ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಶ್ರಮಿಸುತ್ತಾ ಭ್ರಷ್ಟಾಚಾರ ವಿರುದ್ದ ಶಿಸ್ತುಬದ್ದವಾಗಿ ಹೋರಾಡುತ್ತಿರುವ ಪಕ್ಷವೆಂದರೆ ಅದು ಕೆ.ಆರ್.ಎಸ್. ಪಕ್ಷವೆಂದು ಜನತೆಗೂ ತಿಳಿದಿದ್ದು ಈ ಬಾರಿ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಪಕ್ಷ ಸಮಿತಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾನು 85ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇನೆಂದು ಗಂಗಾಧರ್ ಕರೀಕೆರೆ ವಿಶ್ವಾಸ ವ್ಯಕ್ತಪಡಿಸಿದರು.
ತಿಪಟೂರು : ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಶ್ರಮಿಸುತ್ತಾ ಭ್ರಷ್ಟಾಚಾರ ವಿರುದ್ದ ಶಿಸ್ತುಬದ್ದವಾಗಿ ಹೋರಾಡುತ್ತಿರುವ ಪಕ್ಷವೆಂದರೆ ಅದು ಕೆ.ಆರ್.ಎಸ್. ಪಕ್ಷವೆಂದು ಜನತೆಗೂ ತಿಳಿದಿದ್ದು ಈ ಬಾರಿ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಪಕ್ಷ ಸಮಿತಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾನು 85ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇನೆಂದು ಗಂಗಾಧರ್ ಕರೀಕೆರೆ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮತಯಾಚನೆ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಗಂಗಾಧರ್, ಈಗಾಗಲೇ ತಾಲೂಕಿನಾದ್ಯಂತ ಬಿರುಸಿನ ಮತಪ್ರಚಾರ ನಡೆಯುತ್ತಿದ್ದು ನಾನು ಚುನಾವಣೆಯಲ್ಲಿ ಹಣ, ಹೆಂಡ, ಕುಕ್ಕರ್, ಸೀರೆ ಹಂಚುತ್ತೇನೆಂದು ಯಾವುದೇ ಆಸೆ, ಆಮಿಷಗಳನ್ನು ಜನರಲ್ಲಿ ಹೇಳಿಲ್ಲ. ಸ್ವತಃ ನಾನೆ ಜನರಿಂದ ದೇಣಿಗೆ ಸಂಗ್ರಹಿಸುತ್ತಾ ಮತಪ್ರಚಾರದಲ್ಲಿ ತೊಡಗಿದ್ದೇನೆ ಎಂದರು.
ತಾಲೂಕಿನಲ್ಲಿ 2ನೇ ಸುತ್ತಿನ ಮತಯಾಚನೆ ನಡೆಯುತ್ತಿದ್ದು ಜನರು ಸಹ ನಮ್ಮ ಪಕ್ಷದ ಮೇಲೆ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ತಾಲೂಕು ಕಚೇರಿ ಮುಂದೆ ರೈತರಿಗಾಗಿ ಜನಸ್ಪಂಧನ ಕಾರ್ಯಕ್ರಮವನ್ನು ಮಾಡಿ ನೂರಾರು ರೈತರಿಗೆ ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಟ್ಟಿದ್ದೇನೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಜನರಿಂದ ಲಂಚ ವಸೂಲಿ ಮಾಡುತ್ತಿದ್ದನ್ನು ಖಂಡಿಸಿ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದೇನೆ. ಈಗಲೂ ಅಧಿಕಾರಿಗಳಲ್ಲಿ ಕೆಆರ್‌ಎಸ್ ಪಕ್ಷ ಎಂದರೆ ಒಂದು ರೀತಿಯ ಭಯದ ಭಾವನೆ ಉಂಟಾಗಲಿದೆ ಎಂದರು.
ತಿಪಟೂರು ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಮೋಟಾರ್ ಸೈಕಲ್ ರಾರಯಲಿ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯವಿಲ್ಲದ ಕಡೆ ಪ್ರತಿಭಟನೆ ಮಾಡಿ ಬಸ್ ವ್ಯವಸ್ಥೆ ಕಲ್ಪಿಸಿದ್ದೇನೆ. ಇಂತಹ ಹಲವಾರು ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮಾಡಿರುವ ನನಗೆ ತಾಲೂಕಿನ ಜನತೆ ಆಶೀರ್ವಾದವಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಆಡಳಿತವನ್ನು ನೋಡಿರುವ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಈ ಪಕ್ಷಗಳಿಂದ ರಾಜ್ಯದ ಜನರಿಗೆ ನೆಮ್ಮದಿ ಇಲ್ಲ. ಮತಹಾಕುವವರೆಗೂ ಮಾತ್ರ ಮನೆ ಬಾಗಿಲಿಗೆ ಬರುತ್ತಾರೆ. ಅಧಿಕಾರ ಬಂದ ನಂತರ ಜನತೆ ಕಷ್ಟಸುಖಗಳಲ್ಲಿ ಭಾಗಿಯಾಗುವುದಿಲ್ಲ. ಇದನ್ನೆಲ್ಲಾ ನೋಡಿರುವ ಜನತೆ ರೋಸಿ ಹೋಗಿದ್ದು ಕೆಆರ್‌ಎಸ್ ಪಕ್ಷಕ್ಕೆ ಒಮ್ಮೆ ಅಧಿಕಾರ ಕೊಡಬೇಕೆಂದು ತೀರ್ಮಾನಿಸಿದ್ದಾರೆ ಎಂದರು.
ಈ ಬಾರಿ ನಮ್ಮ ಪಕ್ಷದಿಂದ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಪಕ್ಷದ ತತ್ವ ಸಿದ್ದಾಂತದಂತೆ ಚುನಾವಣಾ ಪ್ರಣಾಳಿಕೆಯಲ್ಲಿರುವ ವಿಷಯಗಳನ್ನು ಜನರಿಗೆ, ಮನೆಮನೆಗಳಿಗೆ ತಲುಪಿಸಲಾಗುತ್ತಿದ್ದು ಭ್ರಷ್ಟಾಚಾರ, ಅವ್ಯವಸ್ಥೆ, ದೌರ್ಜನ್ಯಗಳಿಂದ ಜನರಿಗೆ ಮುಕ್ತಿಕೊಡಿಸಿ ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದ್ದು, ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕಾರಣವನ್ನು ಪ್ರತಿಪಾದಿಸಿ ನುಡಿದಂತೆ ನಡೆಯುತ್ತಿರುವ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿ ನನಗೊಂದು ಅವಕಾಶ ಕಲ್ಪಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.