ಗ್ರಾಮೀಣ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ಸಿಗಲಿ: ಅಶ್ವತ್ಥನಾರಾಯಣ್‌

By Kannadaprabha NewsFirst Published Mar 27, 2023, 5:10 AM IST
Highlights

ಸರ್ಕಾರಿ ತಾಂತ್ರಿಕ ಪಾಲಿಟೆಕ್ನಿಕ್‌ ಮಧುಗಿರಿ ತಾಲೂಕಿನ ಗಡಿಭಾಗಕ್ಕೆ ಮಂಜೂರು ಮಾಡಿದ್ದು, ರಾಜ್ಯದ ಗ್ರಾಮೀಣ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ಸಿಗಲಿ ಹಾಗೂ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ತಾಂತ್ರಿಕ ತರಬೇತಿಗಳು ಲಭ್ಯವಾಗಲಿದೆ ಎಂದು ಉನ್ನತ ಶಿಕ್ಷಣ, ಐಟಿಬಿಟಿ, ಉದ್ಯೋಗ ಸಬಲೀಕರಣ ಸಚಿವ ಡಾ.ಅಶ್ವತ್ಥನಾರಾಯಣ್‌ ಅಭಿಪ್ರಾಯಪಟ್ಟರು.

  ಮಧುಗಿರಿ : ಸರ್ಕಾರಿ ತಾಂತ್ರಿಕ ಪಾಲಿಟೆಕ್ನಿಕ್‌ ಮಧುಗಿರಿ ತಾಲೂಕಿನ ಗಡಿಭಾಗಕ್ಕೆ ಮಂಜೂರು ಮಾಡಿದ್ದು, ರಾಜ್ಯದ ಗ್ರಾಮೀಣ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ಸಿಗಲಿ ಹಾಗೂ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ತಾಂತ್ರಿಕ ತರಬೇತಿಗಳು ಲಭ್ಯವಾಗಲಿದೆ ಎಂದು ಉನ್ನತ ಶಿಕ್ಷಣ, ಐಟಿಬಿಟಿ, ಉದ್ಯೋಗ ಸಬಲೀಕರಣ ಸಚಿವ ಡಾ.ಅಶ್ವತ್ಥನಾರಾಯಣ್‌ ಅಭಿಪ್ರಾಯಪಟ್ಟರು.

ತಾಲೂಕಿನ ಮಿಡಿಗೇಶಿಯ ಬೇಡತ್ತೂರಿನಲ್ಲಿ 8 ಕೋಟಿ ವೆಚ್ಚದ ನೂತನ ಸರ್ಕಾರಿ ಪಾಲಿಟೆಕ್ನಿಕ್‌ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ಶಿಕ್ಷಣ ಕೇಂದ್ರದಲ್ಲಿ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ತರಬೇತಿ, ಇತರೆ ಚಟುವಟಿಕೆಗಳನ್ನು ತರಬೇತಿ ನೀಡಲಾಗುತ್ತದೆ. ಈ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರ ಈ ಕೆಲಸ ಮಾಡಿದೆ. ಇದಕ್ಕಾಗಿ ಹೆಚ್ಚಿನ ಬೇಡಿಕೆಯಿದ್ದು ಅದನ್ನು ಬಗೆಹರಿಸಲಾಗಿದೆ. ಇಲ್ಲಿ ಶಿಕ್ಷಣ ಪಡೆದವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿದ್ದು ನಿರುದ್ಯೋಗ ನಿವಾರಣೆಯಾಗಲಿದೆ. ಇದರಿಂದ ಉತ್ತಮ ಸಮಾಜ ಕಟ್ಟಲು ಸಹಕಾರಿಯಾಗಲಿದೆ. ಇದರೊಂದಿಗೆ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಂತೆ ಗ್ರಾಮ ಸ್ವರಾಜ್‌ ಕಲ್ಪನೆಯಂತೆ ಎಲ್ಲಾ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಂಜಿವೀನಿ ಯೋಜನೆಗಾಗಿ 4.5 ಸಾವಿರ ಕೋಟಿ ಹಣ ಮೀಸಲಿಡಲಿಟ್ಟು 45 ಸಾವಿರ ಕೋಟಿಯನ್ನು ಬ್ಯಾಂಕ್‌ ಲಿಂಕ್‌ ಮಾಡಲಾಗಿದೆ.

