'ಶ್ರೀಕಿಗೆ ಬೇಲ್‌ ಕೊಡಿಸಿದ್ದು ಬಿಜೆಪಿ ಪ್ರಮುಖರೊಬ್ಬರ ಆಪ್ತ'

Kannadaprabha News   | Asianet News
Published : Nov 14, 2021, 12:53 PM ISTUpdated : Nov 14, 2021, 01:13 PM IST
'ಶ್ರೀಕಿಗೆ ಬೇಲ್‌ ಕೊಡಿಸಿದ್ದು ಬಿಜೆಪಿ ಪ್ರಮುಖರೊಬ್ಬರ ಆಪ್ತ'

ಸಾರಾಂಶ

 ಜನಧನ್‌ ಖಾತೆಯಿಂದ ಹಣ ಕದಿಯುವ ಶ್ರೀಕಿಗೆ ಬೇಲ್‌ ಕೊಡಿಸಿದ್ದು ಬಿಜೆಪಿ ಪ್ರಮುಖರೊಬ್ಬರ ಆಪ್ತ ಬಿಜೆಪಿ ಪ್ರಮುಖರೊಬ್ಬರ ಆಪ್ತ ಪ್ರಸಿದ್ಧ್ ಶೆಟ್ಟಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪ

 ಮೈಸೂರು (ನ.14):  ಜನಧನ್‌ ಖಾತೆಯಿಂದ (Jandhan Account) ಹಣ ಕದಿಯುವ ಶ್ರೀಕಿಗೆ ಬೇಲ್‌ ಕೊಡಿಸಿದ್ದು ಬಿಜೆಪಿ (BJP) ಪ್ರಮುಖರೊಬ್ಬರ ಆಪ್ತ ಪ್ರಸಿದ್ಧ್ ಶೆಟ್ಟಿ (Prasid shetty) ಎಂದು ಕೆಪಿಸಿಸಿ (KPCC) ವಕ್ತಾರ ಎಂ. ಲಕ್ಷ್ಮಣ್‌ (M laxman) ಆರೋಪಿಸಿದರು.

ಬಿಟ್‌ ಕಾಯಿನ್‌ (bitcoin) ಎಂಬ ಡಿಜಿಟಲ್‌ ಕರೆನ್ಸಿಯ ಬೆಲೆ 73 ಲಕ್ಷ. ಆದರೆ ಭಾರತದಲ್ಲಿ (India) ಬಿಟ್‌ ಕಾಯಿನ್‌  ಚಾಲ್ತಿಯಲ್ಲಿ ಇಲ್ಲ. ಈ ವಿಚಾರವನ್ನು ಕಾಂಗ್ರೆಸ್‌ (Congress) ಗಂಭೀರವಾಗಿ ತೆಗೆದುಕೊಂಡಿದ್ದು, ನಳಪಾಡ್‌ ಪ್ರಕರಣದಲ್ಲಿ ಆತನಿಗೆ ಜಾಮೀನು (Bail) ಕೊಡಿಸಿದ್ದು ನಳಿನ ಕುಮಾರ್‌ ಕಟೀಲ್‌ (Nalin kumar kateel) ಆಪ್ತ ಎಂಬುದು ಆತಂಕಕಾರಿ ಸಂಗತಿ.

 ಶ್ರೀಕಿಯೇ ಬರೆದಿರುವ ಪತ್ರದಲ್ಲಿ ತನ್ನಿಂದ ಜನಧನ್‌ ಖಾತೆಯಿಂದ ಹಣ (Money) ಲಪಟಾಯಿಸಲಾಗಿದೆ. ಕೇಂದ್ರ ಸರ್ಕಾರದ (Govt Of India) ಖಾತೆಯಿಂದ 6 ಸಾವಿರ ಕೋಟಿ ಮತ್ತು ರಾಜ್ಯ ಸರ್ಕಾರದ (Karnataka govt) ಖಾತೆಯಿಂದ 2 ಸಾವಿರ ಕೋಟಿ ಲಪಟಾಯಿಸಲಾಗಿದೆ. ಹೀಗೆ ಶ್ರೀಕಿಯನ್ನು ಒಂದು ತಿಂಗಳ ಅವಧಿಗೆ ಬಿಡ್‌ ತೆಗೆದುಕೊಳ್ಳಲಾಗುತ್ತಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಬಿಟ್‌ ಕಾಯಿನ್‌ ಅಕ್ರಮ ದಂಧೆಯಲ್ಲಿ ಬಿಜೆಪಿ (BJP) ನಾಯಕರ ಪಾತ್ರ ಇರುವ ಬಗ್ಗೆ ಕಾಂಗ್ರೆಸ್‌ (Congress) ಪಕ್ಷ ದಾಖಲೆಗಳ ಸಂಗ್ರಹದಲ್ಲಿ ತೊಡಗಿದೆ. ಪ್ರತಿಯೊಂದಕ್ಕೂ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುವುದನ್ನು ಬಿಜೆಪಿ (BJP) ಬಿಡಬೇಕು. ಪ್ರಸಿದ್ದ ಶೆಟ್ಟಿಗೂ ಬಿಜೆಪಿ ನಾಯಕರಿಗೆ ಇರುವ ಸಂಬಂಧವೇನು ಎಂಬುದು ತಿಳಿಸಬೇಕು. ಈ ದಂಧೆಯಲ್ಲಿ ಪೊಲೀಸರು (Police) ಭಾಗಿಯಾಗಿರುವ ಆರೋಪ ಇರುವುದರಿಂದ ಸುಪ್ರಿಂ ಕೋರ್ಟ್‌ನ (Supreme Court) ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

