ಸಾಮೂಹಿಕ ವಿವಾಹದಲ್ಲಿ ಶಾಸಕ ಆಯನೂರು ಮಂಜುನಾಥ್ ಪುತ್ರಿ ವಿವಾಹ

By Kannadaprabha News  |  First Published Dec 11, 2019, 3:24 PM IST

ಶಿವಮೊಗ್ಗದಲ್ಲಿ ಜನವರಿ 30 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಲ್ಲಿಯೇ ಬಿಜೆಪಿ ನಾಯಕ ಆಯನೂರು ಮಂಜುನಾಥ್ ಪುತ್ರಿ ವಿವಾಹ ಕೂಡ ನಡೆಯಲಿದೆ. 


ಶಿವಮೊಗ್ಗ (ಡಿ.11): ಮಾಜಿ ಸಂಸದ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪುತ್ರಿ ಮದುವೆಯ ಹಿನ್ನೆಲೆಯಲ್ಲಿ ಜ. 30  ರಂದು ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಯನೂರು ಪುತ್ರಿಯ ವಿವಾಹವೂ ಇದೇ ಸಂದರ್ಭದಲ್ಲಿ ನೆರವೇರಲಿದೆ ಎಂದು ಮಾಜಿ ಶಾಸಕ ಕೆ. ಜಿ. ಕುಮಾರಸ್ವಾಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುಳಾ ಆಯನೂರು ಮಂಜುನಾಥ್ ಮತ್ತು ಆಯನೂರು ಮಂಜುನಾಥ್ ಅವರ ಧರ್ಮಶ್ರೀ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಜ. 30 ರಂದು ಸಾಗರ ರಸ್ತೆಯ ಫೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿ.30 ರೊಳಗೆ ಹೆಸರು ನೊಂದಾಯಿಸಬಹುದಾಗಿದೆ ಎಂದು ಹೇಳಿದರು.

Tap to resize

Latest Videos

ವರನಿಗೆ ಪಂಚೆ, ಶರ್ಟ್, ವಧುವಿಗೆ ತಾಳಿ, ಕಾಲುಂಗುರ ಮತ್ತು ವಧುವರರ ತಂದೆ ತಾಯಿಗೆ ಬಟ್ಟೆ ನೀಡಲಾಗುವುದು. ವಧು ಮತ್ತು ವರನ ಕಡೆಯ ಸುಮಾರು 50 ಜನರು ಭಾಗವಹಿಸಲು ಅವಕಾಶವಿದೆ. ವಿವಾಹ ಕಾರ್ಯಕ್ರಮದಲ್ಲಿ ಒಟ್ಟಾರೆ ಸುಮಾರು 5 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಬಸ್ ಸ್ಟಾಪ್ ನಿಂದ ಮನೆಗೆ ಡ್ರಾಪ್ : ಮಹಿಳೆಯರಿಗೆ ಪೊಲೀಸರಿಂದ ಹೊಸ ಸೇವೆ !...

ವರನಿಗೆ ಕಡ್ಡಾಯವಾಗಿ 21 ವರ್ಷ, ವಧುವಿಗೆ 18 ವರ್ಷ ತುಂಬಿರಬೇಕು. ಸುಳ್ಳು ದಾಖಲೆಗಳನ್ನು ನೀಡಬಾರದು, ಅರ್ಜಿ ಸಲ್ಲಿಸುವವರು ವಿಧಾನಪರಿಷತ್ ಸದಸ್ಯರು, ಸಹಕಾರ ಭವನ, ಆರ್‌ಟಿಒ ಕಚೇರಿ ರಸ್ತೆ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದೂ. 9448105059, 9448127254, 900657205  ನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಸಾಮೂಹಿಕ ವಿವಾಹ ಮಹೋತ್ಸವದಲ್ಲಿಯೇ ಆಯನೂರು ಮಂಜುನಾಥ್ ಅವರ ಮಗಳು ಶಮಾತ್ಮಿಕ ಅವರು ಮಹೇಂದ್ರ ಎಂಬುವವರ ಜತೆ ಸಪ್ತಪದಿ ತುಳಿಯಲಿದ್ದಾರೆ. ಸರಳ ಮದುವೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಮೂಹಿಕ ಮದುವೆಗಳು ಬಡವರಿಗೆ ವರದಾನ ಎಂದರು.

click me!