ಗೌಹಾಟಿಯಲ್ಲಿ ಬಾಗಲಕೋಟೆ ಮೂಲದ BSF ಯೋಧ ಸಾವು

By Web Desk  |  First Published Nov 25, 2019, 8:27 AM IST

ಅನಾರೋಗ್ಯದಿಂದ ಗೌಹಾಟಿಯಲ್ಲಿ ಬಾಗಲಕೋಟೆ ಮೂಲಲದ ಬಿಎಸ್ ಎಫ್ ಯೋಧ ಸಾವು| ಛಬ್ಬಿ ಗ್ರಾಮದ ಯೋಧ ಚಂದ್ರಶೇಖರ ಮುಳಗುಂದ| 2000 ರಲ್ಲಿ  ಸೈನಿಕ ಸೇವೆಗೆ ಸೇರಿದ್ದ ಚಂದ್ರಶೇಖರ ಮುಳಗುಂದ| 


ಬಾಗಲಕೋಟೆ(ನ.25): ಗೌಹಾಟಿಯಲ್ಲಿ ಬಾಗಲಕೋಟೆ ಮೂಲಲದ ಬಿಎಸ್ ಎಫ್ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಮೃತ ಯೋಧನನ್ನು ಚಂದ್ರಶೇಖರ ಮುಳಗುಂದ(41) ಎಂದು ಗುರುತಿಸಲಾಗಿದೆ. 
ತಾಲೂಕಿನ ಛಬ್ಬಿ ಗ್ರಾಮದ ಯೋಧ ಚಂದ್ರಶೇಖರ ಮುಳಗುಂದ ಅವರು 2000 ರಲ್ಲಿ  ಸೈನಿಕ ಸೇವೆಗೆ ಸೇರಿದ್ದರು.

ಪತ್ನಿ, ಇಬ್ಬರು ಮಕ್ಕಳು,ತಾಯಿಯನ್ನ ಯೋಧ ಚಂದ್ರಶೇಖರ ಮುಳಗುಂದ ಅಗಲಿದ್ದಾರೆ. ಪಾರ್ಥೀವ ಶರೀರ ಇಂದು ಸ್ವಗ್ರಾಮ ಛಬ್ಬಿ ಗ್ರಾಮಕ್ಕೆ ಬರಲಿದೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಶೇಷ ವಿಮಾನದ ಮೂಲಕ ಪಾರ್ಥೀವ ಶರೀರ ಬರಲಿದೆ. ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 
 

click me!