ಪತ್ನಿ ಸತ್ತು ವರ್ಷದೊಳಗೆ ಆಸೆ ತೋರಿಸಿ ಅಪ್ರಾಪ್ತೆ ಮದುವೆಯಾದವ ಅರೆಸ್ಟ್

Suvarna News   | Asianet News
Published : Jun 06, 2021, 02:00 PM ISTUpdated : Jun 06, 2021, 02:03 PM IST
ಪತ್ನಿ ಸತ್ತು ವರ್ಷದೊಳಗೆ ಆಸೆ ತೋರಿಸಿ ಅಪ್ರಾಪ್ತೆ ಮದುವೆಯಾದವ ಅರೆಸ್ಟ್

ಸಾರಾಂಶ

ಪತ್ನಿ ಸತ್ತು ವರ್ಷದೊಳಗೆ ಅಪ್ರಾಪ್ತೆ ಜೊತೆಗೆ ವಿವಾಹ ಪೊಲೀಸರ ಅತಿಥಿಯಾದ ಹಾಸನದ ವ್ಯಕ್ತಿ ಸರ್ಕಾರಿ ಕೆಲಸ ಆಮಿಷ ಒಡ್ಡಿ 15 ವರ್ಷದ ಬಾಲಕಿಯೊಂದಿಗೆ ವಿವಾಹ

ಹಾಸನ (ಜೂ.06):  ಪತ್ನಿ ಸತ್ತು ವರ್ಷದೊಳಗೆ ಅಪ್ರಾಪ್ತೆಯನ್ನು ಮದುವೆಯಾಗಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಗಾವನಹಳ್ಳಿಯ ಯೋಗೇಶ್ ಗೌಡ (47) ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. 

ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯೋಗೇಶ್ ಗೌಡ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು  ನಂಬಿಸಿ 15 ವರ್ಷದ ಅಪ್ರಾಪ್ತೆ  ಕೊರಳಿಗೆ ತಾಳಿ ಕಟ್ಟಿದ್ದ.  

ಹುಬ್ಬಳ್ಳಿ: ರೆಮೆಡೆಸಿವಿರ್‌ ಕದ್ದು ಮಾರಾಟ ಮಾಡುತ್ತಿದ್ದ ಪ್ರೇಮಿಗಳ ಬಂಧನ .
 
10 ತಿಂಗಳ ಹಿಂದಷ್ಟೇ ಈತನ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಳು. ವರ್ಷದೊಳಗೆ ಮದುವೆಯಾಗಬೇಕು, ಶುಭಕಾರ್ಯ ನಡೆಯಬೇಕೆಂದು ವಿವಾಹ ಮಾಡಿಕೊಂಡಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. 

ದಾವಣಗೆರೆ ಮೂಲದವಳಾದ ಬಾಲಕಿ ಆಲೂರು ತಾಲೂಕಿನ ಮುದಿಗೆರೆಯ ಅಜ್ಜಿ ಮನೆಯಲ್ಲಿದ್ದ ವಾಸವಿದ್ದಳು.  ನನ್ನ ಮದುವೆಯಾದರೆ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಆಸೆ ತೋರಿಸಿ ಮದುವೆ ಮಾಡಿಕೊಂಡಿದ್ದಾರೆ. 

ಸದ್ಯ ಬಾಲಕಿಯನ್ನು ರಕ್ಷಿಸಿ ಅರಕಲಗೂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸನದ ಉಜ್ವಲ ಕೇಂದ್ರದಲ್ಲಿರಿಸಿದ್ದಾರೆ. 

ಆಲೂರು ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಯೋಗೇಶ್ ಗೌಡ ವಿರುದ್ಧ ದೂರು ದಾಖಲು ಮಾಡಲಾಗಿದೆ.  

PREV
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