ಜೆಡಿಎಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಜನರಿಂದ ದೂರಾ ದೂರಾ ಇದೊಂದು ನಾಯಕರೋರ್ವರ ಭವಿಷ್ಯ ವಾಣಿ
ಹಾಸನ [ಡಿ.11]: ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಫಲಿತಾಂಶ ದಾಖಲಿಸಿದ್ದರು, ನಮ್ಮ ಅಭ್ಯರ್ಥಿಗಳು ಹೀನಾಯ ಅಂತರದಲ್ಲಿ ಸೋಲದೇ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಜೆಡಿಎಸ್ ಮಾಜಿ ಸಚಿವ ರೇವಣ್ಣ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮತದಾರರು ನಮಗೆ ಮತ ಹಾಕಿದ್ದಾರೆ. ಇದರಿಂದ ಖುಷಿ ಇದೆ ಎಂದಿದ್ದಾರೆ.
ಈ ಚುನಾವಣೆಯ ಫಲಿತಾಂಶ ನೋಡಿ ಜೆಡಿಎಸ್ ಭವಿಷ್ಯ ಮುಗಿದೇ ಹೋಯಿತು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಗೆಲ್ಲಲು ಒಂದೊಂದು ಕ್ಷೇತ್ರಕ್ಕೆ 50 ರಿಂದ 60 ಕೋಟಿ ಹಣ ಖರ್ಚು ಮಾಡಿದ್ದಾರೆ. ರಾಜ್ಯದ ತೆರಿಗೆ ಕೆಲಕ್ಷನ್ ಹಣವನ್ನು ಚುನಾವಣೆಗಾಗಿ ವೆಚ್ಚ ಮಾಡಿದ್ದಾರೆ ಎಂದರು ರೇವಣ್ಣ ಆರೋಪಿಸಿದರು.
ಇನ್ನು ಚುನಾವಣೆ ವೇಳೆ ಪೊಲೀಸ್ ವಾಹನದಲ್ಲಿಯೇ ಹಣ ಸಾಗಿಸಿರುವ ಬಗ್ಗೆ ಗಂಭೀರ ಆರೋಪ ಇದ್ದು, ಇದೆಲ್ಲಾ ಎಲ್ಲಿಂದ ಬಂತು. ಇದೆಲ್ಲವನ್ನೂ ತಡೆಯಲು ಆಯೋಗ ವಿಫಲವಾಗಿದೆ. ಆಡಳಿತ ಯಂತ್ರ ಆಯೋಗದ ಹಿಡಿತದಲ್ಲಿ ಇಲ್ಲ. ಸರ್ಕಾರಿ ಅಧಿಕಾರಿಗಳು ಕಂಟ್ರೋಲ್ ಮಾಡುತ್ತಿದ್ದಾರೆ ಎಂದರು.
ಉಪ ಚುನಾವಣೆ ಬೆನ್ನಲ್ಲೇ JDS ಶಾಸಕ GTD ಬಾಂಬ್ !...
ರಾಷ್ಟ್ರೀಯ ಪಕ್ಷಗಳ ಹಣ ಬದಲ ನಡುವೆಯೂ ನಮ್ಮ ಕೈ ಹಿಡಿದ ಕಾರ್ಯಕರ್ತರಿಗೆ ಧನ್ಯವಾದಗಳು. 2023ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ಜನರು ದೂರ ಇಡುವ ಕಾಲ ರಾಜ್ಯದಲ್ಲಿ ಬರಲಿದೆ. ನಮ್ಮಲ್ಲಿ ಉತ್ತಮ ನಾಯಕರಿಗೆ ಕೊರತೆ ಇಲ್ಲ. ಬಿಜೆಪಿಯಲ್ಲಿರುವ ಅರ್ಧದಷ್ಟು ಮಂದಿ ದೇವೇಗೌಡರ ಕಾರ್ಖಾನೆಯಲ್ಲಿ ಬೆಳೆದವರು ಎಂದರು.
ಹಣಬಲದಿಂದ ಚುನಾವಣೆ ನಡೆದಿದ್ದು, ಏರಿಳಿತಗಳನ್ನು ನಾವು ಕಂಡಿದ್ದೇವೆ. ನಮ್ಮನ್ನು ತುಳಿಯಬೇಕೆನ್ನುವುದೇ ಉದ್ದೇಶವಾಗಿದ್ದು, ಇದಕ್ಕೆ ನಾವೆಂದೂ ಧೃತಿ ಗೆಡುವುದಿಲ್ಲ ಎಂದು ರೇವಣ್ಣ ಹೇಳಿದರು.
ಡಿಸೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