ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಮೇ.9): ಒಂದು ಕಾಲದಲ್ಲಿ ಅಕ್ರಮ ಗಣಿಗಾರಿಕೆಯಿಂದ ಹೆಸರುವಾಸಿಯಾಗಿದ್ದ ಬಳ್ಳಾರಿಯಲ್ಲಿಗ ಎಗ್ಗಿಲ್ಲದೇ ನಡೆದಿದೆ ಮಟ್ಕಾ ಓಸಿ ದಂಧೆ. ಇದನ್ನು ನಿಯಂತ್ರಣ ಮಾಡೋ ಹಿನ್ನೆಲೆ ಎಷ್ಟೇ ಎಚ್ಚರಿಕೆ ಕೊಟ್ಟರೂ,ಕ್ರಮ ಕೈಗೊಂಡರು, ಕೇಸು ದಾಖಲಿಸಿದ್ರು ಮಟ್ಕಾ ದಂಧೆ ಮಾತ್ರ ಎಗ್ಗಿಲ್ಲದೇ ಮುಂದುವರೆದಿದೆ. ಮಟ್ಕಾ ದಂಧೆಗೆ ಕಡಿವಾಣ ಹಾಕಲು ಖಾಕಿ ಪಡೆ ಈಗ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಮಟ್ಕಾ ಮಾಫಿಯಾ ಮಟ್ಟ ಹಾಕಲು ಬಳ್ಳಾರಿ ಪೊಲೀಸರು ಮಾಡಿದ ಮಾಸ್ಟರ್ ಪ್ಲ್ಯಾನ್ ಗಡಿಪಾರು. ಹೌದು, ಗಡಿಪಾರಿನ ಅಸ್ತ್ರಕ್ಕೆ ರೌಡಿಶೀಟರ್ ಗಳು ನಲುಗಿ ಹೋಗಿದ್ದಾರೆ.
undefined
ಮಟ್ಕಾ ದಂಧೆಕೋರರ ನಿದ್ದೆಗೆಡಿಸಿದೆ ಗಡಿಪಾರು ಅಸ್ತ್ರ: ಗಣಿ ನಾಡು ಬಳ್ಳಾರಿ ಎಂದರೆ ಇಲ್ಲಿ ಸಕ್ರಮಕ್ಕಿಂತ ಅಕ್ರಮವೇ ಜಾಸ್ತಿ ಎನ್ನುವ ಮಾತಿದೆ. ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ಸಾಗಾಣಿಕೆ, ಅಕ್ರಮವಾಗಿ ಮಧ್ಯ ಮಾರಾಟ. ಒಂದಲ್ಲ ಎರಡಲ್ಲ ಹತ್ತಾರು ಅಕ್ರಮ ದಂಧೆಗಳಿಂದ ಬಳ್ಳಾರಿ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಅದಕ್ಕಾಗಿ ಅಕ್ರಮ ಮಾಡುವವರ ವಿರುದ್ದ ಬಳ್ಳಾರಿ ಪೊಲೀಸರೀಗ ಹೊಸದೊಂದು ಅಸ್ತ್ರ ಪ್ರಯೋಗಿಸಿದ್ದಾರೆ. ಅದೇನಂದ್ರೇ, ಮಟ್ಕಾ ಮಾಫಿಯಾ ಮಟ್ಟ ಹಾಕಲು ಗಡಿಪಾರು ಶುರು ಮಾಡಿದ್ದಾರೆ.
ಬಳ್ಳಾರಿಯಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಿದಕ್ಕಿಂತ ಇವರು ಜಿಲ್ಲೆಯಲ್ಲಿ ಅಕ್ರಮ ದಂಧೆಗಳನ್ನೆ ಮಾಡಿದ್ದೆ ಹೆಚ್ಚು. ಹೀಗಾಗಿ ಈ ರೌಡಿ ಶೀಟರ್ ಗಳ ವಿರುದ್ದ ಬಳ್ಳಾರಿ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿ ಈಗ ಯಶ್ವಸಿಯಾಗಿದ್ದಾರೆ. ಕಳೆದ ತಿಂಗಳು ರೌಡಿ ಶೀಟರ್ ಗಳ ಪೇರೆಡ್ ನಡೆಸಿದ ಬಳ್ಳಾರಿ ಪೊಲೀಸರು ಮಟ್ಕಾ ದಂಧೆ ಮಾಡೋರ ಪಟ್ಟಿ ರೆಡಿ ಮಾಡಿದ್ದು, ಮಟ್ಕಾ ಮಾಫಿಯಾದವರ ವಿರುದ್ದ ಗಡಿಪಾರು ಎಚ್ಚರಿಕೆ ನೀಡಿದ್ರು. ಆದ್ರೂ ಜಿಲ್ಲೆಯ ವಿವಿಧೆಡೆ ಮಟ್ಕಾ ದಂಧೆ ಎಗ್ಗಿಲ್ಲದೇ ಸಾಗಿದ ಪರಿಣಾಮ ಪೊಲೀಸರು ಮಟ್ಕಾ ದಂಧೆಗೆ ಕಡಿವಾಣ ಹಾಕಲು ಈಗ ರೌಡಿಶೀಟರ್ ಹಾಗೂ ಮಟ್ಕಾ ಬುಕ್ಕಿಗಳನ್ನ ಗಡಿಪಾರು ಮಾಡಿ ಎಸ್ಪಿ ಸೈದುಲು ಅಡಾವತ್ ಆದೇಶಿಸಿದ್ದಾರೆ.
