ಆಹಾ ನನ್ನ ಮದ್ವೆಯಂತೇ.., ಎಂದು ಖುಷಿಯಲ್ಲಿದ್ದ ವರನಿಗೆ ಮದುವೆ ಚಪ್ಪರದಲ್ಲಿಯೇ ಹಾರ್ಟ್ ಅಟ್ಯಾಕ್!

By Sathish Kumar KH  |  First Published Sep 4, 2024, 5:49 PM IST

ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಮದುವೆ ಸಿದ್ಧತೆ ಬಗ್ಗೆ ಹುಡುಗಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗಲೇ  ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.


ಬೆಳಗಾವಿ/ಚಿಕ್ಕೋಡಿ (ಸೆ.04): ನಾಳೆ ಬೆಳಗಾದರೆ ಸಾಕು ನನಗೂ ನಿನಗೂ ಮದುವೆ ಎಂದು ಖುಷಿಯಿಂದ ಹುಡುಗಿಯೊಂದಿಗೆ ಯುವಕ ಮದುವೆ ಸಿದ್ಧತೆ ಬಗ್ಗೆ ಚಪ್ಪರದಲ್ಲಿ ನಿಂತುಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಇನ್ನೇನು ಮದುವೆ ಒಂದು ದಿನ ಬಾಕಿ ಇರುವಾಗಲೇ ಯುವಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ. ಝುಂಜರವಾಡ  ಗ್ರಾಮದ ನಿವಾಸಿ ಸದಾಶಿವ ರಾಮಪ್ಪ ಹೋಸಲ್ಕಾರ (31) ಮೃತ ದುರ್ದೈವಿ ಆಗಿದ್ದಾನೆ. ಸಂಬಂಧಿಕರು ಹಾಗೂ ಕುಟುಂಬಸ್ಥರು ಸೆ.5ರಂದು ಮದುವೆಗೆ ದಿನಾಂಕ ನಿಗದಿ ಮಾಡಿದ್ದರು. ಹೀಗಾಗಿ, ಮದುವೆ ಕೆಲಸದ ಬಗ್ಗೆ ದೂರವಾಣಿಯಲ್ಲಿ ಹೆಚ್ಚು ಮಾತನಾಡಿದ್ದನು. ಇದರ ನಂತರ ಯುವತಿಯೊಂದಿಗೂ ಮದುವೆ ಸಿದ್ಧತೆ ಬಗ್ಗೆ ಮಾತನಾಡುವಾಗ ಯುವಕನಿಗೆ ಹೃದಯಾಘಾತ ಆಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

Tap to resize

Latest Videos

undefined

ಚಿಕ್ಕೋಡಿ: ಮರಕ್ಕೆ ನೇಣು ಬಿಗಿದುಕೊಂಡು 60 ವರ್ಷದ ವೃದ್ಧ ಆತ್ಮಹತ್ಯೆ

ಇನ್ನು ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆ ಮುಂದೆ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಾ, ಮೊಬೈಲ್‌ನಲ್ಲಿ ಮಾತನಾಡುವಾಗ ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ತುರ್ತಾಗಿ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಿದರು ಅದಾಗಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

click me!