ಕಾಲುವೆ ಕಾಮಗಾರಿ ವೇಳೆ ಮಾರುತಿ ಮೂರ್ತಿ ಪತ್ತೆ

By Kannadaprabha NewsFirst Published Sep 16, 2018, 8:47 AM IST
Highlights

ರಸ್ತೆ ಕಾಮಗಾರಿ ವೇಳೆ ಅಗೆಯುವಾಗ ಆಂಜನೇಯನ ವಿಗ್ರಹ ಪತ್ತೆಯಾಗಿದ್ದು, ದರ್ಶನ ಪಡೆಯಲು ಜನ ಸಾಗರವೇ ಹರಿದು ಬಂದಿತ್ತು.

ಬೆಂಗಳೂರು: ನಗರದ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆಯುತ್ತಿದ್ದ ಕಾಲುವೆ ಸ್ವಚ್ಛತಾ ಕಾರ್ಯದ ವೇಳೆ ಆಂಜನೇಯ ಸ್ವಾಮಿಯ ಕಲ್ಲಿನ ಮೂರ್ತಿಯೊಂದು ಪತ್ತೆಯಾಗಿದೆ.

ನಾಲ್ಕರಿಂದ ಐದು ಅಡಿ ಎತ್ತರದ ಕಲ್ಲಿನ ಮೂರ್ತಿ ಪತ್ತೆಯಾಗಿದ್ದು, ಮೂರ್ತಿ ಸಿಕ್ಕ ಮಾಹಿತಿ ತಿಳಿಯುತ್ತಲೇ ಹನುಮ ಮೂರ್ತಿಯನ್ನು ನೋಡಲು ನೂರಾರು ಜನರು ಮುಗಿಬಿದ್ದರು. ನಂತರ ಸ್ಥಳೀಯರು ಮೂರ್ತಿಗೆ ಪೂಜೆ, ಪುನಸ್ಕಾರ ಮಾಡಿ ಭಕ್ತಿ ಮೆರೆದಿದ್ದಾರೆ. 

ದೀಪಾಂಜಲಿ ನಗರ ವೃತ್ತ ಬಳಿ ಹಾದುಹೋಗಿರುವ ವೃಷಭಾವತಿ ರಾಜಕಾಲುವೆಗೆ ಪಕ್ಕದ ಕೊಳಗೇರಿಯಿಂದ ಹರಿಯುವ ಸಣ್ಣ ಕಾಲುವೆಯ ಸ್ವಚ್ಚತೆ ಮತ್ತು ಅಗಲೀಕರಣ ಕಾಮಗಾರಿ ಶನಿವಾರ ಬೆಳಗ್ಗೆಯಿಂದ ನಡೆಯುತ್ತಿತ್ತು. ಸುಮಾರು 11 ಗಂಟೆ ಸುಮಾರಿಗೆ ಕಾಲುವೆ ಅಗಲೀಕರಣ ನಡೆಯುವಾಗ ಆಂಜನೇಯನ ಕಲ್ಲಿನ ಮೂರ್ತಿ ಪತ್ತೆಯಾಯಿತು. 

click me!