ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿರುವ ದುಬೈನಿಂದ ವಾಪಾಸ್ ಆದ ಪ್ರವಾಸಿಗರು| ದುಬೈನಿಂದ ಬಂದ 40 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿತ್ತು| ತಪಾಸಣೆ ವೇಳೆ ಕೊರೋನಾ ಸೋಂಕು ಲಕ್ಷಣ ಕಂಡು ಬಂದಿರಲಿಲ್ಲ|
ವಿಜಯಪುರ(ಮಾ.18): ದುಬೈನಿಂದ ವಾಪಸ್ ಆದ ಪ್ರವಾಸಿಗರು ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿರುವುದರಿಂದ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೌದು, ಮೊನ್ನೆಯಷ್ಟೇ ದುಬೈಯಿಂದ 40 ಜನ ಬಂದಿದ್ದರು. ಇವರಿಗೆಲ್ಲ ಜಿಲ್ಲೆಯ ಶಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿತ್ತು.
ಕೊರೋನಾ ಭೀತಿ: ಮಂಗಳೂರಲ್ಲಿ 51 ಜನರಿಗಾಗಿ ಹುಡುಕಾಟ
undefined
ತಪಾಸಣೆ ವೇಳೆ ಕೊರೋನಾ ಸೋಂಕು ಲಕ್ಷಣ ಯಾರಲ್ಲೂ ಕಂಡು ಬಂದಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ 14 ದಿನ ಮನೆಯಲ್ಲಿ ನಿಗಾದಲ್ಲಿ ಇರುವಂತೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಖಡಕ್ ಸಂದೇಶ ರವಾನಿಸಿದ್ದರು. ಆದರೆ, ಕೆಲವರು ಜಿಲ್ಲಾಧಿಕಾರಿ ಆದೇಶ ಮೀರಿ ಅಧಿಕಾರಿಗಳ ಕಣ್ತಪ್ಪಿಸಿ ಹೊರಗಡೆ ಓಡಾಡುತ್ತಿದ್ದಾರೆ.
ಕೊರೋನಾ ಭೀತಿ: ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿ
ಹೋಮ್ ಐಸೋಲೆಶನ್‌ನಲ್ಲಿ ಇರುವ ಪ್ರದೇಶಗಳಲ್ಲಿ 2 ಡಿ.ಆರ್ ವಾಹನಗಳನ್ನ ನಿಯೋಜನೆ ಮಾಡಲಾಗಿದೆ. ಮಂಗಳವಾರ ರಾತ್ರಿ ಈ ಪ್ರದೇಶಗಳಿಗೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ದಿಢೀರ್ ಭೇಟಿ ನೀಡಿ ಜನರಲ್ಲಿ ತಿಳುವಳಿಕೆ ನೀಡಿದ್ದರು. ಹೋಮ್ ಐಸೋಲೆಶನ್‌ನಲ್ಲಿ ಇರುವವರು ಹೊರ ಬಾರದಂತೆ ಪೊಲೀಸರಿಂದ ಭದ್ರತೆ ಮಾಡಲಾಗಿದೆ. ಸ್ಥಳದಲ್ಲಿ 15 ಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಹೋಮ್ ಐಸೋಲೆಶನ್‌ನಲ್ಲಿ ಒಟ್ಟು 44 ಜನ ಇದ್ದಾರೆ. ದುಬೈನಿಂದ ವಾಪಸ್ ಆಗಿದ್ದ ಪ್ರವಾಸಿಗರಿಗೆ 14 ದಿನಗಳ ಹೋಮ್ ಐಸೋಲೆಶನ್‌ಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.