ ನ್ಯಾಯಾಲಯದಲ್ಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖ ಮಾಡಿರಲಿಲ್ಲ ಎಂದು ಆರೋಪಿಸಿ, ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಗೋಪಾಲ ಪೂಜಾರಿ ದಾವೆ ಹೂಡಿದ್ದರು.
ಜುಲೈ 8ರಂದು ಮೆಗಾ ಲೋಕ್ ಅದಾಲತ್: 20 ಲಕ್ಷ ಕೇಸ್ ಇತ್ಯರ್ಥ ಗುರಿ
ನ್ಯಾಯಾಲಯ ಗೋಪಾಲ ಪೂಜಾರಿ ಅವರ ಮನವಿಯನ್ನು ಎತ್ತಿಹಿಡಿದಿತ್ತು. ಈ ತೀರ್ಪಿನ ವಿರುದ್ಧ ಕುರುವಳ್ಳಿ ನಾಗರಾಜ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅಪೀಲು ಹೂಡಿದ್ದರು. ಆದರೂ ತೀರ್ಪು ಗೋಪಾಲ ಪೂಜಾರಿ ಪರವಾಗಿದ್ದ ಕಾರಣ ಅವರನ್ನು ಅಧಿಕೃತ ಸದಸ್ಯ ಎಂದು ಘೋಷಿಸಲಾಗಿದೆ.