ಬೆಂಗಳೂರಿನಲ್ಲಿ ಮೆಟ್ರೋ 24 ಗಂಟೆ ವಿಸ್ತರಣೆ.?

Published : Jul 16, 2018, 03:19 PM IST
ಬೆಂಗಳೂರಿನಲ್ಲಿ ಮೆಟ್ರೋ 24 ಗಂಟೆ ವಿಸ್ತರಣೆ.?

ಸಾರಾಂಶ

ಮೆಟ್ರೋ ಪ್ರಯಾಣಿಕರೇ ನಿಮಗಿಲ್ಲಿದೆ ಶುಭ ಸುದ್ದಿ. ಶೀಘ್ರದಲ್ಲೇ ಮೆಟ್ರೋ ವನ್ನು 24 ಗಂಟೆಗಳ ಕಾಲ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. 

ಬೆಂಗಳೂರು :  ಬೆಂಗಳೂರಿಗರಿಗೆ ಸಾಕಷ್ಟು ಅನುಕೂಲ ಒದಗಿಸಿ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡುತ್ತಿರುವ ಮೆಟ್ರೋವನ್ನು 24ಗಂಟೆ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. 

ಮೆಟ್ರೋ 24×7 ರನ್ ಮಾಡಲು ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಈ ಬಗ್ಗೆ ಸಲಹೆ ನೀಡಿದ್ದಾರೆ.  ಈಗಾಗಲೇ ಅಗತ್ಯ ಮೂಲಭೂತ ಸೌಕರ್ಯಗಳು ಮೆಟ್ರೋ ಬಳಿ ಇವೆ.  ಹೀಗಿರುವಾಗ ಮೆಟ್ರೋ 24×7 ರನ್ ಮಾಡಲು ಸಮಸ್ಯೆ ಏನಿದೆ ಎಂದು ಪ್ರಶ್ನಿಸಿದ್ದಾರೆ. 

ಇನ್ನು ಈ ಸಭೆಯಲ್ಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರರೂ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದು,  ಮೆಟ್ರೋ 24×7 ರನ್ ಮಾಡಲು ಕ್ರಮ ವಹಿಸಲಿ ಎಂದು ಹೇಳಿದ್ದಾರೆ.  ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಶಾಸಕ ಹ್ಯಾರಿಸ್ ಅವರು ಸಲಹೆ ನೀಡಿದ್ದಾರೆ. 

ಮೆಟ್ರೋ 24×7 ರನ್ ಮಾಡುವ ಸಲಹೆಯನ್ನು ಉಪ ಮುಖ್ಯಮಂತ್ರಿ ಪರಮೇಶ್ವರ್  ಗಂಭೀರವಾಗಿ ಪರಿಗಣಿಸಿದ್ದಾರೆ.  ಮೆಟ್ರೋ 24×7 ರನ್ ಮಾಡಲು ಕ್ರಮವಹಿಸುವ ಭರವಸೆ ನೀಡಿದ್ದಾಗಿ   ಸುವರ್ಣನ್ಯೂಸ್ . ಕಾಂ ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ. 

PREV
click me!

Recommended Stories

ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!
ಮಾನವೀಯ ಸೇವೆಯ ಹೊಸ ಹೆಜ್ಜೆ.. ನೆಲಮಂಗಲದಲ್ಲಿ 'ನೆಮ್ಮದಿ' ಪ್ಯಾಲಿಯೇಟಿವ್ ಸೆಂಟರ್ ಶುಭಾರಂಭ