ಕಳೆದ 5ವರ್ಷಗಳಿಂದ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಶಾಸಕರ ಸರ್ವಾಧಿಕಾರಿ ಧೋರಣೆಯಿಂದ ನೊಂದಿರುವ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದು ನಮ್ಮ ಅಭ್ಯರ್ಥಿ ಕೆ. ಷಡಕ್ಷರಿ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ತಿಳಿಸಿದರು.
ತಿಪಟೂರು : ಕಳೆದ 5ವರ್ಷಗಳಿಂದ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಶಾಸಕರ ಸರ್ವಾಧಿಕಾರಿ ಧೋರಣೆಯಿಂದ ನೊಂದಿರುವ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದು ನಮ್ಮ ಅಭ್ಯರ್ಥಿ ಕೆ. ಷಡಕ್ಷರಿ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ತಡಸೂರು ಗ್ರಾಮ ಪಂಚಾಯಿತಿಯ ಸಿದ್ದರಾಮದೇವರಪಾಳ್ಯದಲ್ಲಿ ಮತಯಾಚನೆ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದÜರು.
undefined
ಕಾಂಗ್ರೆಸ್ ಪಕ್ಷದಿಂದ ಮನೆ ಮನೆಗೆ ಮತಪ್ರಚಾರ ನಡೆಯುತ್ತಿದ್ದು ನಾವು ಎಲ್ಲೇ ಹೋದರೂ ಕಾಂಗ್ರೆಸ್ ಪಕ್ಷದ ಜನಪರ ಆಡಳಿತ ಹಾಗೂ ಈ ಬಾರಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಒಲವು ಬೆಳೆಸಿಕೊಂಡಿದ್ದು ಅಧಿಕಾರ ಸಿಕ್ಕ ಕೇವಲ ಮೂರು ತಿಂಗಳೊಳಗೆ ಗ್ಯಾರಂಟಿ ಯೋಜನೆಗಳು ಜಾರಿಯಾಗಲಿವೆ. ಮಹಿಳೆಯರು, ಅಂಗವಿಕಲರು, ನಿರುದ್ಯೋಗ ಯುವಕರಿಗೆ, ರೈತರಿಗೆ ಹಲವು ಯೋಜನೆಗಳನ್ನು ತರುವ ಚಿಂತನೆ ನಡೆಸಲಾಗಿದ್ದು ಎಲ್ಲಾ ವರ್ಗದ ಅಭ್ಯುದಯವನ್ನು ನಮ್ಮ ಪಕ್ಷ ಮಾಡುತ್ತಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ನಮ್ಮ ಸರ್ಕಾರ ಈ ಹಿಂದೆ ಮಾಡಿದ್ದ ಸಾಧನೆಗಳನ್ನು ಇಟ್ಟು ಧೈರ್ಯದಿಂದ ಮತ ಕೇಳಿ ಅಭ್ಯರ್ಥಿಯ ಗೆಲುವಿಗೆ ಸಹಕರಿಸಬೇಕೆಂದರು.
ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ನಾನು ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ದುಡಿದ ಫಲವಾಗಿ ನನಗೆ ಈ ಬಾರಿಯೂ ಟಿಕೆಟ್ ಲಭಿಸಿದೆ. ನಾನು ಶಾಸಕನಾಗಿದ್ದಾಗ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನತೆಗೆ ನನ್ನ ಮೇಲೆ ವಿಶ್ವಾಸವಿದ್ದು, ಈ ಬಾರಿಯೂ ನನಗೆ ಅವಕಾಶ ಕೊಡುತ್ತಾರೆಂಬ ನಂಬಿಕೆ ಇದೆ. ತಾಲೂಕು ಮತ್ತಷ್ಟುಅಭಿವೃದ್ಧಿಯಾಗಬೇಕಾದರೆ ಮತ್ತೊಮ್ಮೆ ನನಗೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಡಸೂರು ಗ್ರಾ.ಪಂನ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಚಂದ್ರಪ್ರಭ ಲೋಕೇಶ್, ಲೋಕೇಶ್, ಬನ್ನಿಹಳ್ಳಿ ಶಶಿ, ಹಾಲಿ ಬಿಜೆಪಿ ಬೆಂಬಲಿತ ಸದಸ್ಯರಾದ ಸಿದ್ದರಾಮದೇವರಪಾಳ್ಯದ ಚಟ್ನಹಳ್ಳಿ, ಗಂಗಮ್ಮ ಬಸವರಾಜ್, ತಡಸೂರಿನ ರೇಣುಕಯ್ಯ, ಬೆಸುಗೆ ನಟರಾಜು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ರಾಮಚಂದ್ರಪುರ, ಕಲ್ಲಳ್ಳಿ, ಬನ್ನಿಹಳ್ಳಿ ಬೋವಿ ಕಾಲೋನಿ, ಚಟ್ನಹಳ್ಳಿಯ 50ಕ್ಕೂ ಹೆಚ್ಚು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಾಂಗ್ರೆಸ್ ಮುಖಂಡ ಮಾದಿಹಳ್ಳಿ ಪ್ರಕಾಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.