ಆಧಾರ್ ಕಾರ್ಡ್ ಮೂಲಕ ಮಾಸ್ಕ್ ವಿತರಣೆ..?

By Kannadaprabha News  |  First Published Mar 18, 2020, 4:01 PM IST

ವಿಶ್ವ ವ್ಯಾಪಿ ಹರಡಿರುವ ಕರೋನಾ ವೈರಸ್‌ನ್ನು ತಡೆಗಟ್ಟುವ ಸಲುವಾಗಿ ಮಾಸ್ಕ್‌ನ್ನು ಉಪಯೋಗಿಸಿದರೆ ರೋಗವನ್ನು ತಡೆಗಟ್ಟಬಹುದು. ಮಾಸ್ಕ್‌ಗಳನ್ನು ಅಧಿಕ ಬೆಲೆಗೆ ಮಾರಾಟವಾಗುವುದನ್ನು ತಡೆಯಲು ಆಧಾರ್‌ ಕಾರ್ಡ್‌ ಮೂಲಕ ಮಾಸ್ಕ್ ಮಾರಬೇಕೆಂಬ ಆಗ್ರಹ ಕೇಳಿ ಬಂದಿದೆ.


ಕೋಲಾರ(ಮಾ.18): ವಿಶ್ವ ವ್ಯಾಪಿ ಹರಡಿರುವ ಕರೋನಾ ವೈರಸ್‌ನ್ನು ತಡೆಗಟ್ಟುವ ಸಲುವಾಗಿ ಮಾಸ್ಕ್‌ನ್ನು ಉಪಯೋಗಿಸಿದರೆ ರೋಗವನ್ನು ತಡೆಗಟ್ಟಬಹುದು. ಆದರೆ ದೇಶಾದ್ಯಂತ ಪ್ರತಿಯೊಬ್ಬರಿಗೂ ಮೌತ್‌ಮಾಸ್ಕ್‌ ಅವಶ್ಯಕತೆ ಇರುವುದರಿಂದ ಕೆಲವು ಕಡೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಕಂಡು ಬರುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೂ ಇದರ ಅವಶ್ಯಕತೆ ಇದೆ. ಆದುದರಿಂದ ಮಾಸ್ಕ್‌ ಪ್ರತಿಯೊಬ್ಬರಿಗೂ ತಲುಪಬೇಕಾದರೆ ಸರ್ಕಾರ ಆಧಾರ್‌ ಕಾರ್ಡ್‌ ಮೂಲಕ ವಿತರಿಸಬೇಕು. ಇದನ್ನು ಪಡಿತರ ಅಂಗಡಿಗಳಲ್ಲಿ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಆಶಾಕಾರ್ಯಕರ್ತೆಯರ ಮೂಲಕ ವಿತರಿಸಿದರೆ ಪ್ರತಿಯೊಬ್ಬರಿಗೂ ಸಿಗುವಂತಾಗುತ್ತದೆ.

Tap to resize

Latest Videos

ಕೊರೋನಾ ಭೀತಿ: ಮಂಗಳೂರಲ್ಲಿ 51 ಜನರಿಗಾಗಿ ಹುಡುಕಾಟ

ಕಾಳಸಂತೆಯಲ್ಲಿ ಮಾಸ್ಕ್‌ ಕೊಳ್ಳುವ ಶಕ್ತಿ ಗ್ರಾಮೀಣ ಜನರಲ್ಲಿ ಇಲ್ಲ. ಸರ್ಕಾರ ಇನ್ನು ಮುಂದಾದರು ಪಡಿತರ ವಿತರಣಾ ಪದ್ಧತಿಯಂತೆ ಮಾಸ್ಕ್‌ಗಳ ವಿತರಣೆಗೂ ಅನುಸರಿಸಿದರೆ ಉತ್ತಮ ರೀತಿಯ ನಿರ್ಧಾರವಾಗುತ್ತದೆ ಕಾಳಸಂತೆ ದಂಧೆ ತಪ್ಪುತ್ತದೆ.

click me!