ಯಾದಗಿರಿ ಮತ್ತು ಮೈಸೂರಿನಲ್ಲಿ ಬೌದ್ಧ ಧರ್ಮದ ಮತಾಂತರಕ್ಕೆ ಮುಂದಾದ ಜನ

Published : Oct 11, 2022, 12:23 AM IST
ಯಾದಗಿರಿ ಮತ್ತು ಮೈಸೂರಿನಲ್ಲಿ ಬೌದ್ಧ ಧರ್ಮದ ಮತಾಂತರಕ್ಕೆ ಮುಂದಾದ ಜನ

ಸಾರಾಂಶ

ಯಾದಗಿರಿಯಲ್ಲೂ ಬೌದ್ಧ ಧರ್ಮದ ಮತಾಂತರಕ್ಕೆ ಜನ ಮುಂದಾಗಿದ್ದಾರೆ. ಹಿಂದೂ ದೇವರು ಪೊಟೋ ಹಾಗೂ ಮೂರ್ತಿ ಕೃಷ್ಣಾ ನದಿಗೆ ಎಸೆದು ಸುರಪುರ ನಿವಾಸಿ ಮತಾಂತರಕ್ಕೆ ಮುಂದಾಗಿದ್ದಾರೆ. ಮೈಸೂರಿನಲ್ಲೂ ಅ.14 ರಂದು ದಲಿತರು, ಅಸ್ಪೃಶ್ಯರು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಲಿದ್ದಾರೆ.

ಯಾದಗಿರಿ (ಅ.11): ಯಾದಗಿರಿಯಲ್ಲೂ ಬೌದ್ಧ ಧರ್ಮದ ಮತಾಂತರಕ್ಕೆ ಜನ ಮುಂದಾಗಿದ್ದಾರೆ. ಹಿಂದೂ ದೇವರು ಪೊಟೋ ಹಾಗೂ ಮೂರ್ತಿ ಕೃಷ್ಣಾ ನದಿಗೆ ಎಸೆದು ಸುರಪುರ ನಿವಾಸಿ ಮತಾಂತರಕ್ಕೆ ಮುಂದಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ನಗರದ ವೆಂಕಟೇಶ ಹೊಸಮನಿ ಎಂಬ ನಿವಾಸಿ ತಮ್ಮ ಮನೆಯಲ್ಲಿ‌ರುವ ಹಿಂದೂ ದೇವರುಗಳ ಕೃಷ್ಣಾ ನದಿಗೆ ಸಮರ್ಪಣೆ ಮಾಡಿದ್ದು.  ವೆಂಕಟೇಶ ಹೊಸಮನಿ ಸುರಪುರದ ತಾಲೂಕು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಎಂದು ತಿಳಿದುಬಂದಿದೆ. ಬೌದ್ಧ ಧರ್ಮದ ಅಧ್ಯಕ್ಷರಾಗಿ ನಿಮ್ಮ ಮನೆಯಲ್ಲಿ ಹಿಂದೂ ದೇವರ ಪೊಟೊ ಇಟ್ರೆ ಹೇಗೆ ಎಂದು ಪ್ರಶ್ನಿಸಿದ್ದರಂತೆ. ಹಾಗಾಗಿ ತನ್ನ ಮನೆಯಲ್ಲಿನ ಲಕ್ಷ್ಮೀ, ವೆಂಕಟೇಶ್ವರ, ಸರಸ್ವತಿ ಸೇರಿದಂತೆ ಹಲವು ಪೊಟೋಗಳನ್ನು ಮೂರ್ತಿಗಳನ್ನು ಕೃಷ್ಣಾ ನದಿಗೆ ಹಾಕಿದ್ದಾರೆ. ಅ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಅಂಬೇಡ್ಕರ್ ಆಗಮಿಸುವ ಸಾಧ್ಯತೆ ಇದ್ದು, ಅಂದು ಹಲವು ಜನರೊಂದಿಗೆ  ವೆಂಕಟೇಶ ಹೊಸಮನಿ ಬೌದ್ಧ ಧಮ್ಮ ದೀಕ್ಷಾ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಕ್ರಮ ಮಾಡಿ ಹಲವು ಜನ ಬೌದ್ಧ ಧರ್ಮಕ್ಕೆ ಮತಾಂತರ ಆಗಲಿದ್ದಾರೆ. ವೆಂಕಟೇಶ ಹೊಸಮನಿಯವರು ಬೌದ್ಧ ಧರ್ಮಕ್ಕೆ ಮತಾಂತರ ಅಗಲಿದ್ದಾರೆ. ಹಾಗಾಗಿ ಹಿಂದೂ ಧರ್ಮ ಮರೆತು, ಬೌದ್ಧ ಕಾಲಿಡುತ್ತಿದ್ದೇವೆ ಎಂದು ದಲಿತ ಮುಖಂಡ ನಾಗರಾಜ ಕಲ್ಲದೇವನಹಳ್ಳಿ ಹೇಳಿಕೆ ನೀಡಿದ್ದಾರೆ. 

