ಶೀಘ್ರ ಹಲವು ಬಿಜೆಪಿ-ಜೆಡಿಎಸ್‌ ಮುಖಂಡರು ಕಾಂಗ್ರೆಸ್ : ಅಸಮಾಧಾನವು ಬಹಿರಂಗ

By Kannadaprabha News  |  First Published Oct 14, 2021, 12:30 PM IST
  • ಸಾಕಷ್ಟು ಶಾಸಕರು, ಕಾರ್ಯಕರ್ತರು ಬಿಜೆಪಿ, ಜೆಡಿಎಸ್, ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬರುವುದು ಖಚಿತ
  • ಕಾಂಗ್ರೆಸ್ ಕಮಿಟಿಯಲ್ಲಿ ಇದರ ಬಗ್ಗೆ ಚರ್ಚೆಗಳು ನಡೆದ ನಂತರ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ 

ತುಮಕೂರು (ಅ.14): ರಾಜಕೀಯವಾಗಿ (Politics) ರಾಜ್ಯದಲ್ಲಿ ಸಾಕಷ್ಟು ಶಾಸಕರು, ಕಾರ್ಯಕರ್ತರು ಬಿಜೆಪಿ (BJP), ಜೆಡಿಎಸ್ (JDS), ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬರುವುದು ಖಚಿತವಾಗಿದೆ. 

ತುಮಕೂರು (Tumakuru) ಜಿಲ್ಲೆಯಲ್ಲಿಯು ಸಹ ಸಾಕಷ್ಟು ಶಾಸಕರು ಬರುತ್ತಾರೆ. ಆದರೆ ಈಗ ಯಾರು ಬರುತ್ತಾರೆ. ಯಾರ ಹೆಸರನ್ನು ಸಹ ನಾವು ಹೇಳುವುದಿಲ್ಲ. ಕಾಂಗ್ರೆಸ್ (Congress) ಕಮಿಟಿಯಲ್ಲಿ ಇದರ ಬಗ್ಗೆ ಚರ್ಚೆಗಳು ನಡೆದ ನಂತರ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಶಾಸಕ ಡಾ ಜಿ.ಪರಮೇಶ್ವರ್ (Dr G Parameshwar) ತಿಳಿಸಿದರು. 

Tap to resize

Latest Videos

ಜೆಡಿಎಸ್‌ ಪಾಳಯದ ಪ್ರಭಾವಿ ಪತಿ-ಪತ್ನಿ ಕಾಂಗ್ರೆಸ್ಗೆ : ಸಿದ್ದರಾಮಯ್ಯ ನಿವಾಸದಲ್ಲೇ ಸೇರ್ಪಡೆ

ತಾಲೂಕಿನ ಬಿದರೆ ಹಳ್ಳಕಾವಲ್‌ನಲ್ಲಿ ನಿರ್ಮಾ ಣವಾಗುತ್ತಿರುವ ಎಚ್.ಎ.ಎಲ್ (HAL) ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಸ್ಥಳೀಯರಿಗೆ ಉದ್ಯೋಗ (job) ನೀಡುವಂತೆ ಒತ್ತಾಯ ಮಾಡಿದರು.

 ಮುಂದಿನ ವರ್ಷದ ಜುಲೈ ವೇಳೆಗೆ ನರೇಂದ್ರ ಮೋದಿಯವರೇ (PM Narendra Modi) ಎಚ್.ಎ.ಎಲ್ ಘಟಕ ಉದ್ಘಾಟನೆ ಮಾಡಲಿದ್ದಾರೆ. 5 ವರ್ಷದ ಹಿಂದೆ ಪ್ರಧಾನ ಮಂತ್ರಿ ಮೋದಿಯವರು ಎಚ್.ಎ.ಎಲ್ ಘಟಕಕ್ಕೆ ಭೂಮಿ ಪೂಜೆ ಮಾಡಿದ್ದರು. ಈಗಾಗಲೇ 5 ವರ್ಷ ಕಳೆದರು ಉದ್ಘಾಟನೆಯಾಗಿಲ್ಲ. ಹಾಗಾಗಿ ಇದರ ಬಗ್ಗೆ ಮಾಹಿತಿಯನ್ನು ಪಡೆದಿದ್ದು 2022 ಜೂನ್ ವೇಳೆಗೆ ಉದ್ಗಾಟನೆಯ ಭರವಸೆ ಸಿಕ್ಕಿದೆ ಎಂದು ತಿಳಿಸಿದರು. 

