‘ಧರ್ಮ ಕಾಯ್ದುಕೊಳ್ಳದ ಬಿಜೆಪಿ ಲಿಂಗಾಯತ ಸಂಸದರೆಲ್ಲಾ ಗುಲಾಮರು’!

By Web DeskFirst Published Jan 26, 2019, 6:46 PM IST
Highlights

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೈತಪ್ಪಿದ್ದರಿಂದ ಬಸವ ಧಮ೯ ಪೀಠಾದ್ಯಕ್ಷೆ ಮಾತೆ ಮಹಾದೇವಿ ಕೇಂದ್ರ ಸಕಾ೯ರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ ಮೋದಿ ಸರ್ಕಾರವನ್ನು ಹೇಗೆಲ್ಲ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರ ಹೈಲೆಟ್ಸ್ ಇಲ್ಲಿದೆ.

ಬಾಗಲಕೋಟೆ, [ಜ.26]: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡದಿರುವುದಕ್ಕೆ ಮಾತೇ ಮಾಹಾದೇವಿ ಖಂಡಿಸಿದ್ದಾರೆ.
 
ಬಾಗಲಕೋಟೆಯಲ್ಲಿ ಇಂದು [ಶನಿವಾರ] ಮಾತನಾಡಿದ ಅವರು,  ಸಿದ್ದಗಂಗಾ ಮಠದ ಡಾ.ಶಿವುಕುಮಾರ ಶ್ರೀಗಳು ಜಾತಿ ಮತ ಮೀರಿ ನಡೆದವರು. ಬಡತನದಲ್ಲಿರೋ ಮಕ್ಕಳಿಗೆ ಅನ್ನಪ್ರಸಾದ, ಶಿಕ್ಷಣ, ವಸತಿ ವ್ಯವಸ್ಥೆ ಮಾಡಿ ದುಡಿದಂತವರು. ಇಂತವರನ್ನು ಕಡೆಗಣಿಸಿ ಭಾರತ ರತ್ನ ನೀಡಿರೋದು ನಿಜಕ್ಕೂ ಖಂಡನೀಯ ಎಂದರು.

ಸಿದ್ಧಗಂಗಾ ಶ್ರೀಗಿಲ್ಲ ಭಾರತ ರತ್ನ: ಕರ್ನಾಟಕದ ಜನತೆಗೆ ನಿರಾಸೆ

ಲಿಂಗಾಯತ ಧಮ೯ ಕೇಳಿದಾಗಲೂ ಕೇಂದ್ರ ಮನ್ನಣೆ ನೀಡಲಿಲ್ಲ. ಒಬ್ಬ ವಿರಕ್ತ ಮಠಾಧೀಶ, ಲಿಂಗಾಯತ ಸ್ವಾಮೀಜಿಗೆ  ಇಡೀ ಜನಾಂಗವೇ ಒಕ್ಕೊರಲಿನಿಂದ ಪ್ರಶಸ್ತಿ ನೀಡಿ ಎಂದಾಗಲೂ ಕೇಂದ್ರ ಮನ್ನಣೆ ನೀಡಲಿಲ್ಲ. ಇದು ಕೇಂದ್ರ ಸಕಾ೯ರದ ಧೋರಣೆ ಎತ್ತಿ ತೋರಿಸುತ್ತೇ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬಹುಶ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬತಿ೯ವೋ ಇಲ್ಲವೋ ಅನ್ನೋ ಭೀತಿ ಬಿಜೆಪಿಗೆ ಕಾಡುತ್ತಿದೆ ಅನ್ನಿಸುತ್ತಿದೆ. ಹೀಗಾಗಿ ತರಾತುರಿಯಲ್ಲಿ ಜನಸಂಘ, RSS ಬೆಂಬಲಿಸುವವರಿಗೆ ಭಾರತ ರತ್ನ ನೀಡಿದೆ ಎಂದು ವ್ಯಂಗ್ಯವಾಡಿದರು.

ಇದನ್ನು ಲಿಂಗಾಯತರು ಗಂಭೀರವಾಗಿ ಯೋಚನೆ ಮಾಡುವ ಕಾಲ ಬಂದಿದೆ. ಯಡಿಯೂರಪ್ಪ ಸೇರಿದಂತೆ  ಲೋಕಸಭಾ ಸಂಸದರು ತಮ್ಮ ಧಮ೯ದ ಅಸ್ತಿತ್ವ ಕಾಯ್ದುಕೊಳ್ಳದೆ ಕೇವಲ ಬಿಜೆಪಿ ಗುಲಾಮರಾಗಿ ವತ೯ನೆಯನ್ನ ಮಾಡುತ್ತಿದ್ದಾರೆ.

ಈಗ ಇವರೆಲ್ಲಾ ಆತ್ಮ ವಿಮಶೆ೯ ಮಾಡಿಕೊಳ್ಳುವ ಕಾಲ ಬಂದಿದೆ. ಬಸವಣ್ಣನವರ ತತ್ವಗಳಿಗೂ, ಬಿಜೆಪಿ ತತ್ವಗಳಿಗೂ ವ್ಯತ್ಯಾಸವಿದೆ. ಹೀಗಾಗಿ ಈಗಲಾದ್ರೂ ಲಿಂಗಾಯತ ಸಂಸದರು ಬಿಜೆಪಿ ಬಿಟ್ಟು ಹೊರಬರಬೇಕಿದೆ ಎಂದು ರಾಜ್ಯ ಬಿಜೆಪಿ ಸಂಸದರಿಗೆ ಕಿವಿಮಾತು ಹೇಳಿದರು.

ಕೇವಲ ಟಿಕೆಟ್ ಆಸೆಗಾಗಿ, ಅಧಿಕಾರದ ಆಸೆಗಾಗಿ ಧಮ೯ ಬಲಿ ಕೊಡದೇ ಲಿಂಗಾಯತ ಸಂಸದರು ಬಿಜೆಪಿ ಬಿಟ್ಟು ಹೊರಬಂದು ಆತ್ಮ ನಿರೀಕ್ಷಣೆ ಮಾಡಿಕೊಳ್ಳಬೇಕಾಗಿದೆ. ನಾವು ಇನ್ಮುಂದೆ ವೈದಿಕ ಧಮ೯ದ ಗುಲಾಮಗಿರಿಯಲ್ಲಿ ಇರಲು ಬಯಸುವುದಿಲ್ಲ

12ನೇ ಶತಮಾನದಲ್ಲಿ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರೇ ಅಲ್ಲಿ ಜಾತಿ ವಣ೯ಕ್ಕೆ ಬೇಸತ್ತು ಬಿಟ್ಟು ಬಂದವರು. ಈಗ ಪ್ರಜ್ಞಾವಂತರಾಗಿ ನಾವು ನಡೆದುಕೊಳ್ಳಬೇಕಿದೆ. ವೈಧಿಕ ದಮ೯ದ ಹಿಂದುತ್ಮದ ಹೆಸರಿನಲ್ಲಿ ನಡೆಯುವ ಗುಲಾಮಗಿರಿಯಲ್ಲಿ ಬದುಕುವ ಅಗತ್ಯವಿಲ್ಲ. ಬದಲಾಗಿ ಸ್ವತಂತ್ರ ಧಮ೯ಕ್ಕಾಗಿ ಹೋರಾಡೋಣ, ಅದರಲ್ಲಿ ಯಶಸ್ಸು ಸಾಧಿಸೋಣ ಎಂದರು.

click me!