ಮೈಸೂರು:14 ರಂದು ದಲಿತರು, ಅಸ್ಪೃಶ್ಯರು ಬೌದ್ಧ ಧರ್ಮಕ್ಕೆ ಸೇರ್ಪಡೆ
ಮೈಸೂರು ತಾಲೂಕಿನ ಬ್ಯಾತಹಳ್ಳಿಯ ಟಿವಿಎಸ್‌ ಕಾರ್ಖಾನೆ ಹತ್ತಿರದ ಬುದ್ಧ ವಿಹಾರದಲ್ಲಿ ಅ.14 ರಂದು ನೂರಾರು ಮಂದಿ ದಲಿತರು, ಅಸ್ಪೃಶ್ಯರು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮಹಿಷಾ ಮಂಡಲ ಅಂತಾರಾಷ್ಟ್ರೀಯ ಬುದ್ಧಿಸ್ಟ್‌ ಕಲ್ಚರಲ್‌ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಶಾಂತರಾಜು ತಿಳಿಸಿದರು.

ದೇಶದಲ್ಲಿ ಅಸ್ಪೃಶ್ಯತೆ ವಿರೋಧಿ ಕಾಯ್ದೆ ಜಾರಿಯಲ್ಲಿದ್ದರೂ ಅಸ್ಪೃಶ್ಯರನ್ನು ದೂರ ತಳ್ಳಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯರಿಗೆ ಸಮಾನತೆ ನೀಡುತ್ತಿಲ್ಲ. ಇದರಿಂದ ಬೇಸತ್ತವರು ಅಂಬೇಡ್ಕರ್‌ ಅವರ ಹಾದಿಯನ್ನು ಅನುಸರಿಸಲಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ

ಸಮುದಾಯದ ಶಾಸಕರಾದ ಎನ್‌. ಮಹೇಶ್‌ ಅಂತಹವರು ಹಿಂದೆ ಮಾತನಾಡುತ್ತಿದ್ದುದಕ್ಕೂ ಈಗ ಮಾತನಾಡುವುದಕ್ಕೂ ವ್ಯತ್ಯಾಸವಿದೆ. ಗೋವಾಳ್ಕರ್‌ ಅವರಿಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಹೋಲಿಸುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಅವರು ಕಿಡಿಕಾರಿದರು.

ದೆಹಲಿಯ ಆಪ್‌ ಸಚಿವನಿಂದ Hindu ವಿರೋಧಿ ಪ್ರಮಾಣ: ಗೌತಮ್ ವಜಾ ಮಾಡಲು BJP ಆಗ್ರಹ

ಅ. 14 ರಂದು ರಾಷ್ಟ್ರಾದ್ಯಂತ ಇದೇ ರೀತಿಯ ಬೌದ್ಧ ಧರ್ಮ ಪ್ರವೇಶ ಕಾರ್ಯಕ್ರಮಗಳು ನಡೆಯುತ್ತಿವೆ. ಅದರಂತೆ ಇಲ್ಲಿಯೂ ನಡೆಯುತ್ತಿದೆ. ಅಂದು ಬೌದ್ಧ ಧರ್ಮ ಪ್ರವೇಶಿಸಿದವರು ಗೌರವಯುತವಾಗಿ ತಮ್ಮ ತಮ್ಮ ಮನೆಗಳಲ್ಲಿನ ಹಿಂದೂ ದೇವರ ವಿಗ್ರಹ ಹಾಗೂ ವರ್ಣಚಿತ್ರಗಳನ್ನು ಹೊರಗೆ ಹಾಕಲಿದ್ದಾರೆ ಎಂದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಿಕ್ಕಂದಾನಿ, ಖಜಾಂಚಿ ಸಿ. ರವೀಶ್‌, ಚೆಕ್ಕೂರು ನಾಗರಾಜು, ಹೊರಳವಾಗಿ ನಂಜುಂಡಸ್ವಾಮಿ ಇದ್ದರು.

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?