ಚುನಾವಣೆ ಬೆನ್ನಲ್ಲೇ ಮುಖಂಡರು ಕೈ ಸೇರ್ಪಡೆ : ಯಾರೇ ಬಂದರೂ ಸ್ವಾಗತ ಎಂದ ನಾಯಕ

Kannadaprabha News   | Asianet News
Published : Nov 14, 2021, 02:24 PM ISTUpdated : Nov 14, 2021, 02:34 PM IST
ಚುನಾವಣೆ ಬೆನ್ನಲ್ಲೇ ಮುಖಂಡರು ಕೈ ಸೇರ್ಪಡೆ : ಯಾರೇ ಬಂದರೂ ಸ್ವಾಗತ ಎಂದ ನಾಯಕ

ಸಾರಾಂಶ

ಕಾಂಗ್ರೆಸ್‌ ಪಕ್ಷದ ತತ್ವ ಸಿದ್ದಾಂತ ಮತ್ತು ಜನ ಪರವಾದ ಕೆಲಸಗಳನ್ನು ಮೆಚ್ಚಿ ಪಕ್ಷಕ್ಕೆ ಯಾರೆ ಬಂದರು ಅವರಿಗೆ ಸದಾ ಸ್ವಾಗತ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿಕೆ

ಕೆ.ಆರ್‌. ನಗರ (ನ.14): ಕಾಂಗ್ರೆಸ್‌ (Congress) ಪಕ್ಷದ ತತ್ವ ಸಿದ್ದಾಂತ ಮತ್ತು ಜನ ಪರವಾದ ಕೆಲಸಗಳನ್ನು ಮೆಚ್ಚಿ ಪಕ್ಷಕ್ಕೆ ಯಾರೆ ಬಂದರು ಅವರಿಗೆ ಸದಾ ಸ್ವಾಗತವಿದೆ ಎಂದು ಕೆಪಿಸಿಸಿ (KPCC) ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ ಹೇಳಿದರು.

ಪಟ್ಟಣದ ಮುಳ್ಳೂರು ರಸ್ತೆಯ ಬ್ಲಾಕ್‌ ಕಚೇರಿಯಲ್ಲಿ ಜೆಡಿಎಸ್‌ (JDS) ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ನರಚನಹಳ್ಳಿ ಗ್ರಾಪಂ ಸದಸ್ಯ ಮೋಹನ್‌ ಅವರ ಬೆಂಬಲಿಗರು ಮತ್ತು ಸಾಲಿಗ್ರಾಮ, ಮಿರ್ಲೆ, ವಡ್ಡರಕೊಪ್ಪಲು, ಹಳೆಮಿರ್ಲೆ ಹಾಗೂ ಹನುಮನಹಳ್ಳಿ. ಕೆಡಗ ಮಾವನೂರು ಗ್ರಾಮಗಳ ನೂರಾರು ಮಂದಿಯನ್ನು ಸ್ವಾಗತಿಸಿ ಮಾತನಾಡಿದರು.

