ಡಿವೋರ್ಸ್​ ಸಲ್ಲಿಸೋದಿದ್ರೆ ಮದುವೆ ರಿಜಿಸ್ಟರ್​ ಆಗಿರಲೇಬೇಕಾ? ಹೈಕೋರ್ಟ್​ ಕೊಟ್ಟ ತೀರ್ಪಿನ ಡಿಟೇಲ್ಸ್​ ಇಲ್ಲಿದೆ

Published : May 02, 2026, 05:24 PM IST
Marriage and Divorce

ಸಾರಾಂಶ

ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿಯಾಗಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಈ ಕಾಯ್ದೆಯಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮದುವೆ ನೋಂದಣಿ ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ದಂಪತಿ ನಡುವೆ ವ್ಯತ್ಯಾಸಗಳಾಗಿ ಡಿವೋರ್ಸ್ ಸಲ್ಲಿಸುವುದೇ ಆಗಿದ್ದರೆ ವಿಶೇಷ ವಿವಾಹ ಕಾಯ್ದೆ ಅಡಿ ಮದುವೆಯಾಗಿದ್ದಲ್ಲಿ ಮದುವೆಯ ನೋಂದಣಿ ಆಗುವುದು ಕಡ್ಡಾಯವೆ? ಇಂಥದ್ದೊಂದು ಕೇಸ್​ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿತ್ತು. ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದ ದಂಪತಿಯ ಮದುವೆ ನೋಂದಣಿ ಆಗಿಲ್ಲ ಎನ್ನುವ ಕಾರಣಕ್ಕೆ ಡಿವೋರ್ಸ್​ ನೀಡಲಾಗದು ಎಂದು ಫ್ಯಾಮಿಲಿ ಕೋರ್ಟ್​ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿರುವ ಹೈಕೋರ್ಟ್​, ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದು, ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮದುವೆಯಾಗಿದ್ದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸುವ ಮುನ್ನ ಅವರ ಮದುವೆ ನೋಂದಣಿಯಾಗಬೇಕೆನ್ನುವ ನಿಯಮ ಕಡ್ಡಾಯವಲ್ಲ ಎಂದು ಹೇಳಿದೆ.

ನೋಂದಣಿ ಅಗತ್ಯವಿಲ್ಲ

ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್‌ 15ರ ಅಡಿಯಲ್ಲಿ, ಡಿವೋರ್ಸ್​ ವೇಳೆ, ಮದುವೆಯಾಗಿರುವುದಕ್ಕೆ ಸಂಬಂಧಿಸಿದಂತೆ, ಅದರ ನೋಂದಣಿಗೆ ಅಗತ್ಯವಾದ ಷರತ್ತುಗಳನ್ನು ಮಾತ್ರ ಕೇಳುತ್ತದೆ. ಆದರೆ ಮದುವೆ ರಿಜಿಸ್ಟರ್​ ಆಗಿಲ್ಲ ಎನ್ನುವ ಮಾತ್ರಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸಲು ಅರ್ಹರಲ್ಲ ಎನ್ನುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಡಾ.ಕೆ.ಮನ್ಮಧರಾವ್‌ ಹೇಳಿದ್ದಾರೆ. ಈ ಮೂಲಕ ಡಿವೋರ್ಸ್​​ಗೂ ಮುನ್ನ ದಂಪತಿಯ ಮದುವೆ ರಿಜಿಸ್ಟರ್​ ಆಗಿರಬೇಕು ಎಂದು ಕಾನೂನು ಇಲ್ಲ ಎಂದು ನ್ಯಾಯಾಲಯವ ಸ್ಪಷ್ಟಪಡಿಸಿದೆ. ಮದುವೆಯ ನೋಂದಣಿ ಆಗಿದ್ದರೆ ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್‌ 18ರ ಅಡಿ ಕೆಲವು ಹೆಚ್ಚುವರಿ ಕಾನೂನು ಪ್ರಯೋಜನಗಳು ದೊರೆಯುತ್ತವೆ. ಆದರೆ, ನೋಂದಣಿ ಇಲ್ಲದಿದ್ದರೆ ವಿಚ್ಛೇದನ ಅರ್ಜಿ ಸಲ್ಲಿಸಲು ಅಡ್ಡಿಯಾಗುವುದಿಲ್ಲ ಎಂದಿದೆ ಕೋರ್ಟ್​

