ಬರದ ನಾಡು ವಿಜಯಪುರದಲ್ಲಿ ಹಸಿರು ಹೆಚ್ಚಿಸಲು ವೃಕ್ಷೋಥಾನ್: ಜ್ಞಾನಯೋಗಿಗೆ ಮ್ಯಾರಾಥಾನ್ ಅರ್ಪನೆ..!

By Girish GoudarFirst Published Dec 3, 2023, 10:53 PM IST
Highlights

ಈ ಬಾರಿ ನಡೆಯಲಿರುವ ಮ್ಯಾರಾಥಾನ್ ಓಟ ಪಕ್ಕಾ ಪ್ರೋಪೆಶನಲ್ ಆಗಿರಲಿದೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಮ್ಯಾರಾಥಾನ್ ಪಟುಗಳು ಪಾಲ್ಗೊಳ್ಳಲಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಕೆ‌ ಮಾಡಿ ಮ್ಯಾರಾಥಾನ್ ನಡೆಸಲಾಗ್ತಿದೆ. ಜೊತೆಗೆ ಸ್ಮಾರಕಗಳ ರಕ್ಷಣೆಯ ಹೊಣೆಯ ದೃಷ್ಟಿಯಿಂದಲು ಪಾರಂಪರಿಕ ಓಟ ಕೂಡ ನಡೆಯಲಿದೆ. 

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಡಿ.03): ವಿಜಯಪುರದಲ್ಲಿ ಅರಣ್ಯ ಪ್ರದೇಶ ಪ್ರಮಾಣ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಕಾರಣ ಏನೆಂದರೆ ನಮ್ಮ ಜಿಲ್ಲೆಯಲ್ಲಿ ಕೇವಲ.. ಕೇವಲ 0.17% ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಅಂದ್ರೆ ಶೇ. 1 ರಷ್ಟು ಸಹ ಅರಣ್ಯ ಪ್ರದೇಶವಿಲ್ಲ. ಇದನ್ನ ಅರಿತ‌ ಸಚಿವ ಎಂ ಬಿ ಪಾಟೀಲರು ವಿಜಯಪುರದಲ್ಲಿ ಹಸಿರು ಹೆಚ್ಚಿಸಲು ಕಳೆದ 2017ರಲ್ಲಿ ವೃಕ್ಷ ಅಭಿಯಾನ ಹಿನ್ನೆಲೆಯಲ್ಲಿ ವೃಕ್ಷೋಧಾನ್ ಅಂದ್ರೆ ಹಾಪ್ ಮ್ಯಾರಾಥಾನ್ ಶುರು ಮಾಡಿದ್ರು. ಈಗ ಮತ್ತೆ ಮ್ಯಾರಾಥಾನ್ ವೃಕ್ಷೋಥಾನ್ ನಡೆಯಲಿದ್ದು, ವಿಶೇಷ ಅಂದ್ರೆ ಈ ಬಾರಿಯ ವೃಕ್ಷೋಥಾನ್‌ವನ್ನ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಲಾಗ್ತಿದೆ. 

ಬರದ ನಾಡಲ್ಲಿ ಹಸಿರು ಹೆಚ್ಚಿಸುವ ಗುರಿ ; ಎಂ ಬಿ ಪಾಟೀಲ್..!

ಹೌದು, ಕಳೆದ 2017ರಿಂದ ಇದೊಂದು ಪ್ರಯತ್ನ ಶುರುವಾಗಿದೆ. ಜಿಲ್ಲೆಯಲ್ಲಿ ಕೇವಲ 0.17 ರಷ್ಟಿರುವ ಅರಣ್ಯ ಪ್ರದೇಶವನ್ನ ಹೆಚ್ಚಿಸುವ ಸದುದ್ದೇಶದಿಂದ ಪ್ರತಿವರ್ಷ ಮ್ಯಾರಾಥಾನ್ ಆಯೋಜಿಸುವ ಮೂಲಕ ಜನರಲ್ಲಿ ವೃಕ್ಷಗಳ ಮಹತ್ವವನ್ನ ಸಾರಲಾಗ್ತಿದೆ. ಸಚಿವ ಎಂ ಬಿ ಪಾಟೀಲರ ಈ ಪ್ರಯತ್ನ ಈಗ 7ನೇ ವರ್ಷ ತುಂಬಿದೆ. ಈ ನಡುವೆ ಕೋವಿಡ್ ನಿಂದಾಗಿ ವೃಕ್ಷೋಥಾನ್‌ಗೆ ಬ್ರೇಕ್ ಬಿದ್ದಿತ್ತು. ಈ ಬಾರಿ ಭರ್ಜರಿಯಾಗಿ ವೃಕ್ಷೋಥಾನ್ ನಡೆಸಲು ಮ್ಯಾರಾಥಾನ್ ರೀತಿಯಲ್ಲೆ ಸರಣಿ ಮೀಟಿಂಗ್‌ಗಳು ನಡೆದಿವೆ. 