ನಮ್ಮೆಲ್ಲರ ಮುಖ್ಯ ಉದ್ದೇಶ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ (Election) ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದ್ದು ಆ ದಿಸೆಯಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕು. ಎಲ್ಲರೂ ಕೈ ಜೋಡಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಡಿ. ರವಿಶಂಕರ್‌ ಗೆಲುವು ನಿಶ್ಚಿತ. ಇಂದಿನ ಉತ್ಸಾಹ ನಿರಂತರವಾಗಿರಬೇಕು. ಆಗ ಮಾತ್ರ ಚುನಾವಣೆಯನ್ನು ಎದುರಿಸಿ ಜಯ ಸಾಧಿಸಲು ಸಾಧ್ಯ ಹಾಗಾಗಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾದವರು ಮತ್ತು ಈವರೆಗೆ ಪಕ್ಷದಲ್ಲಿ ಸಕ್ರಿಯರಾಗಿ ಇರುವವರು ಒಗ್ಗಟ್ಟಿನಿಂದ ಯೋಧರಂತೆ (soldiers) ದುಡಿಯಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಾಂಗ್ರೆಸ್‌ ಮುಖಂಡ ಸಿ.ಪಿ. ರಮೇಶ್‌ ಕುಮಾರ್‌ ಮಾತನಾಡಿ, ಬಿಜೆಪಿ (BJP) ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಲು ನಿರ್ಧರಿಸಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪಷ್ಠ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನರಚನಹಳ್ಳಿ ಗ್ರಾಪಂ ಸದಸ್ಯ ವಡ್ಡರಕೊಪ್ಪಲು ಮೋಹನ್‌ ಸೇರಿದಂತೆ ಅವರ ನೂರಾರು ಬೆಂಬಲಿಗರು ಮತ್ತು ವಿವಿಧ ಗ್ರಾಮಗಳ ಜೆಡಿಎಸ್‌ ಮುಖಂಡರು ಮತ್ತು ಯುವಕರು ಕೆಪಿಸಿಸಿ (KPCC) ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ ಮತ್ತು ತಾಲೂಕು ಕಾಂಗ್ರೆಸ್‌ ಮುಖಂಡ ಸಿ.ಪಿ. ರಮೇಶ್‌ ಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಮಹದೇವ್‌, ಉದಯಕುಮಾರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಎಂ.ಜೆ. ರಮೇಶ್‌, ತಾಲೂಕು ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ನಂದೀಶ್‌, ಸಾಮಾಜಿಕ ಜಾಲತಾಣದ ಮುಖ್ಯಸ್ಥ ನವೀನ್‌ರಂಗಶೆಟ್ಟಿ, ವಕ್ತಾರ ಸೈಯದ್‌ ಜಾಬೀರ್‌, ನರಚನಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್‌, ಮಾಜಿ ಅಧ್ಯಕ್ಷ ಸ್ವಾಮೀಗೌಡ, ತಾಪಂ ಮಾಜಿ ಸದಸ್ಯ ನಟರಾಜು, ಮುಖಂಡರಾದ ತಿಪ್ಪೂರು ರಾಜೇಗೌಡ, ರಾಚಪ್ಪಾಜಿ, ಅಶ್ವಥ್‌ನಾರಾಯಣ, ಕಂಠಿ, ರಾಜೇಗೌಡ ಮೊದಲಾದವರು ಇದ್ದರು.

ಕಾಂಗ್ರೆಸ್ ಸೇರ್ಪಡೆ : 

ಜೆಡಿಎಸ್‌ನ (JDS) ಮಾಜಿ ಸಚಿವ ಸಿ.ಚನ್ನಿಗಪ್ಪ (c chennigappa) ಅವರ ಹಿರಿ ಮಗ ಹಾಗೂ ಹಾಲಿ ತುಮಕೂರು (Tumakur) ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಸಹೋದರ ಡಿಸಿ ಅರುಣ್ ಕುಮಾರ್ ಹಾಗೂ ತಮ್ಮ ವೇಣುಗೋಪಾಲ್ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.

'ಮತ್ತಷ್ಟು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ : ಸ್ವಾಗತಿಸಿದ ಮಾಜಿ ಡಿಸಿಎಂ'

ಜೆಡಿಎಸ್‌ನ ಮಾಜಿ ಜನಪ್ರಿಯ ಸಚಿವರಾದ ಸಿ. ಚನ್ನಿಗಪ್ಪನವರು ಕೊರಟಗೆರೆ ತಾಲೂಕಿನಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆಯೊಂದಿಗೆ ಕೊರಟಗೆರೆ ಮನೆ ಮಗನಾಗಿ ಸತತ ಜನರ ಸೇವೆ ಮಾಡುತ್ತಾ ಜನ ಬೆಂಬಲದೊಂದಿಗೆ ಹಲವು ಖಾತೆಗಳ ಮೂಲಕ ಜನಪ್ರಿಯರಾಗಿದ್ದರು. ಅಂಥ ನಮ್ಮ ತಂದೆ ಆಶಯದಂತೆ ಕೊರಟಗೆರೆ ತಾಲೂಕಿನಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಪ್ರಾರಂಭಿಸಲಾಗುವುದು ಎಂದು ಇಂಗಿತ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