ಚಿಕ್ಕೋಡಿ (ಆ.12) : ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರಿಂದ ಭಾವೈಕ್ಯತೆಯ ಬಾವುಟ ಎಂಬ ಶೀರ್ಷಿಕೆ ಅಡಿ ಬೃಹತ್ ಬೈಕ್ ಯಾತ್ರೆ ಕಾರ್ಯಕ್ರಮವು ನೆರವೇರಲಿದೆ. ಮುಗಳಖೋಡ(Mugalkhod) .75ನೇ ಸ್ವಾತಂತ್ರೋತ್ಸವ ಹಾಗೂ ಅಮೃತ ಮಹೋತ್ಸವದ ನಿಮಿತ್ಯ ಮುಗಳಖೋಡ- ಜಿಡಗಾ ಮಠದ(Jidga mutt) ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ(Shadakshari Shivayoga Dr.Murugharajendra Mahaswamiji) ಅವರಿಂದ ಭಾವೈಕ್ಯತೆಯ ಬಾವುಟ ಎಂಬ ಶೀರ್ಷಿಕೆ ಅಡಿ ಬೃಹತ್ ಬೈಕ್ ಯಾತ್ರೆ ಕಾರ್ಯಕ್ರಮವು ನೆರವೇರಲಿದೆ.
India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
ಮುಗಳಖೋಡ ಗುರು ಪರಂಪರೆ ಎಂದರೆ ಅದು ಒಂದು ಪುಣ್ಯಕ್ಷೇತ್ರ. ಭಾರತದ ಭಾವೈಕ್ಯತೆಯನ್ನು ಸಾರುವ ಕೇಂದ್ರ ಸ್ಥಾನವಿದ್ದಂತೆ. ಇಲ್ಲಿ ಜಾತಿ, ಮತ, ಪಂಥಗಳೆಂಬ ಎಂಜಡವಿಲ್ಲ, ಸರ್ವರು ಒಂದೇ ಎಂಬ ಸಮಾನತೆಯ ಸಮಭಾವ ತುಂಬಿ ತುಳುಕುವಂತಹ ಆಧ್ಯಾತ್ಮ ಕೇಂದ್ರ ಎಂದರೆ ಅದು ಮುಗಳಖೋಡ. ಇಂತಹ ಮಹಾನ್ ಪುಣ್ಯ ಕ್ಷೇತ್ರದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿಯವರು ಆಧ್ಯಾತ್ಮದೊಂದಿಗೆ ರಾಷ್ಟ್ರ ಗೌರವೂ ಅಷ್ಟೇ ಮುಖ್ಯವೆಂಬ ಸಂಕಲ್ಪ ಹೊಂದಿರುವ ಶ್ರೀಗಳು ಇದೇ ದಿನಾಂಕ 13.08.2022 ರಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಾತೃಭೂಮಿಗೆ ಆದರ ಪೂರಕವಾದ ಗೌರವವನ್ನು ಸಲ್ಲಿಸುವ ಸಲುವಾಗಿ ಬೃಹತ್ ಬೈಕ್ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
ದಿನಾಂಕ 13 ರಂದು ಬೆಳಗ್ಗೆ 9:00ಕ್ಕೆ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಬ್ರಹನ್ಮಠದ ಆವರಣದ ಮುಂದೆ ಪೂಜ್ಯ ಶ್ರೀಗಳು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವರು. ಬಳಿಕ ಶ್ರೀಮಠದಿಂದ ಪ್ರಾರಂಭವಾಗುವ ಬೈಕ್ ಯಾತ್ರೆಯಲ್ಲಿ ಸುಮಾರು 5000 ಬೈಕ್ ಗಳು ಪಾಲ್ಗೊಳ್ಳಲಿದ್ದು, ಮುಗಳಖೋಡ ಸೇರಿದಂತೆ ವಿವಿಧ ಹಳ್ಳಿಗಳಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬೈಕ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೈಕ್ ಯಾತ್ರೆಯು ಮಧ್ಯಾಹ್ನ ಸುಕ್ಷೇತ್ರ ಕೋಳಿಗುಡ್ಡ ಗ್ರಾಮವನ್ನು ತಲುಪಿದ ಬಳಿಕ ಗ್ರಾಮ ದೇವತೆಯಾದ ಶ್ರೀ ಕಾಳಿಕಾದೇವಿ ಗುಡ್ಡದ ಕಾಳಿಕಾ ವನದಲ್ಲಿ ಪರಮಪೂಜ್ಯ ಷಡಕ್ಷರಿ ಶಿವಯೋಗಿ ಡಾಕ್ಟರ್ ಮುರುಘರಾಜೇಂದ್ರ ಮಹಾಸ್ವಾಮಿಜಿಯವರು ತಮ್ಮ ಅಮೃತ ಹಸ್ತದಿಂದ ತ್ರಿವರ್ಣ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ನಂತರ ದೇಶಭಕ್ತಿ ಕುರಿತು ವಿಶೇಷವಾದ ಕಾರ್ಯಕ್ರಮಗಳು ಜರುಗಲಿವೆ.