ಪುರೋಹಿತ ಗಟ್ಟಿಮೇಳ..ಗಟ್ಟಿಮೇಳ ಎನ್ನುವಾಗ, ವಧುವಿನ ಲವ್ವರ್​ ಎಂಟ್ರಿಕೊಟ್ಟಾಗ..!

Published : Nov 18, 2018, 03:38 PM IST
ಪುರೋಹಿತ ಗಟ್ಟಿಮೇಳ..ಗಟ್ಟಿಮೇಳ ಎನ್ನುವಾಗ, ವಧುವಿನ ಲವ್ವರ್​ ಎಂಟ್ರಿಕೊಟ್ಟಾಗ..!

ಸಾರಾಂಶ

ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆ ಹುಡುಗನ ಜೊತೆ ಧಾಮ್ ಧೂಮ್  ಆಗಿ ಮದುವೆ ಆಗುತ್ತಿದ್ದಾಗ ಮದುವೆ ಕಲ್ಯಾಣ ಮಂಟಪಕ್ಕೆ ಲವ್ವರ್ ಎಂಟ್ರಿ ಕೊಟ್ಟಾಗ. ಮುಂದೆ ನಡೆದಿದ್ದೇನು? 

ಬೆಂಗಳೂರು, [ನ.18]: ಎರಡು ಕುಟುಂಬಗಳು ಮದುವೆ ಸಂಭ್ರಮದಲ್ಲಿದ್ದರು. ಇನ್ನೇನು ಪುರೋಹಿತ ಗಟ್ಟಿಮೇಳ..ಗಟ್ಟಿಮೇಳ..  ಅನ್ನುವಷ್ಟರಲ್ಲಿ ಮದುವೆ ಕಲ್ಯಾಣ ಮಂಟಪದಲ್ಲಿ ಹೈಡ್ರಾಮವೇ ನಡೆದಿದೆ.

ಬೆಂಗಳೂರು ಗ್ರಾಮಾಂತರದ ನೆಲಮಂಗಲ ನಗರದಲ್ಲಿ ವಿಶ್ವ ಶಾಂತಿ ಆಶ್ರಮದ ಶ್ರೀ ವಿಜಯ ವಿಠಲ ಸಮುದಾಯ ಭವನದಲ್ಲಿ ಮದುವೆ ನಡೆಯುತ್ತಿತ್ತು. ಬೆಂಗಳೂರು ತಾಲ್ಲೂಕಿನ ನಂದರಾಮಯ್ಯನಪಾಳ್ಯದ ವರ ಶ್ರೀರಂಗನಾಥ, ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ವಧು ಪದ್ಮಪ್ರಿಯಗೂ ಮದುವೆ ನಡೆಯುತ್ತಿತ್ತು. 

ಈ ವೇಳೆ ಮುಹೂರ್ತದ ಸಮಯಕ್ಕೆ ಸರಿಯಾಗಿ ವಧು ಪದ್ಮಪ್ರಿಯಳ ಪ್ರಿಯಕರ ಸಂಜು, ಮದುವೆ ಮಂಟಪಕ್ಕೆ ಆಗಮಿಸಿ ಗಲಾಟೆ ನಡೆಸಿದ್ದಾನೆ. ಇದರಿಂದ ವರನ ಕಡೆಯವರು ಮದುವೆ ಮುರಿಯಿತೆಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. 

ಪದ್ಮಪ್ರಿಯ ಹಾಗೂ ಸಂಜು  ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಪದ್ಮಪ್ರಿಯ ಮನೆಯವರು ಬಲವಂತವಾಗಿ ಬೇರೊಬ್ಬ ಯುವಕನೊಂದಿಗೆ ಮದುವೆ ಏರ್ಪಾಡು ಮಾಡಿದ್ದರು. 

ಈ ಹಿನ್ನೆಲೆಯಲ್ಲಿ ಸಂಜು ಬಂದು ಗಲಾಟೆ ಮಾಡಿದ್ದಾನೆ. ಪ್ರಿಯಕರ ಸಂಜು ಹಾಸನ ಮೂಲದವನೆಂದು ತಿಳಿದುಬಂದಿದೆ.  ಇನ್ನು ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಆಗಮಿಸಿ ಸಂಜುನನ್ನು ವಶಕ್ಕೆ ಪಡೆದಿದ್ದಾರೆ.

PREV
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ದೀಪಾಂಜಲಿ ನಗರ ಜಂಕ್ಷನ್‌ನ ಬಳಿಯ ನೈಸ್‌ ರಸ್ತೆ ಸಾರ್ವಜನಿಕರಿಗೆ ಶೀಘ್ರ ಮುಕ್ತ