World Disability Day: ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಮಾಡಿದ ವಿಕಲಚೇತನ..!

ಈ ಬಾರಿಯ ಮ್ಯಾರಾಥಾನ್ ಸಿದ್ದೇಶ್ವರ ಶ್ರೀಗಳಿಗೆ ಅರ್ಪಣೆ..!

ಇಂದು ಸಹ ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಜಿಲ್ಲಾಧಿಕಾರಿಗಳು ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು, ಕಾರ್ಪೋರೆಟರ್, ವ್ಯಾಪಾರಸ್ಥರು, ಉದ್ಯಮಿಗಳು, ಸಂಘಟನೆ ಮುಖಂಡರ ಜೊತೆಗೆ ಸಭೆ ನಡೆಸಿದರು. ಹೆಚ್ಚೆಚ್ಚು ಯುವಕ-ಯುವತಿಯರು, ಶಾಲಾ‌-ಕಾಲೇಜು ವಿದ್ಯಾರ್ಥಿಗಳು, ಗಣ್ಯರು‌ ಸೇರಿದಂತೆ ಜಿಲ್ಲೆಯ ಜನರು ಮ್ಯಾರಾಥಾನ್ ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು‌. ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಹೆಚ್ಚಿಸಲು ಪ್ರತಿ ನಾಗರಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು. ಈ ಬಾರಿ ಮ್ಯಾರಾಥಾನ್ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಲಾಗ್ತಿದೆ. ಶ್ರೀಗಳು ನಿಧನರಾಗಿ ವರ್ಷ ಕಳೆಯುತ್ತಿದೆ. ಈ ಬಾರಿಯ ಮ್ಯಾರಾಥಾನ್ ಶ್ರೀಗಳಿಗೆ ಅರ್ಪಿಸಲಾಗ್ತಿದೆ. ಮ್ಯಾರಾಥನ್ ನಲ್ಲಿ ವಿಜೇತರಿಗೆ ನೀಡುವ ಮೆಡಲ್ ಹಿಂಬದಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಇರಲಿದೆ ಎಂದಿದ್ದಾರೆ.

ಈ ಬಾರಿ ಪ್ರೊಪೆಶನಲ್ ಮ್ಯಾರಾಥಾನ್, ಪಾರಂಪರಿಕ‌ ಓಟ..!

ಈ ಬಾರಿ ನಡೆಯಲಿರುವ ಮ್ಯಾರಾಥಾನ್ ಓಟ ಪಕ್ಕಾ ಪ್ರೋಪೆಶನಲ್ ಆಗಿರಲಿದೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಮ್ಯಾರಾಥಾನ್ ಪಟುಗಳು ಪಾಲ್ಗೊಳ್ಳಲಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಕೆ‌ ಮಾಡಿ ಮ್ಯಾರಾಥಾನ್ ನಡೆಸಲಾಗ್ತಿದೆ. ಜೊತೆಗೆ ಸ್ಮಾರಕಗಳ ರಕ್ಷಣೆಯ ಹೊಣೆಯ ದೃಷ್ಟಿಯಿಂದಲು ಪಾರಂಪರಿಕ ಓಟ ಕೂಡ ನಡೆಯಲಿದೆ. ನಗರದ ಜಿಲ್ಲಾ ಕ್ರೀಡಾಂಗಣದಿಂದ ಶುರುವಾಗುವ ಓಟ ನಗರದ ಗೋಳಗುಮ್ಮಟ, ಬಾರಾಕಮಾನ್, ಜ್ಞಾನಯೋಗಾಶ್ರಮ ಸೇರಿದಂತೆ ಪಾರಂಪರಿಕ ತಾಣಗಳ ಒಳಗೊಳ್ಳಲಿದೆ. ಈ ಮೂಲಕ ಸ್ಮಾರಕಗಳ ರಕ್ಷಣೆಯ ಸಂದೇಶವು ಇರಲಿದೆ ಎನ್ನಲಾಗಿದೆ..

ಮ್ಯಾರಾಥಾನ್‌ನಲ್ಲಿ ಪಾಲ್ಗೊಳ್ತಾರಾ "ಕಾಂತಾರ ಡಿವೈನ್ ಸ್ಟಾರ್"?!

ಇನ್ನೂ ಮ್ಯಾರಾಥಾನ್‌ ಆರಂಭದಲ್ಲಿ ನಟ‌ ಯಶ್ ಪಾಲ್ಗೊಂಡಿದ್ದರು ವೃಕ್ಷಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ಬಾರಿಯೂ ಯಶ್ ಅವರನ್ನ ಸಂಪರ್ಕಿಸುವುದಾಗಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಕೆ.ಜಿ.ಎಫ್‌ ಯಶಸ್ಸಿನ ಬಳಿಕ ಯಶ್ ಅವರಿಗೆ ಸೆಕ್ಯೂರಿಟಿ ಸಮಸ್ಯೆಗಳು ಇವೆ. ಅಕಸ್ಮಾತ್ ಯಶ್ ಸಿಗದೆ ಹೋದ್ರೆ ಕಾಂತಾರ ಸಿನಿಮಾದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರನ್ನ ಸಂಪರ್ಕಿಸಲಾಗುತ್ತದೆ. ಶಿವರಾಜ್ ಕುಮಾರ್, ನಟ ಗಣೇಶರನ್ನ ಕರೆಸುವ ಆಲೋಚನೆ ಇದೆ ಎಂದಿದ್ದಾರೆ‌. 

ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ: ಸಂಸದ ರಮೇಶ ಜಿಗಜಿಣಗಿ

ವೃಕ್ಷೋಥಾನ್ ಪ್ರೇರಣೆ ; ಈ ವರೆಗೆ ನೆಟ್ಟಿದ್ದು 1.5 ಕೋಟಿ ಸಸಿ..!

ಈ ವೃಕ್ಷೋಥಾನ್‌ದಿಂದ ಆಗಿರೋ ಲಾಭವೇನು ಎಂದು ಕೇಳುವವರಿಗೆ ಅಂಕಿ ಅಂಶಗಳು ಉತ್ತರ‌ ನೀಡುವಂತಿವೆ. 2017ರಲ್ಲಿ ಹಸಿರು ಬೆಳೆಸುವ ದೃಷ್ಟಿಯಿಂದ ಶುರುವಾದ ಕೋಟಿ ವೃಕ್ಷ ಅಭಿಯಾನ, ವೃಕ್ಷೋಥಾನ್‌ ಪ್ರೇರಣೆಯಿಂದ ಜಿಲ್ಲೆಯಾದ್ಯಂತ ಈ ವರೆಗೆ 1 ಕೋಟಿ 50 ಲಕ್ಷ ಸಸಿಗಳನ್ನ ನೆಡಲಾಗಿದೆ. ಕೇವಲ ಶೇಕಡ 0.17 ರಷ್ಟಿರುವ ಅರಣ್ಯ ಪ್ರದೇಶವನ್ನ ಹೆಚ್ಚಿಸಲು ಈ ಅಭಿಯಾನ ಕಾಣಿಕೆ ಕೊಡಲಿದೆ.‌ ವೃಕ್ಷೋಥಾನ್ ಮುಂದುವರೆಯಬೇಕಿದೆ, ಮುಂದಿನ ಪೀಳಿಗೆ ಇದನ್ನ ಕೊಂಡೊಯ್ಯಬೇಕಿದೆ ಎನ್ನುವುದು ಎಂ ಬಿ ಪಾಟೀಲರ ಅಭಿಪ್ರಾಯವಾಗಿದೆ.

ವೃಕ್ಷೋಥಾನ್‌-2023ಗೆ 80 ಲಕ್ಷದ ವರೆಗೆ ಖರ್ಚು ಸಾಧ್ಯತೆ..! 

ಇನ್ನೂ ಈ ಬಾರಿ ಹಿಂದಿನಿಗಿಂತಲೂ ಸ್ವಲ್ಪ ದೊಡ್ಡ ಮಟ್ಟದಲ್ಲಿ ವೃಕ್ಷೋಥಾನ್ ಮ್ಯಾರಾಥಾನ್ ನಡೆಸಲು ಉದ್ದೇಶಿಲಾಗಿದೆ. ಪ್ರೋಪೆಶನಲ್‌ ಆಗಿ ನಡೆಯಲಿರುವ ಮ್ಯಾರಾಥಾನ್‌ ಗಾಗಿ 78 ಲಕ್ಷ‌ದಿಂದ 80 ಲಕ್ಷ ಖರ್ಚಾಗುವ ಸಾಧ್ಯತೆ ಇದೆ ಎಂದ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಬಿಎಲ್ಡಿ ಸಂಸ್ಥೆಯಿಂದಲು 10 ಲಕ್ಷ ದೇಣಿಗೆ ಘೋಷಿಸಿದ್ದಾರೆ‌.‌ ಶಾಸಕ ಬಸನಗೌಡ ಯತ್ನಾಳ್ ಸಿದ್ದಸಿರಿ ಬ್ಯಾಂಕ್ ಮೂಲಕ, ಸಚಿವ ಶಿವಾನಂದ ಪಾಟೀಲ್‌ ಡಿಡಿಸಿ ಬ್ಯಾಂಕ್, ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ಸಹ ದೇಣಿಗೆ ನೀಡಲಿದ್ದಾರೆ. ಉದ್ಯಮಿಗಳು, ವ್ಯಾಪಾರಸ್ಥರು ಸೇರಿ ಸಾರ್ವಜಕರು ವೃಕ್ಷ ಅಭಿಯಾನಕ್ಕೆ ಕೈ ಜೋಡಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಹೆಚ್ಚಿನ ಖರ್ಚಾದರು ಅದನ್ನ ಭರಿಸುವ ಭರವಸೆ ನೀಡಿದ್ದಾರೆ.

click me!