ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂದಾನ ಪೈಸಾರಿಯ ಗ್ರಾಮದಲ್ಲಿ ಭಾರಿ ಮಳೆ ಗಾಳಿಗೆ ಟಿಸಿಎಲ್ ತೋಟದ ಭಾರಿ ಗಾತ್ರದ ಒಣಗಿದ ಮರ ಬಿದ್ದ ಪರಿಣಾಮ 5 ವಾಸದ ಮನೆಗಳ ಮೇಲ್ಛಾವಣಿ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸುಂಟಿಕೊಪ್ಪ (ಜು.7) : ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂದಾನ ಪೈಸಾರಿಯ ಗ್ರಾಮದಲ್ಲಿ ಭಾರಿ ಮಳೆ ಗಾಳಿಗೆ ಟಿಸಿಎಲ್ ತೋಟದ ಭಾರಿ ಗಾತ್ರದ ಒಣಗಿದ ಮರ ಬಿದ್ದ ಪರಿಣಾಮ 5 ವಾಸದ ಮನೆಗಳ ಮೇಲ್ಛಾವಣಿ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶುಕ್ರವಾರ ಬೆಳಗ್ಗೆ 7.30 ಗಂಟೆಯ ಸಂದರ್ಭ ಅತ್ತೂರು ನಲ್ಲೂರು ಟಾಟಾ ಕಾಫಿ ತೋಟದಲ್ಲಿ ಒಣಗಿ ನಿಂತಿದ್ದ ಭಾರಿ ಗಾತ್ರದ ನಂದಿ ಮರವು ಕಳೆದ 2 ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಬೇರು ಸಮೇತ ಭೂದಾನ ಪೈಸಾರಿಯ ಐಸು ಕುಂಞಮಮ್ಮದ್ ಎಂಬವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ, ಗೋಡೆ, ಮನೆಯ ಗೃಹಪಯೋಗಿ ವಸ್ತುಗಳು ಮನೆಯ ಮುಂಭಾಗದ ದಿನಸಿ ಅಂಗಡಿಯ ಸಾಮಗ್ರಿಗಳು ಹಾನಿಗೀಡಾಗಿದೆ.
undefined
Kodagu: ರಸ್ತೆಗಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧಾರ, ಅಭ್ಯರ್ಥಿಗಳಿಗೆ ಹೊಡೆತ!
ಮರ ಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ 5 ವಿದ್ಯುತ್ ಕಂಬಗಳು ಉರುಳಿದ್ದು ಇದರಿಂದ ಮರಿಯ ಶೆಟ್ಟಿ, ಶಿವು, ಪ್ರಶಾಂತ್ ಹಾಗೂ ರೋಶಿನಿ ತೋಟದ ಗೇಟಿನ ಮೇಲೆ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗಳು ಸಂಪೂರ್ಣ ಹಾನಿಗೊಂಡಿದ್ದು ಸಾವಿರಾರು ರು. ನಷ್ಟವುಂಟಾಗಿರುವ ಬಗ್ಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಗಳು ಸಂಭವಿಸಿರುವುದಿಲ್ಲ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಉಪತಹಸೀಲ್ದಾರ್ ಶಿವಪ್ಪ, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ ಲೆಕ್ಕಿಗೆ ನಸ್ಸೀಮ, ಗ್ರಾಮ ಸಹಾಯಕ ಶಿವಪ್ಪ ಪರಿಶೀಲಿಸಿ ನಷ್ಟಪರಿಹಾರದ ಅಂದಾಜು ಪಟ್ಟಿತಯಾರಿಸಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿ, ಚೆಸ್ಕಾಂ ಕಿರಿಯ ಅಭಿಯಂತರರಾದ ಲವ, ಸಿಬ್ಬಂದಿ ಹಾಗೂ ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುನಾಗಪ್ಪ, ಸದಸ್ಯರಾದ ಕೆ.ಬಿ.ಕೃಷ್ಣ, ಆರ್.ಆರ್. ಮೋಹನ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಮತಿ ಹಾಗೂ ಗ್ರಾಮಸ್ಥರು ಭೇಟಿ ನೀಡಿದರು.
Kodagu: ಸುಂಟಿಕೊಪ್ಪದಲ್ಲಿ ಕೆಇಬಿ ಮತ್ತು ಪಂಚಾಯಿತಿ ಪೈಟ್: ತೆರಿಗೆ ಕಟ್ಟದ ಅಂಗಡಿಗಳ ಬಂದ್
ಚಿತ್ರ.1: ಅತ್ತೂರು ನಲ್ಲೂರು ಟಾಟಾ ಕಾಫಿ ತೋಟದಲ್ಲಿ ಒಣಗಿ ನಿಂತಿದ್ದ ಬಾರೀ ಗಾತ್ರದ ನಂದಿ ಮರ ಬಿದ್ದಿರುವುದು.2: 5 ವಿದ್ಯುತ್ ಕಂಬಗಳು ಉರುಳಿ ಬಿದಿರುವುದು.