ನಾನು ಸಿದ್ದು ಅಣ್ಣ ತಮ್ಮಂದಿರಂತೆ: ಬರ್ತ್‌ಡೇ ಸಂದರ್ಭ ಜಿಟಿಡಿ ಮಾತು

By Web DeskFirst Published Nov 25, 2019, 8:35 AM IST
Highlights

ನಾನು ಹಾಗೂ ಸಿದ್ದರಾಮಯ್ಯ ಅಣ್ಣ ತಮ್ಮಂದಿರಂತೆ ಎಂದು ಮಾಜಿ ಸಚಿವ ಜಿ. ಟಿ. ದೇವೇಗೌಡ ಹೇಳಿದ್ದಾರೆ. ಹುಣಸೂರಿನಲ್ಲಿ ತಮ್ಮ 70ನೇ ಹುಟ್ಟುಹಬ್ಬದ ಸಂದರ್ಭ ಮಾತನಾಡಿದ ಅವರು, ಸಿದ್ದರಾಮಯ್ಯ ನನ್ನ ಬೆಂಬಲ ಕೇಳಿದ್ದಾರೆ, ಒಳ್ಳೆಯದಾಗಲಿ ಅಂತ ಹೇಳಿದ್ದೇನೆ ಎಂದಿದ್ದಾರೆ

ಮಂಡ್ಯ(ನ.25): ನಾನು ಹಾಗೂ ಸಿದ್ದರಾಮಯ್ಯ ಅಣ್ಣ ತಮ್ಮಂದಿರಂತೆ ಎಂದು ಮಾಜಿ ಸಚಿವ ಜಿ. ಟಿ. ದೇವೇಗೌಡ ಹೇಳಿದ್ದಾರೆ. ಹುಣಸೂರಿನಲ್ಲಿ ತಮ್ಮ 70ನೇ ಹುಟ್ಟುಹಬ್ಬದ ಸಂದರ್ಭ ಮಾತನಾಡಿದ ಅವರು, ಸಿದ್ದರಾಮಯ್ಯ ನನ್ನ ಬೆಂಬಲ ಕೇಳಿದ್ದಾರೆ, ಒಳ್ಳೆಯದಾಗಲಿ ಅಂತ ಹೇಳಿದ್ದೇನೆ ಎಂದಿದ್ದಾರೆ.

ಮೈಸೂರಿನ ಹುಣಸೂರಿನಲ್ಲಿ 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿ, ನಾನು ಸಿದ್ದರಾಮಯ್ಯ ಅಣ್ಣತಮ್ಮಂದಿರಂತೆ ಎಂದು ಹೆಳಿದ್ದಾರೆ. ಜಿಟಿಡಿ ನಿವಾಸದಲ್ಲಿ ಅವರ ಹುಟ್ಟುಹಬ್ಬದ ಸಂದರ್ಭ ಅದ್ಧೂರಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದು ಈ ಸಂದರ್ಭ ಅವರು ಮಾತನಾಡಿದ್ದಾರೆ.

3 ವರ್ಷದ ನಂತರ ಕ್ಷೇತ್ರದಲ್ಲಿ ಸಕ್ರಿಯ

ಸುಧೀರ್ಘ ರಾಜಕೀಯದಲ್ಲಿ ಚಿಕ್ಕಂದಿನಿಂದ ಜನರ ಸೇವೆ ಮಾಡಿದ ತೃಪ್ತಿ ನನಗಿದೆ. ಕಳೆದ ವರ್ಷ ಅಂಬರೀಶ್ ತೀರಿಕೊಂಡಿದ್ದರಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹುಣಸೂರು ಉಪಚುನಾವಣೆಯಲ್ಲಿ ನನ್ನ ನಿಲುವು ಈಗಲೂ ತಟಸ್ಥ. ಹುಣಸೂರು ಉಪಚುನಾವಣೆಯಲ್ಲಿ ನನ್ನ ನಿಲುವು ಬದಲಾಗೋದಿಲ್ಲ. ನನ್ನ ಈ ನಿವಲುವು ಕೇವಲ‌ ಮೂರು ವರ್ಷಕ್ಕೆ ಮಾತ್ರ, ಶಾಶ್ವತ ಅಲ್ಲ. ನಂತರ ಹುಣಸೂರು ಕ್ಷೇತ್ರದಲ್ಲಿ ನಾನು ಸಕ್ರಿಯನಾಗುತ್ತೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ, ದೇವೇಗೌಡ್ರನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿದ ವಿಶ್ವನಾಥ್....!

ಶ್ರೀರಾಮುಲು ನನ್ನ ಗೆಳೆಯ, ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬರುತ್ತಾರೆ. ಸಿದ್ದರಾಮಯ್ಯರಿಂದಲೇ ನಾನು ಚುನಾವಣಾ ರಾಜಕೀಯ ಆರಂಭಿಸಿದ್ದು. ಯಾವ ದೇವರ ವರವೋ‌ ಗೊತ್ತಿಲ್ಲ. ಹಿಂದಿನ ಜನ್ಮದಲ್ಲಿ ಅಣ್ಣತಮ್ಮಂದಿರಾಗಿ‌ ಹುಟ್ಟಿರಲಿಲ್ಲವೂ ಗೊತ್ತಿಲ್ಲ. ಈಗ 1983 ರಿಂದ ಜೊತೆಯಾಗಿ ಇದ್ದೇವೆ. ನಾನು ಯಾವತ್ತೂ ಸಿದ್ದರಾಮಯ್ಯಗೆ ವಿರುದ್ಧವಾಗಿ ಮಾತನಾಡಿಲ್ಲ ಎಂದಿದ್ದಾರೆ.

ಶ್ರೀಗಳೊಂದಿಗೆ ಮಾಧುಸ್ವಾಮಿ ಸಂಧಾನ: BJP ಅಭ್ಯರ್ಥಿ ವಿಶ್ವನಾಥ್‌ಗೆ ಜಾಕ್‌ಪಾಟ್

ಮೂರು ಪಕ್ಷದ ಮುಖಂಡರು, ಅಭ್ಯರ್ಥಿಗಳು ನನ್ನ ಬಂದು ಬೆಂಬಲ ಕೇಳಿದ್ದಾರೆ. ಈ ಬಾರಿ ಹುಣಸೂರು ಜನತೆಗೆ ಜ್ಞಾನೋದಯ ಆಗಲಿ. ಅವರಿಗೆ ಯಾವ ನಾಯಕ ಬೇಕು ಅವರನ್ನ ಆಯ್ಕೆ ಮಾಡಿಕೊಳ್ಳಲಿ. ಹುಣಸೂರು ಜನರಿಗೆ ನೋವಿದೆ. ಹರೀಶ್‌ಗೌಡ ಅಭ್ಯರ್ಥಿ ಆಗಬೇಕು ಎಂಬ ನೋವಿದೆ. ನನಗೂ ಜನರ ಪ್ರೀತಿ ನೋಡಿ ನೋವಾಗಿದೆ. ನಾನು ಬಿಜೆಪಿ ಬಳಿ ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ಸಿದ್ದರಾಮಯ್ಯ ಕೂಡ ನನ್ನ ಬೆಂಬಲ ಕೇಳಿದ್ದಾರೆ, ಒಳ್ಳೆಯದಾಗಲಿ ಅಂತ ಹೇಳಿದ್ದೇನೆ.

ಅನರ್ಹರನ್ನು ಬಿಜೆಪಿ ಕಾರ್ಯಕರ್ತರೂ ಕೂಡ ಒಪ್ಪುತ್ತಿಲ್ಲ ಎಂದ ಗುಂಡೂರಾವ್

click me!