ಕರ್ನಾಟಕದ ಹಳ್ಳಿಗಳಿಗೆ ಮಹಾರಾಷ್ಟ್ರದ ಮದುವೆಗಳು ಶಿಫ್ಟ್‌: ಆತಂಕದಲ್ಲಿ ಜನತೆ

Kannadaprabha News   | Asianet News
Published : Apr 21, 2021, 02:11 PM ISTUpdated : Apr 21, 2021, 02:13 PM IST
ಕರ್ನಾಟಕದ ಹಳ್ಳಿಗಳಿಗೆ ಮಹಾರಾಷ್ಟ್ರದ ಮದುವೆಗಳು ಶಿಫ್ಟ್‌: ಆತಂಕದಲ್ಲಿ ಜನತೆ

ಸಾರಾಂಶ

ಲಾಕ್‌ಡೌನ್‌ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ನಿಗದಿಯಾಗಿದ್ದ ಮದುವೆಗಳು ಗಡಿಭಾಗ ಹಳ್ಳಿಗಳಲ್ಲಿ ಆಯೋಜನೆ| ಕೊರೋನಾ ಹಾವಳಿಯಿಂದ ಮಹಾರಾಷ್ಟ್ರದಲ್ಲಿ ಮದುವೆ, ಸಮಾರಂಭಕ್ಕೆ ನಿಷೇಧ| ಅಧಿಕ ಹಣ ಪಡೆದು ಬಾಡಿಗೆ ನೀಡುತ್ತಿರುವ ಗಡಿಭಾಗದ ಮದುವೆ ಮಂಟಪಗಳ ಮಾಲೀಕರು| ಮಹಾರಾಷ್ಟ್ರದಿಂದ ಕೊರೋನಾ ಸುಲಭವಾಗ ಬರಲು ಹೆದ್ದಾರಿ| 

ಆನಂದ ಭಮ್ಮನ್ನವರ 

ಸಂಕೇಶ್ವರ(ಏ.21): ಮಹಾರಾಷ್ಟ್ರದ ಜನ ಗಡಿಭಾಗದ ಸಂತೆಗಳಿಗೆ ಬಂದು ಕೊರೋನಾ ಆತಂಕ ಹುಟ್ಟಿಸುತ್ತಿರುವ ಬೆನ್ನಲ್ಲೆ, ಮಹಾ ಮದುವೆಗಳು ಸಂಕೇಶ್ವರ ಪಟ್ಟಣದಲ್ಲಿ ನಡೆಯುವ ಮೂಲಕ ರಾಜ್ಯಕ್ಕೆ ‘ಮಹಾ’ಮಾರಿಯ ಭಯ ಎಲ್ಲೆಡೆ ಆವರಿಸಿದೆ. ಇದು ಹೀಗೆ ಮುಂದುವರಿದರೆ ಮಹಾ ಮದುವೆಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಹಾರಾಷ್ಟ್ರದಲ್ಲಿ ಕೊರೋನಾಘಾತ ಹಿನ್ನೆಲೆ ಅಲ್ಲಿನ ಸರ್ಕಾರ ಮದುವೆ ಸೇರಿದಂತೆ ಸಭೆ ಸಮಾರಂಭಗಳ ನಿಷೇಧ ಹೇರಿದೆ. ಇದರ ಪರಿಣಾಮ ಮಹಾರಾಷ್ಟ್ರದ ಗಡಿಯಲ್ಲಿನ ಗ್ರಾಮಗಳ ಜನರು ನೆರೆಯ ಕರ್ನಾಟಕದಲ್ಲಿ ಮದುವೆಗಳನ್ನು ನೆರೆವೇರಿಸಿಕೊಳ್ಳುವುದರ ಮೂಲಕ ಮದುವೆಗಳನ್ನು ಮುಂದೂಡುವ ಬದಲಾಗಿ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತಿದ್ದು, ಮಹಾ ಮದುವೆಗೆ ಕರ್ನಾಟಕದ ಗಡಿಭಾಗದ ಮಂಟಪಗಳೇ ವರದಾನವಾಗಿವೆ .