ಏನಿದು ಕೇಸ್​

ಪರಿಶಿಷ್ಟ ಪಂಗಡದ ಮೇಡಾ ಉಪಜಾತಿಗೆ ಸೇರಿದ ದಂಪತಿಯ ಕೇಸ್​ ಇದಾಗಿದೆ. ಈ ಜೋಡಿ 2006ರಲ್ಲಿ ತಮ್ಮ ಸಮುದಾಯದ ಆಚರಣೆಗಳ ಪ್ರಕಾರ ಮದುವೆಯಾಗಿದ್ದರು. ಆದರೆ, ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯ ಅಡಿ ನೋಂದಾವಣಿ ಮಾಡಿಕೊಂಡಿರಲಿಲ್ಲ. ಈ ಮದುವೆಯಿಂದ ಮಗು ಕೂಡ ಜನಿಸಿತು. ಆದರೆ, ದಂಪತಿ ನಡುವೆ ಭಿನ್ನಾಭಿಪ್ರಾಯದ ಕಾರಣಕ್ಕೆ ದಂಪತಿ 2009ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತಿ ಕನಕಪುರ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಡಿವೋರ್ಸ್​ ಕೋರಿದ್ದರು. ಆದರೆ ಇವರ ಮದುವೆ ರಿಜಿಸ್ಟರ್​ ಆಗಿರಲಿಲ್ಲ ಎನ್ನುವ ಕಾರಣಕ್ಕೆ ಕೋರ್ಟ್​ ಡಿವೋರ್ಸ್​ ನೀಡಲು ಆಗದು ಎಂದಿತ್ತು.

ಇದಕ್ಕೆ ಕಾರಣವನ್ನೂ ಕೋರ್ಟ್​ ನೀಡಿತ್ತು. ಅದೇನೆಂದರೆ, ಮೇಡಾ ಜಾತಿಯು ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಇದನ್ನು ಹಿಂದೂ ವಿವಾಹ ಕಾಯ್ದೆಯಿಂದ ಹೊರಗಿಡಲಾಗಿದ್ದು, ವಿಶೇಷ ವಿವಾಹ ಕಾಯ್ದೆಯಡಿ ಸೇರ್ಪಡೆ ಮಾಡಲಾಗಿದೆ. ಆದ್ದರಿಂದ ಹಿಂದೂ ವಿವಾಹ ಕಾಯ್ದೆಯ ಅಡಿ ಕೇಸ್​ ದಾಖಲು ಮಾಡಿದ್ದರಿಂದ ಡಿವೋರ್ಸ್​ ಸಿಗಲ್ಲ ಎಂದಿತ್ತು ಫ್ಯಾಮಿಲಿ ಕೋರ್ಟ್​. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

 

PREV
Read more Articles on
click me!

Recommended Stories

ಪ್ರಧಾನಿ ಮೋದಿ, ಶಾ, ಸಿಂಹ ಸೇರಿ ಬಿಜೆಪಿ ನಾಯಕರ ಮುಗಿಸಲು ದೊಡ್ಡ ಸಂಚು! ಟೆಲಿಗ್ರಾಂ ಗ್ರೂಪ್‌ನಲ್ಲಿ ಬಂಧಿತ ಉಗ್ರರು ಶಾಕಿಂಗ್ ಡಿಸ್ಕಸ್!
ರೈತರ ಪಹಣಿಯಲ್ಲಿ ಮಹತ್ವದ ಬದಲಾವಣೆ! ಇನ್ನು ಆರ್‌ಟಿಸಿಯಲ್ಲಿ ಅನ್ನದಾತರ ಫೋಟೋ, ವಿಳಾಸ, ಕ್ಯೂಆರ್ ಕೋಡ್!