* ಬೌರಿಂಗ್ ಆಸ್ಪತ್ರೆಗೆ 20 ವೆಂಟಿಲೇಟರ್, 50 ಆಮ್ಲಜನಕ ಸಾಂದ್ರಕ ಕೊಡುಗೆ
* ಕೋವಿಡ್ 3ನೇ ಅಲೆ ಎದುರಿಸಲು ರೋಟರಿ ಕ್ಲಬ್ & ಬಿಪ್ಯಾಕ್ ದಾನ
* ಡಿಸಿಎಂ ಡಾ.ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಹಸ್ತಾಂತರ
ಬೆಂಗಳೂರು, (ಜೂನ್. 08): ಕೋವಿಡ್ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಬೆಂಗಳೂರು ರೋಟರಿ ಕ್ಲಬ್ (South Parade-RCBC) ಹಾಗೂ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (BPAC) ನಗರದ ಬೌರಿಂಗ್ ಆಸ್ಪತ್ರೆಗೆ 20 ವೆಂಟಿಲೇಟರ್ ಹಾಗೂ 50 ಆಮ್ಲಜನಕ ಸಾಂದ್ರಕಗಳನ್ನು ದಾನವಾಗಿ ನೀಡಿವೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎರಡೂ ಸಂಸ್ಥೆಗಳ ಪ್ರತಿನಿಧಿಗಳು “ಬೆಂಗಳೂರು ಪುಟಿದೇಳಲು ನೆರವಾಗೋಣ” ಎಂಬ ಪರಿಕಲ್ಪನೆಯಡಿ ಈ ಉಪಕರಣಗಳನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಬೌರಿಂಗ್ ಆಸ್ಪತ್ರೆ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು.
undefined
ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಆಕ್ಸಿಜನ್ ಸಾಂದ್ರಕ ಹಸ್ತಾಂತರಿಸಿದ ಡಿಸಿಎಂ
ಈ ಉಪಕರಣಗಳನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲು ದಾನಿಗಳು ಮನವಿ ಮಾಡಿದ್ದಾರೆ. ಅವರ ಇಚ್ಛೆಯಂತೆ ಸೋಂಕಿತರ ಚಿಕಿತ್ಸೆಗೇ ಇವುಗಳನ್ನು ಬಳಕೆ ಮಾಡಲಾಗುವುದು. ಸಂಸ್ಥೆಗಳ ಈ ಮಹಾತ್ಕಾರ್ಯವನ್ನು ಡಿಸಿಎಂ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್‌ನ ರವಿ ಪ್ರಸಾದ್, ರೋಟರಿಯ ಬೆಂಗಳೂರು ಕಂಟೋನ್ಮೆಂಟ್ ಅಧ್ಯಕ್ಷ ವಿನೋದ್ ಜಾನ್,
ಕಾರ್ಯದರ್ಶಿ ಆನಂದ ರಾಮಚಂದ್ರನ್, ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ ಸಿಇಒ ರೇವತಿ ಅವರು ಇದ್ದರು.