ಈ ಪ್ರಕರಣ ಅಮೆರಿಕಾದಲ್ಲಿ (America) ಬಾರಿ ಸದ್ದು ಮಾಡಿದ್ದು, ಬೈಡನ್‌ ಅವರು ಮೋದಿ (Narendra modi) ಅವರಿಗೆ ಪ್ರಕರಣದ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಶ್ರೀಕಿಯನ್ನು ಸ್ಟಾರ್‌ ಹೊಟೇಲ್‌ನಲ್ಲಿ (Star Hotel) ಇರಿಸಲಾಗುತ್ತಿತ್ತು. ಆತನಿಗೆ ತಿಂಗಳಿಗೆ 60 ಲಕ್ಷ ಖರ್ಚು ಮಾಡಲಾಗುತ್ತಿತ್ತು. ಕೂಡಲೇ ಶ್ರೀಕಿ ವಿರುದ್ಧ ಎಫ್‌ಐಆರ್‌ (FiR) ದಾಖಲಿಸಬೇಕು ಮತ್ತು ಬಿಟ್‌ ಕಾಯಿನ್‌ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ ಇದ್ದರು.

ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ :   ರಾಜ್ಯ ರಾಜಕೀಯದಲ್ಲಿ (politics) ತೀವ್ರ ಸಂಚಲನ ಸೃಷ್ಟಿಸಿರುವ ಬಿಟ್‌ಕಾಯಿನ್‌ (Bitcoin) ಹಗರಣವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ. ಸ್ವತಂತ್ರ ಭಾರತದ (India) 75 ವರ್ಷಗಳ ಇತಿಹಾಸದಲ್ಲೇ (History) ಇದೊಂದು ಬಹುದೊಡ್ಡ ಹಗರಣವಾಗಿದ್ದು (Scam), ಈ ಕುರಿತು ಸುಪ್ರೀಂ ಕೋರ್ಟ್‌ (Supreme court) ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್‌ಐಟಿ (SIT) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ (Congress) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep surjewala) ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ(Delhi)  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಟ್‌ ಕಾಯಿನ್‌ (bitcoin) ಹಗರಣಕ್ಕೆ ಸಂಬಂಧಿಸಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು. ಕರ್ನಾಟಕದಲ್ಲಿ ಭಾರತದ ಅತಿದೊಡ್ಡ ಬಿಟ್‌ಕಾಯಿನ್‌ ಹಗರಣ ಬೆಳಕಿಗೆ ಬಂದಿದೆ. ಇದೊಂದು ಅಂತಾರಾಷ್ಟ್ರೀಯ ಹಗರಣ. ಈ ಹಗರಣದ ಕುರಿತು ನ್ಯಾಯಯುತ ತನಿಖೆ ನಡೆಸುವ ಬದಲು ರಾಜ್ಯ ಬಿಜೆಪಿ (bJp) ಸರ್ಕಾರವು ಅದನ್ನು ಮುಚ್ಚಿಹಾಕುವ ಕಾರ್ಯಾಚರಣೆಗಿಳಿದಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಇದು ಕೇವಲ ಅಕ್ರಮ ಹಣ (Money) ವರ್ಗಾವಣೆಯ ಪ್ರಕರಣವಷ್ಟೇ ಅಲ್ಲ, ಅದರ ಜತೆಗೆ ಅಂತಾರಾಷ್ಟ್ರೀಯ ಅಪರಾಧವೂ ಹೌದು. ಈ ಕುರಿತು ಇ.ಡಿ(ಜಾರಿ ನಿರ್ದೇಶನಾಲಯ) ಹಾಗೂ ಕರ್ನಾಟಕ ಪೊಲೀಸರು ನ್ಯಾಯಸಮ್ಮತ ತನಿಖೆ ನಡೆಸಲಿದ್ದಾರೆಂಬ ವಿಶ್ವಾಸ ಇಲ್ಲ. ಹೀಗಾಗಿ ಈ ಹಗರಣದ ಹಿಂದಿನ ಸತ್ಯ ಬಯಲಿಗೆಳೆಯಲು ಎಸ್‌ಐಟಿ(ವಿಶೇಷ ತನಿಖಾ ತಂಡ) ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದ ಅವರು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ರಚನೆಯಾಗುವ ಎಸ್‌ಐಟಿಯಲ್ಲಿ ಇಂಟರ್‌ಪೋಲ್‌, ರಿಸವ್‌ರ್‍ ಬ್ಯಾಂಕ್‌ ಅಧಿಕಾರಿಗಳು ಹಾಗೂ ಇತರೆ ತಜ್ಞರು ಇರಬೇಕು ಎಂದು ಹೇಳಿದರು.

PREV
Read more Articles on
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!