ವೈಜ್ಞಾನಿಕ ಬೇಸಾಯಕ್ಕಾಗಿ ಹಲವಾರು ಯೋಜನೆಯ ಮೂಲಕ ತರಬೇತಿ ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನ ಸಧೃಡ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ಹಲವು ಕಾರ್ಯಕ್ರಮ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಿ. ಹೊಸದಾಗಿ ಸ್ತ್ರೀ ಸಾಮರ್ಥ್ಯ ಯೋಜನೆಗಾಗಿ 500 ಕೋಟಿ ರು. ಮೀಸಲಿಡಲಾಗಿದೆ. ರಾಜ್ಯದಿಂದ ಮೊದಲು -ಫಾಮ್‌ರ್‍ಲಾ ಆರಂಭವಾಗಿದ್ದು ಬೆಳೆಗಾರ-ಬಳಕೆದಾರನ ನಡುವೆ ದಲ್ಲಾಳಿಗಳ ಸೋಂಕಿಲ್ಲದೆ ಸರ್ಕಾರ ಕೆಲಸ ಮಾಡುತ್ತಿದ್ದು ಕೃಷಿ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಕರ್ನಾಟಕ ರಾಜ್ಯ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಆಯುಕ್ತ ಪ್ರದೀಪ್‌, ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್‌, ಗ್ರಾಪಂ ಅಧ್ಯಕ್ಷೆ ಕವಿತಾ ನಾಗರಾಜು, ಭೂಮಿಕಾ, ಜನಮುಖಿ ಸಂಸ್ಥೆ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಲ್‌.ಸಿ.ನಾಗರಾಜು, ಮಂಡಲಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಮುಖಂಡರಾದ ಶ್ರೀಧರ್‌, ವಕೀಲ ಭರತ್‌ ಭೂಷಣ್‌ರೆಡ್ಡಿ ಹಾಗೂ ಇತರರು ಇದ್ದರು.

ಬಾಕ್ಸ್‌

ತರಬೇತಿ ಪಡೆದು ಅಭಿವೃದ್ಧಿಯಾಗಿ: ಸಿಇಒ

ಜಿ.ಪಂ. ಸಿಇಓ ಡಾ.ವಿದ್ಯಾಕುಮಾರಿ ಮಾತನಾಡಿ, ಈ ಗಡಿಭಾಗ ಶೈಕ್ಷಣಿಕವಾಗಿ ಉತ್ತಮ ವಾತಾವರಣ ಕಲ್ಪಿಸಲು ಸಚಿವರು ಈ ಭಾಗಕ್ಕೆ ಸರ್ಕಾರಿ ಪಾಲಿಟೆಕ್ನಿಕ್‌ ನೀಡಿದ್ದಾರೆ. ಇದರಲ್ಲಿ ಕೌಶಲ್ಯಾಭಿವೃದ್ಧಿ, ಕುಶಲ ವೃತ್ತಿಗಳು ನಡೆಯಲಿದ್ದು, ನಿರುದ್ಯೋಗ ನಿವಾರಣೆ ಹಾಗೂ ಉದ್ಯೋಗ ಮಾರ್ಗದರ್ಶನ ಸಿಗಲಿದೆ. ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹಿಳಾ ಸಬಲೀಕರಣಕ್ಕಾಗಿ 30 ಕೋಟಿ ಅನುದಾನ ಬಂದಿದ್ದು ಗ್ರಾಮೀಣ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 16 ಸಾರಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿದ್ದು, ಮಧುಗಿರಿಯಲ್ಲಿ 2138 ಗುಂಪುಗಳಿದ್ದು ಹಲವಾರು ತರಬೇತಿ ಪಡೆದು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದರು. 

click me!