ಹೌದು, ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಮಹಾರಾಷ್ಟ್ರದಲ್ಲಿ ಏರಿಕೆ ಕಂಡ ಬಳಿಕ ಅಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಸಭೆ ಸಮಾರಂಭಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.ಪರಿಣಾಮ ನಿಶ್ಚಿತವಾದ ಗಡಿ ಭಾಗವಾದ ಕೊಲ್ಲಾಪುರ ಜಿಲ್ಲೆಯ ಕೆಲವು ಗ್ರಾಮಗಳ ಕುಟುಂಬಗಳು ತಮ್ಮ ಮದುವೆಯನ್ನು ಪಕ್ಕದ ಸಂಕೇಶ್ವರ ಪಟ್ಟಣದ ಕಲ್ಯಾಣ ಮಂಟಪಗಳಲ್ಲಿ ಜರುಗಿಸುತ್ತಿದ್ದಾರೆ. ಈ ಮೂಲಕ ಮಹಾ ಮದುವೆಗಳು ಕರ್ನಾಟಕದಲ್ಲಿ ಕೊರೋನಾ ಸೋಂಕು ಹಬ್ಬಲು ಕಾರಣವಾಗಬಹುದು ಎಂಬ ಆತಂಕ ಗಡಿ ಜನರಲ್ಲಿ ಆವರಿಸಿಕೊಂಡಿದೆ.

ಪುಟ್ಟ ಗ್ರಾಮದ 144 ಮಂದಿಗೆ ಕೊರೋನಾ ಸೋಂಕು

ದುಬಾರಿಯಾದ ಕಲ್ಯಾಣ ಮಂಟಪ:

ಕೊರೋನಾ ಮಹಾ ಜನತಾ ಕರ್ಫ್ಯೂನಿಂದ ಮಹಾರಾಷ್ಟ್ರದಲ್ಲಿ ಮದುವೆ ಸಭೆ ಸಮಾರಂಭ ನಿಷೇಧಿಸಿರುವುದನ್ನೇ ಬಂಡವಾಳ ಮಾಡಿಕೊಂಡ ಪಟ್ಟಣದ ಕಾರ್ಯಾಲಯಗಳು ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಪಡೆದು ಮಹಾರಾಷ್ಟ್ರದ ಜೋಡಿಗಳಿಗೆ ಕಂಕಣ ಭಾಗ್ಯ ನೀಡುತ್ತಿವೆ. ಆದರೆ ಸರ್ಕಾರ ನಿಯಮ ಪಾಲಿಸದೆ ನಮ್ಮ ರಾಜ್ಯದಲ್ಲಿ ಮದುವೆಗೆ ಅನುಮತಿಸಿ ಕೊರೋನಾ ಸೋಂಕು ಹಬ್ಬಲು ಕುಮ್ಮಕು ನೀಡಿದ್ದು, ಅಧಿಕಾರಿಗಳ ಜಾಣ ಮೌನಕ್ಕೆ ಅಥವಾ ಅಧಿಕಾರಿಗಳ ನಿದ್ರಾವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಒಟ್ಟಿನಲ್ಲಿ ಕೊರೋನಾ ನಿಯಮ ಮಹಾರಾಷ್ಟ್ರದಲ್ಲಿ ಮದುವೆ ನಿಬಂರ್‍ಧಿಸಿದರೆ ಇತ್ತ ಗಡಿ ದಾಟಿ ಮದುವೆಗಳು ನಡೆಯುವ ಮೂಲಕ ಸರ್ಕಾರದ ನಿಯಮಗಳನ್ನು ಜನರು ಗಾಳಿಗೆ ತೂರುತ್ತಿದ್ದಾರೆ. ಗಡಿಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಂಡು ಸೋಂಕು ಗಡಿ ಪ್ರವೇಶಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳಬೇಕಿದೆ.

ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯ 8 ಮಂದಿಗೆ ಕೊರೋನಾ

ದುಡ್ಡು ಮಾಡಿಕೊಳ್ಳುತ್ತಿರುವ ಮಂಟಪಗಳು

ಸಂಕೇಶ್ವರ ಪಟ್ಟಣಕ್ಕೆ ಮಹಾರಾಷ್ಟ್ರದ ಕೊಲ್ಲಾಪುರ ನಗರದಿಂದ ಸುಲಭವಾಗಿ ಪ್ರವೇಶಿ ಪಡೆಯಬಹುದಾಗಿದೆ. ಇಲ್ಲಿನ ಚೆಕ್‌ ಪೋಸ್ಟ್‌ಗಳಲ್ಲಿ ಕೂಡ ಕಟ್ಟು ನಿಟ್ಡಿನ ಕ್ರಮ ಕೈಗೊಳದಿರುವುದು ಮಹಾ ಮದುವೆ ಹಾಗೂ ದಿಬ್ಬಣಗಳು ಗಡಿ ಪ್ರವೇಶಿಸಿ ಅದ್ಧೂರಿ ಮದುವೆ ಮಾಡಿಕೊಂಡು ತೆರಳುತ್ತಿವೆ. ಅದರಲ್ಲೂ ಮಹಾರಾಷ್ಟ್ರದ ಗಡಹಿಂಗ್ಲಜ್‌ ತಾಲೂಕಿನಿಂದ ಸಂಕೇಶ್ವರ ಪಟ್ಟಣ 20 ಕಿಮೀ ಪ್ರಯಾಣಯಿರುವುದರಿಂದ ಮದುವೇ ಅಷ್ಟೇ ಅಲ್ಲದೆ ಸೀಮಂತ ಕಾರ್ಯಕ್ರಮವನ್ನು ಸಹ ಮಾಡಿಕೊಂಡು ಹೋಗಿದ್ದಾರೆ. ಇನ್ನು ರಾಜ್ಯದಲ್ಲಿ ಮದುವೆ ಸಮಾರಂಭಕ್ಕೆ ರಾಜ್ಯದಲ್ಲಿ ಐವತ್ತು ಜನರಿಗೆ ಅದು ಕೂಡ ತಹಸೀಲ್ದಾರ್‌ ಕಡೆಯಿಂದ ಪಾಸ್‌ ಕಡ್ಡಾಯಗೊಳಿಸಲಾಗಿದೆ. ಆದರೆ ಸಂಕೇಶ್ವರ ಪಟ್ಟಣದ ಬಹುತೇಕ ಮಂಟಪಗಳು ಈ ನಿಯಮವನ್ನು ಗಾಳಿಗೆ ತೂರಿ ಕೊರೋನಾ ನಿಯಮ ಪಾಲಿಸದೇ ಮಹಾ ಮದುವೆಗಳನ್ನು ಇಲ್ಲಿ ನಡೆಸುವ ಮೂಲಕ ಹಣ ಮಾಡಿಕೊಳ್ಳುತ್ತಿವೆ.

ಮಹಾರಾಷ್ಟ್ರದ ಜನರು ಸಂಕೇಶ್ವರ ಪಟ್ಟಣದ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಿಕೊಳ್ಳುತ್ತಿರುವುದರ ಮಾಹಿತಿ ಬಂದಿಲ್ಲ. ಆದರೆ ಮದುವೆಗೆ ಕಡ್ಡಾಯವಾಗಿ ತಹಸೀಲ್ದಾರ್‌ ಕಚೇರಿಯಲ್ಲಿ ಪಾಸ್‌ ನೀಡಲಾಗುವುದು. ಮಹಾರಾಷ್ಟ್ರದ ಮದುವೆಗಳಿಗೆ ಅನುಮತಿ ನೀಡುವುದಿಲ್ಲ. ಕಲ್ಯಾಣ ಮಂಟಪದ ಮಾಲೀಕರು ಸಭೆ ಕರೆದು ಅವರಿಗೆ ಸೂಚನೆ ನೀಡಲಾಗುವುದು ಹಾಗೂ ಸರಕಾರದ ನಿಯಮ ಉಲ್ಲಂಘಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹುಕ್ಕೇರಿ ತಹಸೀಲ್ದಾರ್‌ ಡಾ.ಡಿ.ಹೆಚ್‌.ಹೂಗಾರ ತಿಳಿಸಿದ್ದಾರೆ.
 

PREV
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