ಬಹುತೇಕ ಎಲ್ಲಾ ಕಾಮಗಾರಿಗಳು ಘಟಕದಲ್ಲಿ ಮುಗಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ನಮ್ಮ ಜಿಲ್ಲೆಯಲ್ಲಿ ಘಟಕ ನಿರ್ಮಾ ಣವಾಗಿರುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಹಾಗಾಗಿ ಈ ಜಿಲ್ಲೆಯ ನಿರುದ್ಯೋಗಿಗಳು ತಾಂತ್ರಿ ಕ,ಐ.ಟಿ,ಐ (ITI), ಡಿಪ್ಲೋಮೋ (Diploma), ಇನ್ನಿತರೆ ಪದವಿಗಳು ಶಿಕ್ಷಣ (Graduation) ಪಡೆದವರಿಗೆ ಹೆಚ್ಚು ಕೆಲಸಗಳು ಇಲ್ಲಿ ಪಡೆಯ ಬಹುದಾಗಿದ್ದು, ವಿದ್ಯಾರ್ಥಿಗಳು (Students) ಉದ್ಯೋಗ ವಿನಿಮಯ ಕೇಂದ್ರದಲ್ಲಿ ತಮ್ಮ ನೋಂದಾವಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಘಟಕಕ್ಕೆ ಇನ್ನೂ 500 ಎಕರೆಯಷ್ಟು ಜಾಗದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದು ಮುಂದಿನ ದಿನದಲ್ಲಿ ಇದೇ ಜಾಗದಲ್ಲಿ ಏರ್ ಕ್ರಾಫ್ಟ್ (Air Craft) ಕೂಡ ನಡೆಯುವಂತಹ ಸಾಧ್ಯತೆ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು. 

ಸಿದ್ದು-ಬಿಎಸ್‌ವೈ ಕದ್ದುಮುಚ್ಚಿ ಭೇಟಿ: ಇದಕ್ಕೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ

ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ್ ಹಾಲಪ್ಪ (Muralidara halappa) ಮಾತನಾಡಿ, ಜಿಲ್ಲೆಯ ಎಸ್ ಎಸ್‌ಎಲ್‌ಸಿ(SSLC) ,ಐಟಿಐ (ITI) ಹಾಗೂ ಡಿಪ್ಲೋಮಾ ವಿದ್ಯಾ ರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡುವುದರ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂ ಲವಾಗುವಂತೆ ಕೆಲಸಗಳನ್ನು ಮಾಡಿಕೊಡಬೇಕಾ ಗುತ್ತದೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಶಾಸಕರಾದ ರಂಗನಾಥ್, ಶಾಸಕ ವೆಂಕಟರಮಣಪ್ಪ, ಎಂ.ಎಲ್ ಸಿ ಕಾಂತ ರಾಜು,ಮಾಜಿ ಶಾಸಕರಾದ ಷಡಕ್ಷರಿ, ಶಫಿ ಅಹ್ಮದ್, ಲಿಡಕರ್ ಮಾಜಿ ಅದ್ಯಕ್ಷ ರಾಮಕೃಷ್ಣ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಜಿಪಂ ಮಾಜಿ ಸದಸ್ಯ ಸಿದ್ದರಾಮಯ್ಯ, ತಾಲೂಕು ಮುಖಂಡರಾದ ಶ್ರೀನಿವಾಸ್‌ವೀರಣ್ಣಗೌಡ, ದಿನೇಶ್, ಶಿವಕುಮಾರ್, ಭರತ್‌ಗೌಡ, ಮಂಜುನಾಥ್ ಹಾಜರಿದ್ದರು.  

ಇತ್ತ ಹಲವರ ಅಸಮಾಧಾನವೂ ಬಹಿರಂಗ

ಇತ್ತ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಇನ್ನು ತುರುವೆಕೆರೆ ಶಾಸಕ ಮಸಾಲ ಜಯರಾಮ್ ಕೂಡ ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಪರಮೇಶ್ವರ್ ಹೇಳಿಕೆ ಪಕ್ಷಾಂತರಕ್ಕೆ ಪುಷ್ಠಿ ನೀಡಿದಂತಿದೆ.

click me!