HAVERI ಕಟೀಲ್ ಗೆ ಕೆಪಿಸಿಸಿ ಕಾರ್ಯದ್ಯಕ್ಷ ಸಲೀಂ ಅಹ್ಮದ್ ವಾರ್ನಿಂಗ್
ಪರೇಡ್ ನಡೆಸಿದ್ರು ಬುದ್ಧಿಕಲಿಯಲಿಲ್ಲ: ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಎರಡೂ ಮೂರು ಭಾರಿ ಮಟ್ಕಾ ದಂಧೆಯಲ್ಲಿ ಅರೆಸ್ಟ್ ಆಗಿರೋರ ಪಟ್ಟಿಯನ್ನ ಪೊಲೀಸರು ಕಳೆದ ತಿಂಗಳು ರೆಡಿ ಮಾಡಿದ್ರು, ಮೊದಲ ಪಟ್ಟಿಯಲ್ಲಿ 18 ರೌಡಿ ಶೀಟರ್ ಹಾಗೂ ಮಟ್ಕಾ ಬುಕ್ಕಿಗಳನ್ನ ಗುರುತಿಸಿದ್ದ ಪೊಲೀಸರು ಗಡಿಪಾರಿಗೆ ಶಿಪಾರಸ್ಸು ಮಾಡಿದ್ರು. ಪೊಲೀಸರ ದೂರಿನ ಮೇರೆಗೆ ಕುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅಂಜನಿ ಹಾಗೂ ಸೀನಾ ಅವರನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇವರಿಬ್ಬರು ಅಷ್ಠೆ ಅಲ್ಲ ಇನ್ನೂ ಮಟ್ಕಾ ದಂಧೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿರುವ 16 ಜನರನ್ನು ಗಡಿಪಾರು ಮಾಡಲು ಬಳ್ಳಾರಿ ಎಸ್ ಪಿ ಸೈದುಲು ಅಡಾವತ್ ಜಿಲ್ಲಾಧಿಕಾರಿಗಳಿಗೆ ಬುಕ್ಕಿಗಳ ಪಟ್ಟಿ ನೀಡಿದ್ದಾರೆ. ಅಕ್ರಮದಲ್ಲಿ ಭಾಗಿಯಾದವರ ಗಡಿಪಾರು ಮಾಡುವ ವಿಚಾರವಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದರೂ. ಎಷ್ಟೇ ಕೇಸ್ ದಾಖಲಿಸಿದ್ರು ಎಗ್ಗಿಲ್ಲದೇ ಮಟ್ಕಾ ದಂಧೆ. ಓಸಿ ನಂಬರ್ ಬರೆಯುತ್ತಿರುವ ಖದೀಮರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲು ಪೊಲೀಸರು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.
Tumakuru ಶ್ರೀರಾಮ ಸೇನೆ ಕರೆ ನೀಡಿದ ಸುಪ್ರಭಾತ ಸ್ತುತಿಗೆ ನೀರಸ ಪ್ರತಿಕ್ರಿಯೆ
ರಾಜಕೀಯ ನಂಟಿರೋರನ್ನು ಬಂಧಿಸಿ: ಮಟ್ಕಾ ದಂಧೆಯಷ್ಟೇ ಅಲ್ಲ ಇತರೆ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡ ಸಣ್ಣಪುಟ್ಟ ರೌಡಿಶೀಟರ್ ಗಳನ್ನ ಕರೆದು ಬುದ್ದಿವಾದ ಹೇಳುತ್ತಿರುವ ಪೊಲೀಸರು ಇನ್ನುಂದೆ ಜಿಲ್ಲೆಯಲ್ಲಿ ಮಟ್ಕಾ ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡರೆ, ಹುಷಾರ್ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಆದ್ರೆ ಕೆಲ ರಾಜಕಾರಣಿಗಳ ಬೆಂಬಲದೊಂದಿಗೆ ಮಟ್ಕಾ ದಂಧೆ ಮಾಡುತ್ತಿರುವವರ ವಿರುದ್ದವೂ ಬಳ್ಳಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.