ಜಿಲ್ಲೆಯಲ್ಲಿನ 432 ಮದ್ಯದಂಗಡಿಗಳಲ್ಲಿ ಆನ್‌ಲೈನ್ ಪಾವತಿಯನ್ನು ಉತ್ತೇಜಿಸುವ ಸಂಬಂಧ ಎಲ್ಲ ಮದ್ಯದಂಗಡಿಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಕಡ್ಡಾಯಗೊಳಿಸುವಂತೆ ಜಿಲ್ಲಾ ಅಬಕಾರಿ ಆಯಕ್ತರಿಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ನಿರ್ದೇಶನ ನೀಡಿದರು.
ತುಮಕೂರು : ಜಿಲ್ಲೆಯಲ್ಲಿನ 432 ಮದ್ಯದಂಗಡಿಗಳಲ್ಲಿ ಆನ್‌ಲೈನ್ ಪಾವತಿಯನ್ನು ಉತ್ತೇಜಿಸುವ ಸಂಬಂಧ ಎಲ್ಲ ಮದ್ಯದಂಗಡಿಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಕಡ್ಡಾಯಗೊಳಿಸುವಂತೆ ಜಿಲ್ಲಾ ಅಬಕಾರಿ ಆಯಕ್ತರಿಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ನಿರ್ದೇಶನ ನೀಡಿದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ರ ಸಂಬಂಧ ಜಿಲ್ಲೆಗೆ ಆಗಮಿಸಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರುಗಳೊಂದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಆಗಮಿಸಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರುಗಳನ್ನು ಸ್ವಾಗತಿಸಿದ ಜಿಲ್ಲಾಧಿಕಾರಿಗಳು, ಚುನಾವಣಾ ವೀಕ್ಷಕರ ಸಲಹೆಯ ಮೇರೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
undefined
ಮತದಾರರು ಬಿಸಿಲಿನಲ್ಲಿ ಬಸವಳಿಯದಂತೆ ಮತಗಟ್ಟೆಗಳ ಬಳಿ ಶಾಮಿಯಾನ, ಪೆಂಡಾಲ್ ವ್ಯವಸ್ಥೆ, ಪಿಡ್ಲ್ಯೂಡಿ ಮತದಾರರು ಮತ್ತು 80 ವರ್ಷ ಮೇಲ್ಪಟ್ಟಮತದಾರರ ಮತದಾನ ಗೌಪ್ಯತೆ, ಮತಗಟ್ಟೆಗಳ ಬಳಿ ಬಿಎಲ್‌ಓಗಳ ಮಾಹಿತಿ ಅಳವಡಿಕೆ ಮುಂತಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪರಿಚಯ ಮಾಡಿಕೊಟ್ಟಜಿಲ್ಲಾಧಿಕಾರಿಗಳು ತುಮಕೂರು ಜಿಲ್ಲೆಯ ಜನಸಂಖ್ಯೆ 2023ರಲ್ಲಿ 2798935 ಇದ್ದು, ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ 75.14ರಷ್ಟಿದ್ದು, ಪುರುಷ ಸಾಕ್ಷರತೆ 82.8 ಹಾಗೂ ಮಹಿಳಾ ಸಾಕ್ಷರತೆ 67.4 ಇದ್ದು, ಒಟ್ಟು ಮತದಾರರು 2247932 ಇದ್ದು, ಪುರುಷ ಮತದಾರರು 1120698, ಮಹಿಳಾ ಮತದಾರರು 1127126 ಇದ್ದಾರೆ ಹಾಗೂ ಜಿಲ್ಲೆಯ ಇಪಿ ರೇಷಿಯೋ 78.59ರಷ್ಟಿರುತ್ತದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 29023 ಅಂಗವಿಕಲ ಮತದಾರರಿದ್ದು, ಏ. 20, 2023 ರಲ್ಲಿದ್ದಂತೆ 50131 ಯುವ ಮತದಾರರಿದ್ದು, 80+ ಮತದಾರರು 55876ರಷ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 507 ಕ್ರಿಟಿಕಲ್ ಮತಗಟ್ಟೆಗಳಿದ್ದು, ಜಿಲ್ಲೆಯ 1343 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ಸಭೆ, ಐಟಿ ನೋಡಲ್ ಅಧಿಕಾರಿಗಳ ಸಭೆ, ಇವಿಎಂ ಜಾಗೃತಿ ಸಭೆ, ಸೆಕ್ಟರ್ ಅಧಿಕಾರಿಗಳ ಸಭೆ, ಎಫ್‌ಎಸ್‌ಸಿ/ವಿಎಸ್‌ಟಿ/ವಿವಿಟಿ/ಎಸ್‌ಓ ಸಭೆ ಹಾಗೂ ಎಲ್ಲಾ ನೋಡಲ್ ಅಧಿಕಾರಿಗಳ ಸಭೆಗಳನ್ನು ಜರುಗಿಸಲಾಗಿದೆ. ಜಿಲ್ಲೆಯಲ್ಲಿ ಅಂತರ ರಾಜ್ಯ 12, ಅಂತರ ಜಿಲ್ಲಾ 17 ಸೇರಿದಂತೆ ಒಟ್ಟು 45 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ.ಕೆ. ವಿದ್ಯಾಕುಮಾರಿ ಅವರು ಜಿಲ್ಲೆಯಲ್ಲಿ ಕೈಗೊಳ್ಳಲಾದ ಸಮಗ್ರ ಸ್ವೀಪ್ ಚಟುವಟಿಕೆಗಳ ಕುರಿತು ವೀಕ್ಷಕರಿಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು ಜಿಲ್ಲೆಯಲ್ಲಿ ಕೈಗೊಳ್ಳಲಾದ ಸಮಗ್ರ ಪೊಲೀಸ್ ಬಂದೋಬಸ್‌್ತ ಕುರಿತು ಪೊಲೀಸ್ ವೀಕ್ಷಕರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
2683 ಮತಗಟ್ಟೆಗಳಲ್ಲಿ ಸಿದ್ಧತೆ
ಜಿಲ್ಲೆಯಲ್ಲಿ ಒಟ್ಟು 2683 ಮತಗಟ್ಟೆಗಳಿದ್ದು, 11 ವಿಧಾನಸಭಾ ಕ್ಷೇತ್ರಗಳಿಗೆ 11 ಚುನಾವಣಾಧಿಕಾರಿಗಳು, 12 ಎಆರ್‌ಓಗಳು, 232 ಸೆಕ್ಟರ್ ಅಧಿಕಾರಿಗಳು, 2683 ಬಿಎಲ್‌ಓಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ, ಮಾಧ್ಯಮ ಸಮನ್ವಯ, ಮಾನವ ಸಂಪನ್ಮೂಲ ನಿರ್ವಹಣೆ, ಇವಿಎಂ ನಿರ್ವಹಣೆ, ತರಬೇತಿ, ಚುನಾವಣಾ ಸಾಮಗ್ರಿಗಳ ನಿರ್ವಹಣೆ, ಎಂಸಿಸಿ ಮುಂತಾದ ಚುನಾವಣಾ ಕಾರ್ಯಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.